ಬಿಪಿ ಲೋ ಆದರೂ ಸಮಸ್ಯೆಯೇ ಬಿಪಿ ಕಡಿಮೆ ಆದರೂ ಸಮಸ್ಯೆ ತಪ್ಪಿದ್ದಲ್ಲ. ಯಾವಾಗಲೂ ಬಿಪಿ ಒಂದೇ ಸಮನಾಗಿ ಇರಬೇಕು. 30 ದಾಟುತ್ತಿದ್ದಂತಯೇ ಇಂತಹ ಬಿಪಿ ಸಮಸ್ಯೆಗಳು ಬರುತ್ತವೆ ಹಾಗಾಗಿ ಆಗಾಗ ವೈದ್ಯರಲ್ಲಿ ಬಿಪಿ ಪರೀಕ್ಷೆ ಮಾಡಿಸುತ್ತಿರಬೇಕು. ಬಿಪಿ ಹೆಚ್ಚು ಕಡಿಮೆ ಆದರೆ ತಕ್ಷಣ ಗೊತ್ತಾಗುತ್ತದೆ. ಇದಕ್ಕೆ ಮುಂದಿನ ಕ್ರಮ ತೆಗೆದುಕೊಳ್ಳಬಹುದು. ಲೋ ಬಿಪಿ ಸಮಸ್ಯೆಗೆ ಇಲ್ಲಿದೆ ಪವರ್ ಫುಲ್ ಮನೆಮದ್ದು.
ಉಪ್ಪು:
ಉಪ್ಪಿನಲ್ಲಿ ಅಯೋಡಿನ್ ಅಂಶ ಇರುವುದರಿಂದ ಹೆಚ್ಚು ಹೆಚ್ಚು ಉಪ್ಪನ್ನು ಸೇವಿಸಬೇಕು. ಇದು ಲೋ ಬಿಪಿ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಬ್ಲಾಕ್ ಕಾಫಿ:
ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿಯುವುದರಿಂದಲೂ ಕೂಡ ಲೋ ಬಿಪಿ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ದಿನಕ್ಕೆ ಒಮ್ಮೆ ಬ್ಲಾಕ್ ಕಾಫಿ ಕುಡಿದರೂ ಸಾಕು.
ಕ್ಯಾರೆಟ್, ಬಿಟ್ರೂಟ್ ಜ್ಯೂಸ್:
ದಿನವೂ ಕ್ಯಾರೆಟ್ ಅಥವಾ ಬಿಟ್ರೂಟ್ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಇದನ್ನು ಕುಡಿಯುವುದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ.
ತುಳಸಿ:
ತುಳಸಿ ಸೇವನೆ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡಲು ಸಹಾಯಮಾಡುತ್ತದೆ. ತುಳಸಿಯಲ್ಲಿ ವಿಟಮಿನ್ ಸಿ, ಪೊಟಾಷಿಯಂ, ಮೆಗ್ನಿಷಿಯಂ ಮುಂತಾದ ಸತ್ವಗಳು ಇರುವುದರಿಂದ ಮೆದುಳು ಮತ್ತು ದೇಹವನ್ನು ಸು:ಸ್ಥಿತಿಯಲ್ಲಿ ಇಡುತ್ತದೆ.
ಒಣದ್ರಾಕ್ಷಿ:
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಸೇವಿಸಿ ಒಂದು ಕಪ್ ನೀರನ್ನು ಕುಡಿದರೆ ಲೋ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ.