Monday, July 4, 2022

Latest Posts

ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು: ಸಚಿವ ನಾರಾಯಣಗೌಡ ತಾಕೀತು

ಕೋಲಾರ: ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ ರೇಷ್ಮೆ  ಇಲಾಖೆ ಜಂಟಿ ನಿರ್ದೇಶಕರಾದ ಆಂಜನೇಯ ಗೌಡ ಅವರಿಗೆ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾದ ನಾರಾಯಣಗೌಡ ಎಚ್ಚರಿಕೆ ನೀಡಿದರು.
ಇಂದು ಶ್ರೀನಿವಾಸಪುರದ ಜಿ.ನಾರಾಯಣಗೌಡ ತೋಟಗಾರಿಕೆ ಕ್ಷೇತ್ರದ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಬೇರೆ ಎಲ್ಲಾ ಕಡೆ ಹಣ ಸಂದಾಯ ಆಗಿದೆ. ರೈತರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ಆದರೆ ಕೋಲಾರದಲ್ಲಿ ಮಾತ್ರ ಯಾಕೆ ವಿಳಂಬ ಆಗಿದೆ. ತಕ್ಷಣ ಸಮಸ್ಯೆ ಪರಿಹಾರ ಆಗದಿದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟವಾಗದೆ ನಷ್ಟವಾಗಿತ್ತು. ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಕೆಲವು ಕಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಅಧಿಕಾರಿಗಳು ಎಲ್ಲಾ ಸಮಸ್ಯೆ ಸರಿಪಡಿಸಬೇಕು. ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು ಎಂದು ಸೂಚನೆ ನೀಡಿದ್ದಾರೆ.
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಮಾತನಾಡಿ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರ ಮಾವನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಾರಾಟ ಮಾಡಿಸಲಾಯಿತು. ಜಿಲ್ಲೆಯಲ್ಲಿ ಹಲವು ಪ್ರಸಿದ್ದ ತಳಿಯ ಮಾವನ್ನು ಬೆಳೆಯಲಾಗುತ್ತಿದ್ದು, ದೇಶ ವಿದೇಶಗಳಿಗೆ ರಪ್ತು ಹೆಚ್ಚಿಸಬೇಕು ಆಗ ಉತ್ತಮವಾದ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ವಿದಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬೆಳೆಯುವ ಒಟ್ಟು ಮಾವಿನಲ್ಲಿ ಶೇ ೩೪ ರಷ್ಟು ಮಾವನ್ನು ಕೋಲಾರ ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತದೆ. ಮಾವು ಮಂಡಳಿಯು ಇಡಿ ರಾಜ್ಯಕ್ಕೆ ಸಂಬಂದಿಸಿದ್ದಾಗಿದ್ದು, ವಾರ್ಷಿಕ ೨ ಕೋಟಿ ಅನುದಾನ ಸಾಲುವುದಿಲ್ಲ. ಆದ್ದರಿಂದ ಕನಿಷ್ಠ ೨೫ ಕೋಟಿ ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗಾಯಿತ್ರಿ, ಮಾವು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ್ ಅವರು ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss