ಹೊಸದಿಗಂತ ಆನ್ಲೈನ್ ಡೆಸ್ಕ್:
ಭಾರತದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದ್ದು, ಶೀಘ್ರವೇ 83 ತೇಜಸ್ ಲಘು ಯುದ್ಧ ವಿಮಾನ ಸೇನೆಯನ್ನು ಸೇರಿಕೊಳ್ಳಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಈ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಸುಧಾರಿತ ಮಾರ್ಕ್ 1 ಎ ವರ್ಷನ್ ಲಘು ಯುದ್ಧ ವಿಮಾನ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ ಈ ಯುದ್ಧ ವಿಮಾನಗಳನ್ನು 48 ಕೋಟಿ ರೂ.ಗಳಿಗೆ ಖರೀದಿಸಲಾಗುತ್ತಿದೆ. ಈ ತೇಜಸ್ ಲಘು ಯುದ್ಧ ವಿಮಾನ ಮುಂದಿನ ವರ್ಷ ಭಾರತೀಯ ವಾಯು ಪಡೆ ಸೇರಲಿದೆ. 83 ಲಘು ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವ ಪ್ರಬಲ ವೇದಿಕೆಯಾಗಲಿದೆ ಎಂದು ಕೂಡ ಇದೇ ವೇಳೆ ರಕ್ಷಣಾ ಸಚಿವರು ತಿಳಿಸಿದ್ದಾರೆ.