Tuesday, June 28, 2022

Latest Posts

ವಾರದ ನಂತರ ಕಾರ್ ಚಲಾಯಿಸಲು ಮುಂದಾದ ಮಹಿಳೆಗೆ ಕಾದಿತ್ತು ಬಿಗ್ ಶಾಕ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಒಂದು ವಾರ ಕಾರನ್ನು ಉಪಯೋಗಿಸದೇ ಹಾಗೆಯೇ ಪಾರ್ಕ್ ಮಾಡಿದ್ದ ಮಹಿಳೆಗೆ ಕಾರು ಚಲಾಯಿಸಲು ಮುಂದಾದಾಗ ಆಘಾತಕಾರಿ ಘಟನೆಯೊಂದು ಎದುರಾಗಿದೆ. ಡೋರ್​ನ ಹ್ಯಾಂಡಲ್​ ಒಳಗೆ ಕೂದಲು ಮಿಶ್ರಿತ ದೊಡ್ಡ ಗಾತ್ರದ ಜೇಡದ ಆಕಾರದ ಜೀವಿಯೊಂದು ಪತ್ತೆಯಾಗಿದೆ.

ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದ ನ್ಯೂ ಸೌಥ್​ ವೇಲ್ಸ್​ನ ಅರ್ಮಿಡೇಲ್​ ನಗರದ ಮಹಿಳೆ ಕಾರಿನಲ್ಲಿ. ಒಂದು ವಾರ ಕಾರನ್ನು ಬಳಸದೇ ಹಾಗೆಯೇ ಪಾರ್ಕ್ ಮಾಡಲಾಗಿತ್ತು. ಒಂದು ವಾರದ ನಂತರ ಕಾರನ್ನು ಚಲಾಯಿಸಲು ಮುಂದಾದಾಗ ಡೋರ್​ನ ಹ್ಯಾಂಡಲ್​ ಒಳಗೆ ಮೈ ತುಂಬ ಉದ್ದುದ್ದ ಕೂದಲು ಇರುವ ದೊಡ್ಟ ಗಾತ್ರದ ಜೇಡದ ಆಕಾರದ ಜೀವಿ ಪತ್ತೆಯಾಗಿದೆ ಎಂದು ಮಹಿಳೆ  ಬರೆದುಕೊಂಡು, ಆ ಜೇಡದ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇದೀಗ ಆ ಫೋಟೋ ಸಕ್ಕತ್ ವೈರಲ್ ಆಗಿದೆ. 31 ಸಾವಿರಕ್ಕೂ ಹೆಚ್ಚು ಮಂದಿ ಆಸ್ಟ್ರೇಲಿಯನ್​ ಸ್ಪೈಡರ್​ ಹುಡುಕುವಿಕೆ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದ್ದಾರೆ. ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ದೇಹದಿಂದಲೇ ಜೇಡವನ್ನು ಬ್ರ್ಯಾಂಡ್​ ಹಂಟ್ಸ್​ಮನ್​ ಎಂದು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss