Sunday, June 26, 2022

Latest Posts

ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು ನೀವೇಕೆ ಹೀಗೆ ಸಿದ್ದರಾಮಯ್ಯನವರೆ? : ಸಚಿವ ಸಿ.ಟಿ. ರವಿ ಪ್ರಶ್ನೆ

ಬೆಂಗಳೂರು: ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಸಚಿವ ಸಿ.ಟಿ. ರವಿ ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ವಯಸ್ಸಾದಮೇಲೆ ಪ್ರಬುದ್ಧತೆ ಹೆಚ್ಚಬೇಕು, ಮನಸ್ಸು ಪಕ್ವ ಆಗಬೇಕು ಆದರೆ ನೀವೇಕೆ ಹೀಗೆ ಆಡುತ್ತಿದ್ದೀರಿ? ಸಂಘ ಪರಿವಾರದಿಂದ ಕೊಲೆ ನಡೆದಿದೆ ಎಂದು ನಿಮಗೆ ಮೊದಲೇ ತಿಳಿದಿದ್ದರೆ ಆಗ ಸುಮ್ಮನೆ ಏಕೆ ಕುಳಿತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಸಂಘ ಪರಿವಾರವನ್ನು ಟೀಕಿಸುವ ಭರದಲ್ಲಿ ದೇಶ ಒಡೆಯುತ್ತಿದ್ದೀರಿ. ಇಂಥ ಕೆಲಸ ಮಾಡಿ ಪಾಪ ಕಟ್ಟಿಕೊಳ್ಳಬೇಡಿ, ಅದು ನಿಮ್ಮನ್ನೇ ಹಾಳು ಮಾಡುತ್ತದೆ ಎಂದಿದ್ದಾರೆ.
ಸಂಘದ ಬಗ್ಗೆ ನಿಮಗೇನು ತಿಳಿದಿದೆ? ಎಂದಾದರೂ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ? ದೂರದಲ್ಲಿ ನಿಂತು ಟೀಕೆ ಮಾಡುವುದು ಸುಲಭ ಎಂದಿದ್ದಾರೆ.
ಸಂಘದಲ್ಲಿ ಯಾರನ್ನೂ ಹತ್ಯೆ ಮಾಡಿ ಎಂದು ಹೇಳಿಕೊಡುವುದಿಲ್ಲ. ಇಲ್ಲಿ ದೇಶಭಕ್ತಿ ಸಂಸ್ಕಾರಕ್ಕೆ ಬೆಲೆ ಇದೆ.ಟೀಕೆ ಮಾಡಿದವರನ್ನೆಲ್ಲಾ ಸಂಘ ಹತ್ಯೆ ಮಾಡಿದ್ದರೆ ಎಷ್ಟು ಜನ ಉಳಿದಿರುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ರಾಜಕೀಯ ಕೆಸರೆರೆಚಾಟಕ್ಕೆ ನಮ್ಮ ಸಂಘವನ್ನು ಬಳಸಬೇಡಿ. ದೇಶಭಕ್ತ ಸಂಘಟನೆ ಬಗ್ಗೆ ಸುಳ್ಳು ಮಾತನಾಡದಿದ್ದರೆ ಒಳ್ಳೆಯದು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss