ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಲಸೆ ಕಾರ್ಮಿಕರ ಪ್ರಯಾಣ: ರಾಜ್ಯದಲ್ಲಿ 500 ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ

ಬೆಂಗಳೂರು: ಇಂದು ನಗರದಿಂದ ರಾಜ್ಯಾದ್ಯಂತ 500 ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುಮತಿ. ರಾಜ್ಯದಲ್ಲಿನ ವಲಸೆ ಕಾರ್ಮಿಕರನ್ನು ತಮ್ಮ ಜಿಲ್ಲೆಗಳಿಗೆ ತಲುಪಿಸಲು ಸರ್ಕಾರ 500 ಬಸ್ ಗಳ ವ್ಯವಸ್ಥೆ ಮಾಡಿದೆ.

ಮೆಜಸ್ಟಿಕ್ ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಮಡಿಕೇರಿ, ಉಡುಪಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಇಂದು ಬೆಳಗ್ಗೆ 7ರಿಂದ ಸಂಚಾರ ಆರಂಭವಾಗಿದೆ.

ಬಿ.ಎಂ.ಟಿ.ಸಿ ಬಸ್ ಮೂಲಕ ರಾಜ್ಯದ ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಗದಗ, ದಾರವಾಡ, ಹಾವೇರಿ, ಯಾದಗಿರಿ ಜಿಲ್ಲೆಗಳಿಗೆ ಬಸ್ ಸಂಚರಿಸಲಿವೆ.

ಸಂಚಾರ ನಡೆಸುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಡ್ಡಾಯವಾಗಿದ್ದು, ತಪಾಸಣೆಯ ನಂತರ ಅವರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss