ಕಾಳು ಮೆಣಸನ್ನು ವಾಣಿಜ್ಯ ಪ್ರಪಂಚದಲ್ಲಿ ಕಪ್ಪು ಬಂಗಾರ ಎಂದು ಕರೆಯುತ್ತಾರೆ. ಆಯುರ್ವೇದದಲ್ಲಿಯೂ ಕಾಳು ಮೆಣಸಿಗೆ ಅಗ್ರ ಸ್ಥಾನ ಇದೆ. ದೇಹಕ್ಕೆ, ನಾಲಿಗೆಗೆ ಎರಡಕ್ಕೂ ಕಾಳು ಮೆಣಸು ಒಳ್ಳೆಯದು. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ. ಅನೇಕ ದೇಶಗಳಲ್ಲಿ ಕಾಳು ಮೆಣಸನ್ನು ಬಳಸುತ್ತಾರೆ. ನಮ್ಮ ದೇಶದಿಂದಲೇ ರಪ್ತಾಗುತ್ತದೆ. ಇದು ವೈದ್ಯ ಜಗತ್ತಿನ ದಿವ್ಯ ಔಷಧಿ.
ಕಾಳು ಮೆಣಸನ್ನು ವಾರದಲ್ಲಿ ಒಂದರಂತೆ ಸೇವಿಸದರೆ ಜಂತು ಹುಳಗಳ ನಿವಾರಣೆಯಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ.
- ಕಫ ಕರಗಲು ಕಾಳು ಮೆಣಸು ರಾಮಬಾಣ. ಕಫದ ಸಮಸ್ಯೆ ಇರುವವರು ಕಾಳು ಮೆಣಸನ್ನು ಪುಡಿ ಮಾಡಿಕೊಂಡು ಜೇನುತುಪ್ಪ ಮತ್ತು ಶುಂಠಿ ರಸದಲ್ಲಿ ಸೇವಿಸಿದರೆ ಕಫ ಕರಗುತ್ತದೆ.
- ಗಂಟು ನೋವು, ಬಿದ್ದ ನೋವುಗಳಿದ್ದರೆ ಕಾಳು ಮೆಣಸನ್ನು ನೀರಿನಲ್ಲಿ ರುಬ್ಬಿಕೊಂಡು ಹಚ್ಚಿಕೊಂಡರೆ ನೋವುಗಳು ಬೇಗ ಕಡಿಮೆ ಆಗುತ್ತದೆ.
- ತಂಡಿ, ಕೆಮ್ಮು ಇದ್ದಲ್ಲಿ ಕುತುಂಬರಿ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ನೀರಿನಲ್ಲಿ ಕುದಿಸ ಬೇಕು. ನಂತರ ಅದನ್ನು ಸೋಸಿಕೊಂಡು ದಿನದಲ್ಲಿ ಮೂರು ಹೊತ್ತು ಸೇವಿಸಿದರೆ ಬೇಗ ತಂಡಿ ಕೆಮ್ಮು ಕಡಿಮೆ ಆಗುತ್ತದೆ.
- ಅರ್ಧಚಮಚ ಕಾಳು ಮೆಣಸನ್ನು ವೀಳ್ಯದೆಲೆಯೊಂದಿಗೆ ಸೇವಿಸಿದರೆ ಬೊಜ್ಜು ಕರಗುತ್ತದೆ.
ಬಾಳಂತಿಯರು ಇದರ ಕಂಟ್ನೇ(ನೀರು, ಕಾಳುಮೆಣಸು, ಉಪ್ಪು, ತುಪ್ಪ) ಮಾಡಿಕೊಂಡು ಅನ್ನದ ಜೊತೆ ಸೇವಿಸಿದರೆ ಮಗುವಿಗೆ ಯಾವುದೇ ತಂಡಿ ಆಗುವುದಿಲ್ಲ. ಮತ್ತು ಹೊಟ್ಟೆ ಕರಗುತ್ತದೆ.
- ಹಲ್ಲು ನೋವು ಬಂದಾಗ ಕಾಳು ಮೆಣಸಿನ ಪುಡಿ ಮಾಡಿಕೊಂಡು ಅದನ್ನು ಹತ್ತಿಯಲ್ಲಿ ಇಟ್ಟುಕೊಂಡು ಎಲ್ಲಿ ಹಲ್ಲು ನೋವು ಇರುತ್ತದೆಯೋ ಅಲ್ಲಿ ಹತ್ತಿಯನ್ನು ಇಟ್ಟುಕೊಳ್ಳಬೇಕು. ಬೇಗ ಹಲ್ಲು ನೋವು ಕಡಿಮೆ ಆಗುತ್ತದೆ.