ಬೆಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶ, ಜೀವಸತ್ವವಿದೆ. ದಿನದಲ್ಲಿ ಒಂದು ಸಣ್ಣ ತುಂಡು ಬೆಂಡೆಕಾಯಿ ಸೇವಿಸಿದರೂ ಸಾಕು. ಆರೋಗ್ಯ ವೃದ್ಧಿಯಾಗುತ್ತದೆ. ಇನ್ನು ಮುಂದೆ ಮಾರ್ಕೆಟ್ ಹೋದರೆ ಅಪ್ಪಿ ತಪ್ಪಿಯೂ ಬೆಂಡೆಕಾಯಿ ಮಿಸ್ ಮಾಡಬೇಡಿ.. ಬೆಂಡೆಕಾಯಿ ಸೇವನೆಯಿಂದ ಇಷ್ಟೆಲ್ಲ ಉಪಯೋಗವಿದೆ….
ಡಯಾಬಿಟಿಸ್:
ನಿತ್ಯ ಬೆಂಡೆಕಾಯಿ ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ. ಡಯಾಬಿಟಿಸ್’ಗೆ ಇದು ಬೆಸ್ಟ್ ಮನೆಮದ್ದು.
ಕೆಮ್ಮು:
ಬೆಂಡೆಕಾಯಿಯನ್ನು ಚಿಕ್ಕ ಚಿಕ್ಕ ಹೋಳು ಮಾಡಿಕೊಂಡು ಅದಕ್ಕೆ ಹೆಚ್ಚು ಸಕ್ಕರೆ ಹಾಕಿಕೊಂಡು ಬಿಸಿ ಮಾಡಬೇಕು. ಆಗ ಬೆಂಡೆಕಾಯಿ ಲೋಳೆ ಅಂಶ ಬಿಡುತ್ತದೆ. ಆ ಲೋಳೆಯನ್ನು ಸೇವಿಸಬೇಕು. ಕೆಮ್ಮು ನಿವಾರನೆಯಾಗುತ್ತದೆ.
ಸುಕ್ಕು:
ಬೆಂಡೆಕಾಯಿಯಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ. ಸುಕ್ಕು,ಮೊಡವೆ ಮುಂತಾದವುಗಳು ಸಂಭವಿಸದಂತೆ ತಡೆಯುತ್ತವೆ.
ಮಲಬದ್ಧತೆ:
ಬೆಂಡೆಕಾಯಿಯನ್ನು ದಿನವೂ ಬೆಳಗ್ಗೆ ಸೇವಿಸಿ ಒಂದು ಕಪ್ ಬಿಸಿ ನೀರು ಸೇವಿಸಬೇಕು. ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಲೈಂಗಿಕ:
ದಿನವೂ ರಾತ್ರಿ ಮಲಗುವ ಮುನ್ನ ಎಳೆಯ ಬೆಂಡೆಕಾಯಿಯನ್ನು ಕತ್ತರಿಸಿ ಕಲ್ಲುಸಕ್ಕರೆಯೊಂದಿಗೆ ಸೇವಿಸಿ, ಹಾಲು ಕುಡಿಯಬೇಕು. ಇದರಿಂದ ಲೈಂಗಿಕ ಶಕ್ತಿ ವೃದ್ಧಿಸುತ್ತದೆ.
ಕೊಲೆಸ್ಟ್ರಾಲ್:
ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ಬೆಂಡೆಕಾಯಿ ಸೇವನೆ ತಡೆಯುತ್ತದೆ.