ಬ್ರಿಜಿಲ್: ಹಲವು ತಿಂಗಳುಗಳ ಪ್ರಯೋಗಗಳ ಬಳಿಕ ಫೇಸ್ಬುಕ್ ಒಡೆತನದ ವಾಟ್ಸಾಪ್ ಅಂತಿಮವಾಗಿ ತನ್ನ ಭೂ ನಿರೀಕ್ಷಿತ ಪೇಮೆಂಟ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ.
ಸದ್ಯ ಬ್ರಿಜಿಲ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಈ ಸೇವೆ, ಮುಂದಿನ ದಿನಗಳಲ್ಲಿ ಇತರ ದೇಶಗಳಿಗೂ ವಿಸ್ತರಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫೇಸ್ಬುಕ್ ಅಧ್ಯಕ್ಷ ಮಾರ್ಕ್ ಜುಕರ್ಬರ್ಗ್, ಇಂದು ಬ್ರಿಜಿಲ್ ಬಳಕೆದಾರರಿಗೆ ನೂತನ ಕೊಡುಗೆ ನೀಡುತ್ತಿದ್ದೇವೆ. ಈ ಪೇಮೆಂಟ್ ಅಪ್ಲಿಕೇಶನ್ ನಲ್ಲಿ ಹಣ ಕಳಿಸುವುದು ಮತ್ತು ಪಡೆಯುವುದು ಫೋಟೋ ಶೇರ್ ಮಾಡಿದಷ್ಟೇ ಸುಲಭವಿದೆ. ಇದು ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಎಂದಿದ್ದಾರೆ. ಅಲ್ಲದೆ ಸ್ಥಳೀಯ ಬ್ಯಾಂಕ್ ಗಳ ಜೊತೆಗೂ ಒಪ್ಪಂದಗಳು ನಡೆಯುತ್ತಿದ್ದು, ಇನ್ನಷ್ಟು ಉತ್ತಮ ಸೇವೆ ಶೀಘ್ರದಲ್ಲಿಯೇ ಸಿಗಲಿದೆ ಎಂದೂ ಹೇಳಿದ್ದಾರೆ.
ಈ ಸೌಲಭ್ಯವನ್ನು ಬಳಸಿಕೊಳ್ಳಲು ವಾಟ್ಸ್ಯಾಪ್ ಸಂಖ್ಯೆಗೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಲಿಂಕ್ ಮಾಡಬೇಕಿದ್ದು ಬಳಿಕ ಸಂದೇಶ ಕಳಿಸಿದಷ್ಟೇ ಸುಲಭವಾಗಿ ಪೇಮೆಂಟ್ ಮಾಡಬಹುದಾಗಿದೆ.