ಹೊಸ ದಿಗಂತ ಆನ್ಲೈನ್ ಡೆಸ್ಕ್:
ವಾಟ್ಸಾಪ್ ನೂತನ ನಿಯಮಗಳನ್ನು ಒಪ್ಪಿಗೊಳ್ಳುವುದು, ಬಿಡುವುದು ಬಳಕೆದಾರರ ವಿವೇಚನೆಗೆ ಬಿಟ್ಟದ್ದು.
ಯಾರಿಗಾದರೂ ಸಮಸ್ಯೆ ಇದ್ದರೆ ಅದನ್ನು ತಮ್ಮ ಫೋನ್ನಿಂದ ತೆಗೆದುಹಾಕಬಹುದು ಎಂದು ನ್ಯಾಯಲಯ ಹೇಳಿದೆ.
ವಾಟ್ಸಾಪ್ ಹೊಸ ನಿಯಮಗಳನ್ನು ಪ್ರಶ್ನಿಸಿ ವಕೀಲರಾದ ಚಿರಾಗ್ ರೋಹಿಲ ಎಂಬವರು ಪಿಐಎಲ್ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಕುರಿತು ವಾಟ್ಸಾಪ್ಗೆ ನೋಟಿಸ್ ನೀಡಲಾಗದು ಎಂದಿದೆಯಲ್ಲದೆ, ವಿಚಾರಣೆಯನ್ನು ಜನವರಿ ೨೫ಕ್ಕೆ ಮುಂದೂಡಿದೆ.