ಹೊಸ ದಿಗಂತ ಆನ್ಲೈನ್ ಡೆಸ್ಕ್:
ಭಾರೀ ಸಂಚಲನ ಮೂಡಿಸಿರುವ ‘ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣ’ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಮಂಜೇಶ್ವರ ಶಾಸಕ ಎಂ. ಸಿ. ಖಮರುದ್ದೀನ್ನನ್ನು ವಿಶೇಷ ತನಿಖಾ ತಂಡ ತೀವ್ರ ತನಿಖೆಗೊಳಪಡಿಸಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ.
ಈಗಾಗಲೇ ೧೧೬ ಮಂದಿ ‘ವಂಚನೆ’ ಬಗ್ಗೆ ದೂರು ನೀಡಿದ್ದು, ಇದರ ಬೆನ್ನಿಗೇ ಕಮರುದ್ದೀನ್ ವಿರುದ್ಧ ಇನ್ನಷ್ಟು ಕೇಸುಗಳನ್ನು ಹೂಡಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯದ ಆದೇಶದ ಬಳಿಕ ಆರೋಪಿ ಕಮರುದ್ದೀನ್ನನ್ನು ಎರಡು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿರುವ ತನಿಖಾ ತಂಡ, ಠೇವಣಿದಾರರ ಹಣ ಬಳಸಿ ಬೆಂಗಳೂರಿನಲ್ಲಿ ಸ್ಥಳ ಖರೀದಿಸಿರುವ ಬಗ್ಗೆ ಹಾಗೂ ಆಸ್ತಿ ಸಂಪಾದನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.