Thursday, July 7, 2022

Latest Posts

ಲ್ಯಾಂಡ್‌ಲೈನ್‌ನಿಂದ ಮೊಬೈಲ್’ಗೆ ಕರೆ ಮಾಡ್ತಿದ್ದೀರಾ? ಇನ್ನು ಬರಲಿದೆ ನ್ಯೂ ಸಿಸ್ಟಮ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಜನವರಿ 1ರಿಂದ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡುವ ವಿಧಾನವು ಸಂಪೂರ್ಣವಾಗಿ ಬದಲಾಗಲಿದೆ ಎಂದು  ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.

ಹೊಸ ನಿಯಮ ಏನೆಂದರೆ,  ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡುವಾಗ ಮೊದಲಿಗೆ  ಸೊನ್ನೆ (0) ಸೇರಿಸುವುದು ಕಡ್ಡಾಯ. ಸೊನ್ನೆ ಒತ್ತದೇ ಹಾಗೆಯೇ ಮೊಬೈಲ್ ಸಂಖ್ಯೆಯನ್ನು ಒತ್ತಿ ಕರೆ ಮಾಡಿದರೆ ಕಾಲ್ ಕನೆಕ್ಟ್ ಆಗುವುದಿಲ್ಲ. ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್​ ರೆಕಾರ್ಡ್​ ಪ್ಲೇ ಮಾಡುವಂತೆ ಇದಾಗಲೇ ನಿರ್ದೇಶನ ನೀಡಲಾಗಿದೆ. ಈ ನಿಯಮ ಹೊಸ ವರ್ಷದಿಂದ (ಜ.1) ಜಾರಿಯಾಗಲಿದೆ.

ಟೆಲಿಕಾಂ ಇಲಾಖೆಯು ನವೆಂಬರ್ 20 ರಂದು ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದು, ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವಾಗ ಡಯಲ್ ವಿಧಾನವನ್ನು ಬದಲಾಯಿಸಲು TRAI ಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ. ಟೆಲಿಕಾಮ್​​ ಸೇವೆಯಲ್ಲಿ ಸೂಕ್ತ ನಂಬರಿಂಗ್ ಸ್ಪೇಸ್​ ಸೃಷ್ಟಿಸುವ ಸಲುವಾಗಿ ಇಂಥದ್ದೊಂದು ಬದಲಾವಣೆ ಮಾಡಲಾಗಿದೆ ಎಂದು ಟ್ರಾಯ್​ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss