Thursday, July 7, 2022

Latest Posts

ವಾಟ್ಸ್‌ಆಪ್ ಬಳಕೆದಾರರಿಗೆ ಗುಡ್ ನ್ಯೂಸ್: ಸದ್ಯದಲ್ಲಿಯೇ ಹೊಸ ಫೀಚರ್‌ಗಳು ಬಿಡುಗಡೆಯಾಗಲಿದೆ. ಯಾವವು ಗೊತ್ತೆ ?

ವಾಟ್ಸ್‌ಆಪ್ ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್. ವಾಟ್ಸ್‌ಆಪ್ ಬಳಕೆದಾರರು ವಿಶ್ವದಲ್ಲಿ ೨೦೦ ಕೋಟಿ ಜನರಿದ್ದಾರೆ. ತನ್ನ ಬಳಕೆ ದಾರರಿಗಾಗಿ ಈ ವಾಟ್ಸ್‌ಆಪ್ ಹೊಸ ಫೀಚರ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಬಳಕೆದಾರರಿಗೆ ಹೊಸ ಮೆಸೇಜಿಂಗ್ ಅನುಭವ ಸೇವೆಯನ್ನು ಒದಗಿಲು ಮತ್ತು ಬಳಕೆಯನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಿಂದ ವಾಟ್ಸ್‌ಆಪ್ ಹಲವು ಫೀಚರ್‌ಗಳನ್ನು ಮುಂದಿನ ದಿನದಲ್ಲಿ ತನ್ನ ಬಳಕೆ ದಾರರಿಗೆ ಪರಿಚಯಿಸಲಿದೆ.

ಮಲ್ಟಿಪಲ್ ಡಿವೈಸ್ ಸಪೋರ್ಟ್, ಕಾಂಟ್ಯಾಕ್ಟ್ ಕ್ಯೂ ಆರ್ ಕೋಡ್, ಸೆಲ್ಫ್ ಡಿಸ್ಟ್ರಕ್ಟಿಂಗ್ ಮೆಸೇಜ್, ಇನ್ ಆಪ್ ಬ್ರೌಸರ್ ಮತ್ತು ಲಾಸ್ಟ್ ಸೀನ್ ಫಾರ್ ಸೆಲೆಕ್ಟ್ ಫ್ರೇಂಡ್ಸ್ ಈ ಐದು ಫೀಚರ್‌ಗಳು ಬಳಕೆದಾರರಿಗೆ ಖಂಡಿತ ಹೊಸ ಅನುಭವವನ್ನು ನೀಡಲಿದೆ. ಹಾಗಾದರೆ ಇವು ಹೇಗೆ ಕೆಲಸ ಮಾಡುತ್ತವೆ ಎಂದು ನೋಡಬೇಕೇ?

ಮಲ್ಟಿಪಲ್ ಡಿವೈಸ್ ಸಪೋರ್ಟ್: ಬಳಕೆದಾರರು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ವಾಟ್ಸ್‌ಆಪ್ ಅಕೌಂಟ್‌ಗೆ ಲಾಗಿನ್ ಆಗುವ ಸೌಲಭ್ಯ ಕಲ್ಪಿಸಿದೆ. ಸದ್ಯ ಬಳಕೆದಾರರು ಕೇವಲ ಒಂದು ಡಿವೈಸ್‌ನಲ್ಲಿ ಮಾತ್ರ ವಾಟ್ಸ್‌ಆಪ್ ಅಕೌಂಟ್‌ಗೆ ಲಾಗಿನ್ ಆಗಬಹುದು. ಒಂದು ವೇಳೆ ಬೇರೆ ಮೊಬೈಲ್‌ನಲ್ಲಿ ಲಾಗಿನ್ ಆದರೆ ಮೊದಲನೇ ಡಿವೈಸ್‌ನಿಂದ ಆಟೋಮ್ಯಾಟಿಕ್ ಆಗಿ ಲಾಗ್‌ಔಟ್ ಆಗುತ್ತದೆ.

ಕಾಂಟ್ಯಾಕ್ಟ್ ಕ್ಯೂ ಆರ್ ಕೋಡ್: ಹೊಸ ಸಂಪರ್ಕ ಸಂಕ್ಯೆಗಳನ್ನು ಕಾಂಟಾಕ್ಟ್ ಲೀಸ್ಟ್‌ಗೆ ಸೇರಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ಈ ಫೀಚರ್ ಈಗಾಗಲೇ ಅಂಡ್ರಾಂಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ನ ಬೀಟಾ ವರ್ಶನ್‌ಗಳಲಿ ಲಭ್ಯವಿದೆ.

ಸೆಲ್ಫ್ ಡಿಸ್ಟ್ರಕ್ಟಿಂಗ್ ಮೆಸೇಜ್: ವಾಟ್ಸ್‌ಆಪ್ ಸ್ಟೇಟನ್ ಅಥವಾ ಸ್ಟೋರಿ ೨೪ ಗಂಟೆ ನಂತರ ಕಾಣುವುದಿಲ್ಲ. ಇನ್ನು ಮುಂದೆ ಸೆಲ್ಫ್ ಡಿಸ್ಟ್ರಕ್ಟಿಂಗ್ ಮೆಸೇಜ್ ಫೀಚರ್‌ನಲ್ಲಿ ಬಳಕೆದಾರರು ತಮಗೆ ಇಷ್ಟ ಬಂದಷ್ಟು ಸಮಯ ಸ್ಟೇಟಸ್ ಅಥವಾ ಸ್ಟೋರಿ ಕಾಣುವಂತೆ ಇಟ್ಟುಕೊಳ್ಳಬಹುದು. ಬಳಕೆದಾರರು ಇಂತಿಷ್ಟೇ ಸಮಯ ಎಂದು ಸೆಟ್ ಮಾಡಿದರೆ ಆ ಸಮಯದ ಬಳಿಕವಷ್ಟೇ ಸ್ಟೇಟಸ್ ಕಾಣಿಸುತ್ತದೆ.

ಇನ್ ಆಪ್ ಬ್ರೌಸರ್: ವಾಟ್ಸ್‌ಆಪ್ ಚಾಟ್‌ಗಳಲ್ಲಿ ಕಳಿಸಿದ ಲಿಂಕ್‌ಗಳನ್ನು ವೆಬ್ ಬ್ರೌಸರ್‌ಗಳಿಗೆ ರಿಡೈರಕ್ಟ್ ಮಾಡದೇ ನೇರವಾಗಿ ಓಪನ್ ಮಾಡಬಹುದು. ಸದ್ಯ ಈ ಸೌಲಭ್ಯ ಟ್ವಿಟರ್ ಮತ್ತು ಲಿಂಕ್ಡ್ ಇನ್ ಸೇರಿದಂತೆ ಬಹಳಷ್ಟು ಆಪ್‌ಗಳಲ್ಲಿ ಲಭ್ಯವಿದೆ. ಇದು ಕೂಡ ಅದೇ ರೀತಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಸಮಯ ಉಳಿತಾಯವಾಗುತ್ತದೆ.

ಲಾಸ್ಟ್ ಸೀನ್ ಫಾರ್ ಸೆಲೆಕ್ಟ್ ಫ್ರೆಂಡ್ಸ್: ಸದ್ಯ ವಾಟ್ಸ್‌ಆಪ್ ಬಳಕೆದಾರರು ಲಾಸ್ಟ್ ಸೀನ್ ಸ್ಟೇಟಸ್ ಅನ್ನು ಕಾಂಟ್ಯಾಕ್ಟ್ಸ್, ಎವರಿಒನ್ ಅಥವಾ ನೋ ಒನ್ ಜತೆ ಹಂಚಿಕೊಳ್ಳಲು ಅಥವಾ ಹಂಚಿಕೊಳ್ಳದಿರಲು ಅವಕಾಶವಿದೆ. ಆದರೆ ನಿಮ್ಮಿಷ್ಟದ ಕೆಲವೇ ಕೆಲವು ಜನರಿಗೆ ಮಾತ್ರ ಲಾಸ್ ಸೀನ್ ಸ್ಟೇಟಸ್ ಸೀಮಿತಗೊಳಿಸುವುದು ಸಾಧ್ಯವಿಲ್ಲ. ಇನ್ನು ಮುಂದೆ ನೀವು ಆಯ್ಕೆ ಮಾಡಿದ ಫ್ರೆಂಡ್ಸ್‌ಗಳಿಗೆ ಮಾತ್ರ ನಿಮ್ಮ ಲಾಸ್ಟ್ ಸೀನ್ ಕಾಣಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss