ಹೊಸ ದಿಗಂತ ಆನ್ಲೈನ್ ಡೆಸ್ಕ್:
ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ ಎಂದು ಚರ್ಚೆ ನಡೆಯುತ್ತಿರುವ ನಡುವೆಯೇ ಭಾರತದಲ್ಲಿ ವಾಟ್ಸಾಪ್ಗೆ ಪೈಪೋಟಿ ನೀಡುವ ಉದ್ದೇಶದಿಂದ ಹುಟ್ಟಿಕೊಂಡಿದ್ದ ‘ಹೈಕ್’ ಬಾಗಿಲೆಳೆಯಲು ಸಜ್ಜಾಗುತ್ತಿದೆ.
ಬರೋಬ್ಬರಿ ೧.೪ ಶತಕೋಟಿ ಡಾಲರ್ ಮೌಲ್ಯದೊಂದಿಗೆ ೨೦೧೬ರಲ್ಲಿ ಹೈಕ್ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನಪ್ರಿಯ ಅಪ್ಲಕೇಶನ್ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಆದರೆ ವಾಟ್ಸಾಪ್ಗೆ ಪೈಪೋಟಿ ಕೊಡುವಲ್ಲಿ ಎಡವಿದ ಹೈಕ್, ಈಗ ಭಾರತೀಯ ಪ್ಲೇ ಸ್ಟೋರ್ನಿಂದ ನೇಪಥ್ಯಕ್ಕೆ ಸರಿಯಲಿದೆ. ಈ ಮೆಸೇಜಿಂಗ್ ಅಪ್ಲಿಕೇಶನ್ ಆಪ್ ಸ್ಟೋರ್ಗಳಲ್ಲಿ ಸ್ಥಗಿತಗೊಂಡಿದೆ.
ಏರ್ಟೆಲ್ ಒಡೆಯ ಸುನಿಲ್ ಭಾರ್ತಿ ಮಿತ್ತಲ್ ಪುತ್ರ ಕವಿನ್ ಭಾರ್ತಿ ಮಿತ್ತಲ್ ಅವರ ಮಹತ್ವಾಕಾಂಕ್ಷಿ ಉದ್ಯಮ ಇದಾಗಿದ್ದು, ಚೀನಾದ ವೆಚಾಟ್ ಆಪರೇಟರ್ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ನ ಬೆಂಬಲದಿಂದ ಹೈಕ್, ಇತ್ತೀಚಿನ ವರ್ಷಗಳಲ್ಲಿ ನೋ ಫ್ರಿಲ್ಸ್ ಫೋನ್ ಗಳಂತಹ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಹಸವನ್ನು ಮಾಡಿ, ಮೊಬೈಲ್ ಮನರಂಜನೆಯಂತಹ ವಲಯಗಳಿಗೂ ವಿಸ್ತರಿಸಿತ್ತು. ಆದರೆ ಇದು ನಷ್ಟದತ್ತ ಸರಿದಿದ್ದು, ಕವಿನ್ ಹೈಕ್ ಸ್ಟಿಕ್ಕರ್ ಚಾಟ್ ಅನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ.