Sunday, August 14, 2022

Latest Posts

ವಾರಕ್ಕೊಮ್ಮೆಯಾದರೂ ತಿನ್ನಿ ಈ ರುಚಿಯಾದ ಗ್ರೀನ್ ದೋಸೆ!

ಪ್ರತಿ ನಿತ್ಯ ನಮ್ಮ ಬ್ಯುಜಿ ಜೀವನದಲ್ಲಿ ನಾವು ಸೇವಿಸುವ ಆಹಾರದಲ್ಲಿನ ಪೌಷ್ಠಿಕಾಂಶದ ಕಡೆ ಗಮನ ನೀಡಲು ಕಷ್ಟವಾಗುತ್ತಿದೆ. ಪೌಷ್ಠಿಕ ಆಹಾರದ ಕೊರತೆಯಿಂದ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಕಾಯಿಲೆಗಳನ್ನು ಎದುರಿಸಬೇಕಾಗುತ್ತಿದೆ.

ಹಾಗಾಗಿ ಇವೆಲ್ಲವನ್ನೂ ದೂರ ಮಾಡಲು ನಮ್ಮಲಿದೆ ಒಂದು ಸಿಂಪಲ್ ದೋಸೆ ರೆಸಿಪಿ ಅದುವೇ ಗ್ರೀನ್ ದೋಸೆ ಅಂದರೆ ಹೆಸರುಕಾಳು ದೋಸೆ…

ಬೇಕಾಗುವ ಪದಾರ್ಥಗಳು:

ಹೆಸರುಕಾಳು ( ಸುಮಾರು 4-5 ಗಂಟೆ ನೆನಸಿಟ್ಟ ಕಾಳು)
ಜೀರಿಗೆ
ಉಪ್ಪು
ಹಸಿಮೆಣಸಿನಕಾಯಿ
ಈರುಳ್ಳಿ(ಸ್ಕಿಪ್ ಮಾಡಬಹುದು)
ಕೊತ್ತಂಬರಿ
ತುಪ್ಪ
ಬೆಣ್ಣೆ

ಮಾಡುವ ವಿಧಾನ:
ನೆನಸಿಟ್ಟ ಹೆಸರು ಕಾಳು, ಜೀರಿಗೆ, ಹಸಿಮೆಣಸಿನ ಕಾಯಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು
ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ದೋಸೆ ಹಿಟ್ಟು ಹಾಕಿ, ರುಚಿಕೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಹಾಕಿ
ನಂತರ ತವಾ ಬಿಸಿ ಮಾಡಿ ಅದಕ್ಕೆ ಸಿದ್ದವಾಗಿರುವ ಹೆಸರುಕಾಳು ದೋಸೆ ಹಿಟ್ಟನ್ನು ಹಾಕಿ, ಅದರ ಮೇಲೆ ಈರುಳ್ಳಿ ಉದುರಿಸಿ, ತುಪ್ಪ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.
ಸರ್ವ್ ಮಾಡುವಾಗ ದೋಸೆ ಮೇಲೆ ಬೆಣ್ಣೆ ಹಾಕಿದರೆ ಸಿದ್ಧವಾಗಿಯೇ ಬಿಡುತ್ತದೆ ಬಿಸಿ ಬಿಸಿ ಹೆಸರು ಕಾಳು ಗ್ರೀನ್ ದೋಸೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss