Saturday, June 25, 2022

Latest Posts

ವರದಿಗಾರರು ಕೇಳೋ ಉದ್ಧಟತನದ ಪ್ರಶ್ನೆಗಳಿಗೆ ಮಾಧ್ಯಮಗಳ ವಿರುದ್ಧ ಟ್ರಂಪ್ ಗುರ್..!!

ವಾಷಿಂಗ್‌ಟನ್: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಿತ್ಯವೂ ವೈಟ್‌ಹೌಸ್ ಪತ್ರಿಕಾ ಸಂದರ್ಶನಕ್ಕೆ ಹಾಜರಾಗುತ್ತಿದ್ದ ಡೊನಾಲ್ಡ್ ಟ್ರಂಪ್ ಮಾಧ್ಯಮಗಳ ವಿರುದ್ದ ಬೇಸರದಲ್ಲಿದ್ದಂತಿದೆ.
ಎಂದಿನ ಮಾಧ್ಯಮಗೋಷ್ಠಿಗೆ ನಿನ್ನೆ ಹಾಜರಾಗದ ಟ್ರಂಪ್, ಕೆಲ ವರದಿಗಾರರು ಕೇಳೋ ಉದ್ಧಟತನದ ಪ್ರಶ್ನೆಗಳಿಗೆ ನಾನಲ್ಲಿ ಉತ್ತರ ಕೊಡಬೇಕೇ ? ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಮತ್ತು ಸ್ಥಳೀಯ ಟಿವಿ ಚಾನಲ್ ಒಂದು, ಟ್ರಂಪ್ ಕಾರ್ಯವೈಖರಿಯನ್ನು ಟೀಕಿಸಿ ವರದಿ ಮಾಡುತ್ತಿರುವುದು ಅವರ ಸಹನೆಗೆಡಿಸಿದೆ. ಅಲ್ಲದೆ ಕೆಲವೊಂದು ಪ್ರಶ್ನೆಗಳು ಟ್ರಂಪ್ ಅವರನ್ನು ಪೇಚಿಗೆ ಸಿಲುಕಿಸಿದ್ದು, ಕಳೆದ ವಾರ ಎರಡು ಮೂರು ಸಾರಿ ಇವರು ತಾಳ್ಮೆಗೆಟ್ಟು ಮಾಧ್ಯಮ ಗೋಷ್ಠಿಯಲ್ಲಿಯೇ ಸಿಡಿದಿದ್ದರು. ಶುಕ್ರವಾರದಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ ಟ್ರಂಪ್ ವರದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸದೆ ಹಾಗೆಯೇ ವೈಟ್‌ಹೌಸ್‌ನಿಂದ ನಿರ್ಗಮಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss