Saturday, July 2, 2022

Latest Posts

ವಂದೇ ಭಾರತ್ ಮಿಷನ್| 4.45 ಲಕ್ಷ ಮಂದಿ ತಾಯ್ನಾಡಿಗೆ ವಾಪಸ್: 4ನೇ ಹಂತ ಪ್ರಾರಂಭ

ಹೊಸದಿಲ್ಲಿ: ಕೊರೋನಾ ವ್ಯಾಪಕವಾಗುತ್ತಿದ್ದ ವಿದೇಶದಲ್ಲಿದ್ದ ಭಾರತೀಯರನ್ನು ಆಭರತಕ್ಕೆ ಕರೆತರಲು ಪ್ರಾರಂಭಿಸಿದ್ದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ 4.45 ಲಕ್ಷ ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸುಮಾರು 190 ಸಾವಿರ ಮಂದಿ ನಾಗರಿಕರನ್ನು ಭಾರತಕ್ಕೆ ಮರಳಿ ತರಲು ಮುಂದಾದ ಭಾರತ ವಂದೇ ಭಾರತ್ ಮಿಷನ್  ಪ್ರಾರಂಭಿಸಲಾಗಿತ್ತು. ಆದರೆ ವಿದೇಶಗಳಿಂದ ಭಾರತಕ್ಕೆ ಮರಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತರ ಭಾರತವು ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಮೇ 6ರಿಂದ ಸುಮಾರು 4.45 ಲಕ್ಷ ಮಂದಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ ಬಂದಿದ್ದು, ಚಾರ್ಟರ್ಡ್ ವಿಮಾನಗಳ ಮೂಲಕ 2.75 ಲಕ್ಷ ಮಂದಿ ಭಾರತ್ಕೆ ಬಂದಿಳಿದ್ದಿದ್ದಾರೆ.

ಜುಲೈ 1ರಿಂದ ನಾಲ್ಕನೇ ಹಂತ ಪ್ರಾರಂಭವಾಗಿದ್ದು, ಇಂದು ದುಬೈ, ಮಸ್ಕತ್, ಬೆಹ್ರೈನ್, ಸಿಂಗಪೂರ್, ಅಬುದಾಬಿ, ಶಾರ್ಜಾ ದೇಶಗಳಿಂದ ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳಿ ಬರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss