ವರ್ಜೀನಿಯಾ| ಅಂಗಡಿ ಕಳ್ಳರ ಈ ಟ್ರಿಕ್ಸ್ ಗೆ ಪೊಲೀಸರೇ ಸುಸ್ತು..!

0
250

ವರ್ಜೀನಿಯಾ: ಅಂಗಡಿ ಕಳ್ಳರು ಸಿಕ್ಕಿ ಬೀಳಬಾರದೆಂಬ ದೃಷ್ಟಿಯಿಂದ ತಲೆಗೆ ಕಲ್ಲಂಗಡಿ ಟೋಪಿ ಹಾಕಿ ತಿರುಗಾಡುತ್ತಿರುವ ದೃಶ್ಯ ವರ್ಜಿನಿಯಾ ದ ಲೂಯಿಸ್ ನಗರದಲ್ಲಿ ಬೆಳಕಿಗೆ ಬಂದಿದೆ.

ಲೂಸಿಯಾ ದ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು ಕಳ್ಳರ ಫೋಟೋ ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಲ್ಲಂಗಡಿ ಹಣ್ಣಿನ ಮುಖವಾಡಕ್ಕೆ ಕಣ್ಣು ಕಾಣಿಸುವಂತೆ ಎರಡು ರಂಧ್ರಗಳನ್ನು ಮಾಡಿ ಕಳ್ಳತನ ಮಾಡಲು ಮಳಿಗೆಯೊಂದಕ್ಕೆ ಆಗಮಿಸಿದ್ದರು. ಈ ಇಬ್ಬರು ಕಳ್ಳರ ವಿಶಿಷ್ಟ ವೇಷವನ್ನು ನೋಡಿದ ಜನರು ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಕಳ್ಳರು ಈಗ ಪೊಲೀಸ್ ವಶದಲ್ಲಿದ್ದಾರೆ.

LEAVE A REPLY

Please enter your comment!
Please enter your name here