ಯಾದಗಿರಿ : ಕಳೆದ ರಾತ್ರಿಯಿಂದ ಸುರಿದ ಮಳೆಯಿಂದ ಜಿಲ್ಲೆಯ ಸುರಪುರ ತಾಲೂಕಿನ ಹೊಲವೊಂದರಲ್ಲಿ ವ್ಯಕ್ತಿಯೋರ್ವ ಹಾಕಿಕೊಂಡಿದ್ದ ಕುರಿ ದೊಡ್ಡಿಗೆ ಸಿಡಿಲು ಬಡಿದ ಪರಿಣಾಮ ಸುಮಾರು 25 ಕ್ಕು ಅಧಿಕ ಕುರಿಗಳು ಸಾವನ್ನಪ್ಪಿದರೆ, ಸತ್ಯಂಪೇಟೆ ಗ್ರಾಮ ಜಲಾವೃತತ್ತಗೊಂಡು ಜನಜೀವನ ತೊಂದರೆಗೆ ಈಡಾಗಿದೆ.
ಕಳೆದ ಒಂದು ವಾರದಿಂದ ಮಳೆಯಿಲ್ಲದೆ ನಿರಾಳಗೊಂಡ ಜನರು ವಾಯು ಬಾತ ಕುಸಿತದಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಅನೇಕ ಅವಾಂತರಗಳನ್ನು ಸೃಷ್ಠಿಸಿದ್ದು, ವಾಶಣಿಜ್ಯ ಬೆಳೆಗಳ ಮೇಲೆ ದುಷಪರಿಣಾಮ ಬೀರಿದ್ದು ಅನ್ನದಾತರನ್ನು ಚಿಂತೆಯ ಮಡಿಳಲ್ಲಿ ಸಿಲುಕಿಸಿದೆ.
ಅದೃಷ್ಟವಶಾತ್ ಕುರಿಗಾಯಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿಗಳು ಸಣ್ಣ ತಿಪ್ಪಣ್ಣ ಪುರ್ಲೆ ಎಂಬುವರಿಗೆ ಸೇರಿದ್ದಾಗಿವೆ.
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲ ಮನೆಗಳು ಜಲಾವೃತ್ತಗೊಂಡು ಕೆಲವು ಮನೆಗಳು ಜಖಂಗೊಂಡಿವೆ. ಇನ್ನು ಕೆಲವು ಮನೆಗಳು ಹಾಗೂ ಶೆಡ್ಗಳ ಒಳಗಡೆ ನೀರು ತುಂಬಿಕೊಂಡಿದೆ.
ಇನ್ನು ಗ್ರಾಮದ ನಾಗಮ್ಮ ಹಾಗೂ ಶೇಖರಮ್ಮ ಇವರ ಮನೆಗಳು ಸಂಪೂರ್ಣ ನೀರು ನಿಂತಿದ್ದು, ಜೀವನ ನಡೆಸಲು ಪರದಾಡುತ್ತಿದ್ದು, ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
ಇನ್ನು ಗ್ರಾಮದ ಕೆಲ ಜನರು ಜೀವ ಕೈ ಹಿಡಿದು ಕುಳಿತಿದ್ದಾರೆ. ಏಕೆಂದರೆ ಕೆಲ ಮಣ್ಣಿನ ಮನೆಗಳು ಎಲ್ಲಿ ಬಿದ್ದು ಹೋಗುತ್ತೇವೆ ಎಂಬ ಆತಂಕದಲ್ಲಿದ್ದಾರೆ. ವರುಣನ ಆರ್ಭಟಕ್ಕೆ ಮನೆಗಳಿಗೆ ನೀರು ನುಗ್ಗಿದ್ದು ಒಂದೆಡೆಯಾದರೆ ರೈತರ ಬೆಳೆ ಕೂಡ ಹಾನಿಯಾಗಿದೆ.
ಶಹಾಪೂರ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಕೊಳ್ಳುರು ಗ್ರಾಮದಲ್ಲೂ ಸಹ ಕೆಲ ಮನೆಗಳು ಜಲಾವೃತ್ತಗೊಂಡಿವೆ. ಅಲ್ಲದೆ ಬಸವ ಸಾಗರದಲ್ಲಿ ಒಳಹರಿವು ಹೆಚ್ಚಾಗುತ್ತಿದ್ದು ನದಿಗೆ 26300 ಕ್ಯೂಸೆಕ ನೀರನ್ನು ಹರಿಬಿಡಲಾಗುತ್ತಿದೆ.
ಹವಾಮಾನ ವರದಿಯ ಪ್ರಕಾರ ಇನ್ನೂ ಮೂರು ದಿನ ಮಳೆ ಆಗುವ ಸಧ್ಯತೆ ಇದ್ದ್ದು ಅಲರ್ಟ ಘೋಷಣೆ ಮಾಡಲಾಗದೆ. ಈಗಾಗಲೆಜಿಲ್ಲೆಯಲ್ಲಿ ತೇವಾಂಸದ ಹೆಚ್ಚಳದಿಂದ ನೇಕ ವಾಣಿಜ್ಯ ಬೆಳೆಗಳು ಅಪಾರ ಹಾನಿ ಯಾದ ಹಿನ್ನೆಲಯಲ್ಲಿ ಈಗ ಸುರಿಯುತ್ತಿರುವ ಮಳೆಯಿಂದ ರೈಥರು ತೀವ್ರ ಆತಂಕದಲ್ಲಿ ಮುಳಗಿದ್ದಾರೆ.