ಹೊಸ ದಿಗಂತ ವರದಿ ಕೋಲಾರ:
ಕೋಲಾರ ವಿಧಾನಸಭಾ ಮಾಜಿ ಶಾಸಕ, ಮಾಜಿ ಸಂಸದರು, ಅಹಿಂದ ನಾಯಕರಾದ ವರ್ತೂರು ಪ್ರಕಾಶ್ ರವರನ್ನು ಅಪಹರಿಸಿ, ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಕೋಲಾರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅದ್ಯಕ್ಷ ಕೆ.ಎಂ.ಸಂದೇಶ್, ರಾಜ್ಯಾದ್ಯಕ್ಷ ಕೆ.ಶ್ರೀನಿವಾಸಯ್ಯ, ಮುಳಬಾಗಿಲು ತಾಲ್ಲೂಕು ಅದ್ಯಕ್ಷ ಚೋಳಂಗುಂಟೆ ಹರೀಶ್, ಕೆ.ಸಿ.ನಾರಾಯಣಸ್ವಾಮಿ, ಯುವಘಟಕ ಅದ್ಯಕ್ಷ ಮುದಿಗೆರಿ ಮುನಿರಾಜ್, ವಾಲ್ಮೀಕಿ ಸೀನಾ ಮತ್ತಿತರರು ಉಪಸ್ಥಿತರಿದ್ದರು.