ವೊಡಾಫೋನ್ ಐಡಿಯಾಗೆ‌ ಈ ವರ್ಷ 73,878 ಕೋಟಿ ನಷ್ಟ

0
88

ನವದೆಹಲಿ: ದೇಶದ ಮೂರನೇ ಅತಿ ದೊಡ್ಡ ದೂರಸಂಪರ್ಕ ಸೇವಾಧಾರ ಸಂಸ್ಥೆ ವೊಡಾಫೋನ್‌ ಐಡಿಯಾ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 73,878 ಕೋಟಿ ನಷ್ಟ ಅನುಭವಿಸಿದೆ. ಭಾರತದ ಯಾವುದೇ ಕಂಪನಿ ದಾಖಲಿಸಿರುವುದಕ್ಕಿಂತ ಅತಿ ಹೆಚ್ಚು ನಷ್ಟದ ಪ್ರಮಾಣವನ್ನು ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ 51,400 ಕೋಟಿ ಬಾಕಿ ಪಾವತಿಸಬೇಕಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಗೆ ಒಟ್ಟು 11,643.5 ಕೋಟಿ ನಷ್ಟ ಆಗಿರುವುದಾಗಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 4,881.9 ಕೋಟಿ ನಷ್ಟ ವರದಿಯಾಗಿತ್ತು. 2019ರ ಅಕ್ಟೋಬರ್‌-ಡಿಸಂಬರ್‌ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ 6,438.8 ಕೋಟಿ ಇತ್ತು.

2016-17ನೇ ಹಣಕಾಸು ವರ್ಷದ ವರೆಗೂ ಕಂಪನಿಯ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ 58,254 ಕೋಟಿ ಎಂದು ದೂರಸಂಪರ್ಕ ಇಲಾಖೆ ಅಂದಾಜಿಸಿದೆ.

ಆದರೆ, ವೊಡಾಫೋನ್‌ ಐಡಿಯಾ 46,000 ಬಾಕಿ ಇರುವುದಾಗಿ ಲೆಕ್ಕ ನೀಡಿದೆ. ಒಟ್ಟು ಬಾಕಿ ಪೈಕಿ ಕಂಪನಿ 6,854.4 ಕೋಟಿ ಪಾವತಿಸಿದೆ.

ದೂರಸಂಪರ್ಕ ಸೇವೆ ಕಾರ್ಯಾಚರಣೆಗಳ ಮೂಲಕ ಜೂನ್‌ ತ್ರೈಮಾಸಿಕದಲ್ಲಿ 11,754.2 ಕೋಟಿ ವರಮಾನ ದಾಖಲಾಗಿದೆ. 2018-19ನೇ ಹಣಕಾಸು ವರ್ಷದಲ್ಲಿ ವೊಡಾಫೋನ್‌ ಐಡಿಯಾದ ನಷ್ಟ 14,603.9 ಕೋಟಿ ಇತ್ತು. 2019-20ರಲ್ಲಿ ಒಟ್ಟು ನಷ್ಟ 73,878.1 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆಗಳಿಂದ ಗಳಿಸಿದ ವರಮಾನ 44,957.5 ಕೋಟಿ.

2019ರ ಡಿಸೆಂಬರ್‌ನಿಂದ ಪ್ರೀಪೇಯ್ಡ್‌ ಬಳಕೆ ವೆಚ್ಚ ಹೆಚ್ಚಿಸಿರುವುದರಿಂದ ವರಮಾನದಲ್ಲಿ ತ್ರೈಮಾಸಿಕ ಶೇ 6ರಷ್ಟು ಏರಿಕೆಯಾಗಿರುವುದಾಗಿ ಕಂಪನಿ ತಿಳಿಸಿದೆ.

LEAVE A REPLY

Please enter your comment!
Please enter your name here