Wednesday, July 6, 2022

Latest Posts

ವಾರಂಟ್‌ ಇಲ್ಲದೇ ಸರ್ಚ್, ಬಂಧನಕ್ಕಾಗಿ ತಯಾರಾಯಿತು ಯೋಗಿ ಸರಕಾರದಿಂದ ವಿಶೇಷ ತಂಡ!

ಲಖನೌ: ಉತ್ತರ ಪ್ರದೇಶ ದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕರ ಜನರ ಹಿತದೃಷ್ಟಿ ಯಿಂದ ಹೊಸ ಹೊಸ ಯೋಜನೆಗಳನ್ನು ಜಾರಿತರುತ್ತಿದೆ. ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ‌ ಯೋಗಿ ಸರಕಾರ ಹೊಸ ಹೊಸ ವಿಶೇಷ ಪಡೆಯೊಂದನ್ನು ರಚನೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಹೌದು ಸಿಐಎಸ್ಎಫ್‌ನಂತೆಯೇ ವಾರಂಟ್‌ ಇಲ್ಲದೇ ಶೋಧಿಸುವ ಹಾಗೂ ಬಂಧಿಸುವ ಅಧಿಕಾರವನ್ನು ಈ ವಿಶೇಷ ಪಡೆಯನ್ನು ಯೋಗಿ ಸರಕಾರ ರಚನೆ ಮಾಡಲು ತೀರ್ಮಾನಿಸಿದೆ. .
ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆಯೆಂದು ಕರೆಯಲ್ಪಡುವ ವಿಶೇಷ ಪಡೆಯನ್ನು ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡ, ಮೆಟ್ರೋ, ಬ್ಯಾಂಕ್‌ ಮತ್ತು ಇತರ ಸರಕಾರಿ ಕಚೇರಿಗಳನ್ನು ರಕ್ಷಿಸಲು ಬಳಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ತನ್ನ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ ಮೂಲಕ ತಿಳಿಸಿದೆ.
ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕನಸಿನ ಯೋಜನೆಯಾಗಿದೆ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೇಳಿದ್ದಾರೆ. ಈ ವಿಶೇಷ ಪಡೆಯು ಯಾವುದೇ ಮ್ಯಾಜಿಸ್ಟ್ರೇಟ್‌ನ ಪೂರ್ವಾನುಮತಿ ಇಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು ಎಂದು ಹೇಳಲಾಗಿದ್ದು, ಈ ವಿಭಾಗಕ್ಕೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ, ಆರಂಭಿಕವಾಗಿ 1,747.06 ಕೋಟಿ ರೂ. ವೆಚ್ಚದಲ್ಲಿ ಯುಪಿಎಸ್‌ಎಸ್‌ಎಫ್‌ನ ಎಂಟು ಬೆಟಾಲಿಯನ್‌ಗಳನ್ನು ರಚಿಸಲಾಗುವುದು” ಎಂದು ಹೇಳಿದ್ದಾರೆ. ವಿಶೇಷ ಪಡೆಗೆ ಆರಂಭಿಕ ಮೂಲ ಸೌಕರ್ಯಗಳು ಯುಪಿ ಪೊಲೀಸರ ವಿಶೇಷ ಘಟಕವಾದ ಪಿಎಸಿಯಿಂದ ಬರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss