ಜಿನೀವಾ: ವಿಶ್ವವನ್ನು ಗಡಗಡ ನಡುಗಿಸಿದ ಮಹಾಮಾರಿ ಕೊರೋನಾ ಸೋಂಕಿನ ಮೂಲ ಕಾರಣ ಪ್ರಾಣಿಗಳೇ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಚೀನಾದ ವುಹಾನ್ ಪಿ 4 ಲ್ಯಾಬೋರೇಟರಿಯಿಂದ ಸೋಂಕು ಹರಡಿಲ್ಲ ಎಂದು ಒತ್ತಿ ಹೇಳಿದೆ.
ತನ್ನ ಬಳಿ ಪುರಾವೆಗಳಿವೆ
ಖಂಡಿತವಾಗಿಯೂ ಪ್ರಾಣಿಗಳಿಂದಲೇ ಸೋಂಕು ಹರಡಿದೆ ಎನ್ನಲು ತನ್ನ ಬಳಿ ಪುರಾವೆಗಳಿವೆ. ಆದರೆ ಇದು ಪ್ರಪಂZಕ್ಕೆ ಮೊದಲು ಹರಡಿದವರು ಯಾರು ಎಂಬುದನ್ನು ಹೇಳುವುದು ಕಷ್ಟ. ಬಾವಲಿಗಳ ಮೂಲಕವೂ ಈ ಸೋಂಕು ಹರಡುತ್ತದೆ. ಆದರೆ ಪ್ರಾಣಿಗಳ ಮೂಲಕ ಇದು ಮಾನವನಿಗೆ ಹರಡಿದ ಬಗ್ಗೆ ಇನ್ನೂ ಖಚಿತವಾದ ಆಧಾರಗಳು ತನಗೆ ಲಭಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ವಿವರಿಸಿದ್ದಾರೆ.