Saturday, July 2, 2022

Latest Posts

ವಯನಾಡಿನಲ್ಲಿ ನೀರಿನ ಮೂಲಕ ಹರಡಿದ ಶಿಗೆಲ್ಲ ರೋಗ: ಅಧ್ಯಯನ ವರದಿ ಪ್ರಕಟ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದ ವಯನಾಡು ಜಿಲ್ಲೆಯ ಕೋಟ್ಟಪ್ಪರಂಬ್ ಪ್ರದೇಶದಲ್ಲಿ ಶಿಗೆಲ್ಲ ರೋಗ ಹರಡಿರುವುದು ನೀರಿನ ಮೂಲಕದಿಂದ ಎಂದು ಸರಕಾರಿ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಕಲ್ ವಿಭಾಗದ ಪ್ರಾಥಮಿಕ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಶಿಗೆಲ್ಲ ರೋಗ ಬಾಧಿಸಿ ಮೃತಪಟ್ಟ ಹನ್ನೊಂದರ ಹರೆಯದ ಬಾಲಕನ ಮರಣಾನಂತರ ಕಾರ್ಯಕ್ರಮದಲ್ಲಿ ವಿತರಿಸಿದ ನೀರಿನ ಮೂಲಕ ರೋಗ ಹರಡಿದೆಯೆಂದು ತಿಳಿದು ಬಂದಿದೆ. ಆದರೆ ಕೋಟ್ಟಪ್ಪರಂಬ್ ಪ್ರದೇಶಕ್ಕೆ ಸಿಗೆಲ್ಲ ಬ್ಯಾಕ್ಟೀರಿಯ ಹೇಗೆ ತಲುಪಿದೆ ಎಂಬುವುದನ್ನು ಇನ್ನೂ ಪತ್ತೆ ಹಚ್ಚಲಾಗಲಿಲ್ಲ. ಆದ್ದರಿಂದ ಈ ಪ್ರದೇಶದಲ್ಲಿ ಒಂದು ವಾರ ಕಾಲ ಅಧ್ಯಯನ ನಡೆಯಲಿದೆ ಎಂದು ತಂಡವು ತಿಳಿಸಿದೆ.
ಶಿಗೆಲ್ಲ ಸೋನಿ ವಿಭಾಗಕ್ಕೆ ಸೇರಿದ ಬ್ಯಾಕ್ಟೀರಿಯ ಈ ರೋಗಕ್ಕೆ ಕಾರಣವಾಗಿದೆ. ಇದರ ಪ್ರಮಾಣ ಹೆಚ್ಚಿದಾಗ ರೋಗ ಸಮಸ್ಯೆ ಉಲ್ಭಣಿಸುತ್ತದೆ. ಕೋಟ್ಟಪ್ಪರಂಬ್ ಪ್ರದೇಶದಲ್ಲಿ 52 ಮಂದಿಯಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ. ಕೋಟ್ಟಪ್ಪರಂಬ್ ನಿಂದ ಸಂಗ್ರಹಿಸಿದ ನೀರಿನಾಂಶವಿರುವ ಆಹಾರ ವಸ್ತುಗಳ ಪರಿಶೀಲನೆ ವರದಿ ಲಭಿಸಿದ ಬಳಿಕವೇ ರೋಗಕ್ಕೆ ಸ್ಪಷ್ಟ ಕಾರಣ ತಿಳಿಯಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss