ಇತ್ತೀಚೆಗೆ ವಾಟ್ಸಾಪ್ ಇಲ್ಲದೆ ನಮ್ಮ ಮೊಬೈಲ್ ಜೀವನವನ್ನು ಊಹಿಸೋದು ಅಸಾಧ್ಯ. ಎಲ್ಲೆಲ್ಲೋ ಇರುವ ಸ್ನೇಹಿತರನ್ನು, ಮನೆಯವರನ್ನು ನಮ್ಮೊಂದಿಗೆ ಬೆಸೆಯುವ ಸೇತುವೆಯಾಗಿದೆ ವಾಟ್ಸಾಪ್. ಇದು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಹೌದು. ವಾಟ್ಸಾಪ್ ಬಗ್ಗೆ ನಮಗೆಲ್ಲ ತಿಳಿದಿದೆ ಎಂದುಕೊಂಡಿರುತ್ತೇವೆ. ಆದರೆ ತಿಳಿದಿಳಿದಿರುವುದು ವಾಟ್ಸಾಪ್ ಹೇಗೆ ಬಳಸುವುದು ಎಂಬುದು ಮಾತ್ರ. ಆದರೆ ವಾಟ್ಸಾಪ್ ಬಗ್ಗೆ ನಿಮಗೆ ಗೊತ್ತಿರದ ಹಲವು ವಿಷಯಗಳ ಮಾಹಿತಿ ಇಲ್ಲಿದೆ.
- ವಾಟ್ಸಾಪ್ನ ಆಂಡ್ರಾಯ್ಡ್ ತಂಡದಲ್ಲಿ ಇರುವುದು ಐವರು ಮಾತ್ರ. ಆದರೆ ಮಾರ್ಚ್ ಒಂದೇ ತಿಂಗಳಿನಲ್ಲಿ ವಾಟ್ಸಾಪ್ ೧ ಬಿಲಿಯನ್ ಡೌನ್ಲೋಡ್ ಗಳನ್ನು ಕಂಡಿದೆ.
- ಕಂಪನಿಯ ಕೋ-ಫೌಂಡರ್ಸ್ ಜಾನ್ ಕೂಮ್ ಹಾಗೂ ಬ್ರಯಾನ್ ಆಕ್ಟನ್ ಈ ಮೊದಲು ಯಾಹೂ ಕಂಪನಿಗೆ ಕೆಲಸ ಮಾಡುತ್ತಿದ್ದರು. ಇವರು ಫೇಸ್ಬುಕ್ ಹಾಗೂ ಟ್ವಿಟ್ಟರ್ನ ಇಂಟರ್ವ್ಯೂಗೆ ತೆರಳಿ ನಿರಾಕರಿಸಲ್ಪಟ್ಟಿದರು.
- ವಿಡೀಯೋ ಹಾಗೂ ಫೋಟೊಗಳ ಸೈಜ್ ಕಂಪ್ರೆಸ್ ಮಾಡಲು ಬೇರೆ ಬೇರೆ ಆಪ್ ಬಳಸುವ ಅವಶ್ಯ ಇಲ್ಲ. ವಾಟ್ಸಾಪ್ ಒಳ್ಳೆಯ ಕಂಪ್ರೆಸ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಫೋಟೊಗಳನ್ನು ಸ್ನೇಹಿತರಿಗೆ ವಾಟ್ಸಾಪ್ಗಳಿಗೆ ಕಳಿಸಿ ನಂತರ ನಮ್ಮ ಗ್ಯಾಲರಿಯಲ್ಲಿ ಇದೇ ಫೋಟೊಗಳನ್ನು ಬಳಸಿದರೆ ಸೈಜ್ ಕಂಪ್ರೆಸ್ ಆಗಿರುತ್ತದೆ. ಆದರೆ ಇಲ್ಲಿ ಫೋಟೋ ಕ್ಲಾರಿಟಿ ಕಡಿಮೆಯಾಗುವ ಸಾಧ್ಯತೆ ಇದೆ.
- ಜಗತ್ತಿನಲ್ಲಿ ಪ್ರತಿದಿನ ವಾಟ್ಸಾಪ್ ನೋಡುವವರ ಸಂಖ್ಯೆ ಶೇ.೭೦ಕ್ಕೂ ಹೆಚ್ಚಿದೆ.
- ವಾಟ್ಸಾಪ್ ಕಂಪನಿಯ ಪ್ರಕಾರ ಪ್ರತಿದಿನ ಒಂದು ಮಿಲಿಯನ್ ಜನರು ವಾಟ್ಸಾಪ್ ಡೌನ್ಲೋಡ್ ಮಾಡುತ್ತಾರೆ. ವಾಟ್ಸಾಪ್ ಕಂಪನಿಯಲ್ಲಿ ಕೇವಲ ೫೦ ಮಂದಿ ಮಾತ್ರ ಕೆಲಸ ಮಾಡುತ್ತಾರೆ.
- ಆಂಡ್ರಾಯ್ಡ್ ಫೋನ್ ಅತಿ ಹೆಚ್ಚು ಡೌನ್ಲೋಡ್ ಆದ ಐದನೇ ಅಪ್ಲಿಕೇಶನ್ ವಾಟ್ಸಾಪ್ ಆಗಿದೆ.
- ವಾಟ್ಸಾಪ್ನಲ್ಲಿ ಈವರೆಗೂ ಒಂದೂ ಜಾಹೀರಾತು ಬಂದಿಲ್ಲ.
- ಫೌಂಡರ್ ಜಾನ್ ಕೂಮ್ ಕೇವಲ ಮೂರು ಮಂತ್ರಗಳನ್ನು ಅನುಸರಿಸುವಂತೆ ತಮ್ಮ ಉದ್ಯೋಗಿಗಳಿಗೆ ಹೇಳಿದ್ದಾರೆ. ಅದೇನೆಂದರೆ ಜಾಹೀರಾತು ಬೇಡ, ಆಟಗಳು ಬೇಡ ಹಾಗೂ ಗಿಮಿಕ್ಗಳು ಬೇಡವೇ ಬೇಡ.
- ಸಮೀಕ್ಷೆಯ ಪ್ರಕಾರ ಹೆಚ್ಚಿನ ಜನ ಒಂದು ವಾರಕ್ಕೆ ೨೦೦ ಗಂಟೆ ವಾಟ್ಸಾಪ್ ಬಳಸುತ್ತಾರೆ.