ಕಾಸರಗೋಡು: ಸೌದಿ ಅರೇಬಿಯಾದ ಜಿಡ್ಡಾದಿಂದ ಏರ್ ಇಂಡಿಯಾ ವಿಮಾನದ ಮೂಲಕ 152 ಮಂದಿ ಭಾರತೀಯರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದಿದ್ದಾರೆ.
ಇದು ಮೊದಲನೇ ಹಂತದ ಕೊನೆಯ ವಿಮಾನವಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಮೂವರು ನವಜಾತ ಶಿಶುಗಳು ಹಾಗೂ 31 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 152 ಮಂದಿ ಭಾರತೀಯರು ಕೇರಳ ರಾಜ್ಯ ತಲುಪಿದ್ದಾರೆಂದು ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.