Wednesday, July 6, 2022

Latest Posts

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 240 ಕೋಟಿ ರೂ ನಷ್ಟ

ಹುಬ್ಬಳ್ಳಿ: ಪ್ರತಿದಿನ ಸಂಸ್ಥೆಯಲ್ಲಿ ಬಸ್‌ಗಳು 5 ಸಾವಿರ ವೇಳಾಪಟ್ಟಿಗಳಲ್ಲಿ 16 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿದ್ದವು. ಇದರಿಂದ 6 ಕೋಟಿ ಸಾರಿಗೆ ಆದಾಯ ಬರುತ್ತಿತ್ತು. 40 ದಿನಗಳ ಲಾಕ್ ಡೌನ್ ನಿಂದಾಗಿ ಸುಮಾರು 240 ಕೋಟಿ ರೂಪಾಯಿಗಳ ನಷ್ಟ ಸಂಸ್ಥೆಗೆ ಉಂಟಾಗಿದೆ ಎಂದು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಟಿ.ಎಸ್ ನಗರ ಸಾರಿಗೆಯಿಂದ ಪ್ರತಿದಿನ 15 ಲಕ್ಷ, ತಿಂಗಳಿಗೆ 5 ಕೋಟಿ ಆದಾಯ ಬರುತ್ತಿತ್ತು ಇದರಲ್ಲೂ ಕೂಡ ನಷ್ಟ ಉಂಟಾಗಿದೆ. ಸಾರಿಗೆ ಮಂತ್ರಿಗಳು ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೌಕರರ ಪೂರ್ಣ ಪ್ರಮಾಣ ವೇತನ ನೀಡಲು ಆದೇಶ ನೀಡಿದ್ದಾರೆ. ಮೇ 17 ನಂತರ ಸಾಮಾಜಿಕ ಅಂತರದೊಂದಿಗೆ ಬಸ್‌ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಬಸ್ ತನ್ನ ಪೂರ್ಣ ಪ್ರಮಾಣ ಪ್ರಯಾಣಿಕರೊಂದಿಗೆ ಸಂಚರಿಸಿದರೆ ಪ್ರತಿ ಕಿ.ಮೀ. 36 ರೂ. ವೆಚ್ಚ ಬರುತ್ತದೆ. ಸಾಮಾಜಿಕ ಅಂತರದಡಿ ಪ್ರಯಾಣಿಕರ ಪ್ರಮಾಣವನ್ನು ಶೇ. 50 ನಿಗದಿಪಡಿಸಿದೆ ವೆಚ್ಚ 80 ರೂಪಾಯಿಗಳಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸದ್ಯ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲಾಗುತ್ತಿದ್ದು ಬಸ್ ದರ ಏರಿಸಿಲ್ಲ ಎಂದು ಹೇಳಿದರು.

ಬೆಂಗಳೂರಿನಿಂದ 148 ಬಸ್‌ಗಳಲ್ಲಿ ವಲಸೆ ಕಾರ್ಮಿಕರನ್ನು ಆಗಮಿಸಿದ್ದಾರೆ. 200 ಬಸ್‌ಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ 14000ಹೆಚ್ಚು ಕಾರ್ಮಿಕರನ್ನು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ತರೆಳಿ ವಲಸೆ ಕಾರ್ಮಿಕರನ್ನು ಸಂಸ್ಥೆಯ ಬಸ್‌ಗಳಲ್ಲಿ ಕಳುಹಿಸಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss