Wednesday, August 17, 2022

Latest Posts

ವರ್ಕಾಡಿ-ಬಾಕ್ರಬೈಲು-ಮುಡಿಪು ಗಡಿ ರಸ್ತೆ ಸಂಚಾರಕ್ಕೆ ಅನುಮತಿ: ಬಿಜೆಪಿ ವರ್ಕಾಡಿ ಸಮಿತಿ ಪ್ರಯತ್ನ ಶ್ಲಾಘನೀಯ!

ಕಾಸರಗೋಡು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಕೇರಳ – ಕರ್ನಾಟಕ ಗಡಿ ಭಾಗವಾದ ವರ್ಕಾಡಿ – ಬಾಕ್ರಬೈಲು – ಮುಡಿಪು ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ವರ್ಕಾಡಿ ಬಿಜೆಪಿ ಪಂಚಾಯತ್ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಲ್ಲಿಸಿದ ಮನವಿಗೆ ಫಲಪ್ರದ ಉತ್ತರ ದೊರಕಿದೆ. ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರ ನೇತೃತ್ವದ ನಿಯೋಗವು ಸಚಿವರೊಂದಿಗೆ ಮಾತುಕತೆ ನಡೆಸಿದ್ದು , ಗಡಿ ರಸ್ತೆ ಸಂಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಪರಿಹಾರ ದೊರಕಿದೆ.
ಕಳೆದ ಮೂರು ತಿಂಗಳುಗಳಿಂದ  ಸಂಚಾರಕ್ಕೆ ಅಡ್ಡಿಯಾಗಿದ್ದ ನಿಯಮಗಳನ್ನು ಇದೀಗ ಸಡಿಲಗೊಳಿಸಿ ವರ್ಕಾಡಿ ಪರಿಸರದ ಸ್ಥಳೀಯ ಜನತೆಗೆ ದ್ವಿಚಕ್ರ ಹಾಗೂ ಆಟೋರಿಕ್ಷಾ ಸಂಚಾರಕ್ಕೆ ಜೂನ್ 23 ಮಂಗಳವಾರದಿಂದ ಅನುವು ಮಾಡಿಕೊಡುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಸಕಾರಾತ್ಮಕ ಸ್ಪಂದನೆ ನೀಡಿದ ಸಚಿವರು, ಮುಡಿಪು ಹಾಗೂ ವಿಟ್ಲ ಭಾಗಗಳಿಗೆ ದ್ವಿಚಕ್ರ ಹಾಗೂ ಆಟೋರಿಕ್ಷಾಗಳಲ್ಲಿ ತೆರಳಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ನೇತಾರರ ಈ ಪ್ರಯತ್ನಕ್ಕೆ ವರ್ಕಾಡಿಯ ನಾಗರಿಕ ಸಮಾಜವು ಅಭಿನಂದನೆ ಸಲ್ಲಿಸಿದೆ.
ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ , ಯುವಮೋರ್ಚಾ ಮಂಜೇಶ್ವರ ಮಂಡಲ ಕಾರ್ಯದರ್ಶಿ ಪ್ರಜ್ವಿತ್ ಶೆಟ್ಟಿ , ಹರೀಶ್ ಕನ್ನಿಗುಳಿ, ಪ್ರವೀಣ್ ಆಳ್ವ ,
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸತೀಶ್ ಕುಂಪಲ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!