ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರದ ಭವಿಷ್ಯ(ಸೆಪ್ಟೆಂಬರ್ 27ರಿಂದ ಅ. 3ರವರೆಗೆ)

ವಾರದ ಭವಿಷ್ಯ(ಸೆಪ್ಟೆಂಬರ್ 27ರಿಂದ . 3ರವರೆಗೆ)

ಮೇಷ: ದೇವತಾನುಗ್ರಹ ಕಾಲ. ಆದರೆ, ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ವಿರೋಧ ಮತ್ತು ಪೈಪೋಟಿ ಎದುರಿಸಬೇಕಾದೀತು. ವ್ಯಾಪಾರ, ಉದ್ಯಮದಲ್ಲೂ ನಿರೀಕ್ಷಿಸಿದಷ್ಟು ಲಾಭ ಬಾರದು. ಆದರೂ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುವಿರಿ. ಆದಾಯದಲ್ಲಿ ಹಿನ್ನಡೆ. ಮಾತು ತೀಕ್ಷ್ಣವಾಗಿ ಜಗಳ, ವಿರೋಧ, ಸಂಬಂಧಗಳೊಳಗೆ ಬಿರುಕುಗಳು ಕಂಡುಬಂದಾವು. ಮಕ್ಕಳ ಅಭಿವೃದ್ಧಿಯಿಂದ ತೃಪ್ತಿ. ದಾಂಪತ್ಯದಲ್ಲಿ ವಿರಸ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬಾರದು. ವಿಷ್ಣು, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 28, 29

ವೃಷಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಉಷ್ಣ, ತಲೆನೋವು, ನರಗಳ ಸಂಬಂಧ ತೊಂದರೆ ಕಾಡೀತು. ಕುಟುಂಬದಲ್ಲಿ ದೇವತಾರಾಧನೆ, ಮಂಗಳ ಕಾರ್ಯಗಳ ಸಂಭ್ರಮ. ದಾಂಪತ್ಯದಲ್ಲಿ ವಿರಸ. ವಿವಾಹ ಸಂಬಂಧ ಪ್ರಯತ್ನಗಳಿಗೆ ವಿಘ್ನ, ಅಡಚಣೆಗಳು ಬಂದಾವು. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಆದಾಯದಲ್ಲಿ ಹಿನ್ನಡೆ. ನಿಮ್ಮ ಪ್ರಯತ್ನ, ಪ್ರತಿಭೆ ಮತ್ತು ಪರಿಶ್ರಮಮಕ್ಕೆ ತಕ್ಕುದಾದ ಸಂಭಾವನೆ/ಪ್ರತಿಫಲ ದೊರೆಯದು. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 30, 2

ಮಿಥುನ: ದೇವತಾನುಗ್ರಹ ಕಾಲ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚು ವೆಚ್ಚಗಳಿಂದಾಗಿ ಹಣಕಾಸಿನ ಅಡಚಣೆ ಬಂದೀತು. ಕಣ್ಣಿನ ಆರೋಗ್ಯದ ಬಗ್ಗೆ ನಿಗಾ ವಹಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಉನ್ನತ ವ್ಯಾಸಂಗಕ್ಕೆ ಅವಕಾಶ ಒದಗಿ ಬರಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದಾಂಪತ್ಯ ಜೀವನ ಸುಖಪ್ರದ. ವ್ಯಾಪಾರಿಗಳಿಗೆ ನಿರೀಕ್ಷಿಸಿದಷ್ಟು ಲಾಭಾಂಶ ದೊರೆಯದು. ಈಶ್ವರ, ವಿಷ್ಣು, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 1, 2

ಕರ್ಕಾಟಕ: ಆರೋಗ್ಯ ಚೆನ್ನಾಗಿರದು. ಯಾವುದೇ ಕೆಲಸಗಳಿಗೆ ಮುಂದಾದರೂ ವಿರೋಧ, ವಿಘ್ನ, ಅಡಚಣೆಗಳು ಎದುರಾಗುವವು. ಹಿರಿಯರೊಂದಿಗೆ ಮನಸ್ತಾಪ. ಸಾಮಾಜಿಕ/ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಉನ್ನತ ಶಿಕ್ಷಣಕ್ಕೂ ಉತ್ತಮ ಅವಕಾಶಗಳು ದೊರಕುವವು. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಆದಾಯದಲ್ಲಿ ಹೆಚ್ಚಳ. ಈಶ್ವರ ಆರಾಧನೆ ಶುಭಪ್ರದ. ಶುಭದಿನ: 27, 28

ಸಿಂಹ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ದೇವತಾನುಗ್ರಹ ಕಾಲ. ಕೆಲಸಗಳನ್ನೆಲ್ಲ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಕಾಡಬಹುದು. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದುರಭ್ಯಾಸದಲ್ಲಿ ಭಾಗಿಯಾಗುವ ಸಂಭವವಿರುವುದರಿಂದ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 29, 30

ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ತಲೆನೋವು, ಉಷ್ಣ ಸಂಬಂಧ ತೊಂದರೆ ಕಾಡಬಹುದು. ಹಣಕಾಸಿನ ವಂಚನೆಗಳಾಗಬಹುದು. ಆದಾಯದಲ್ಲಿ ಇಳಿಮುಖವಾಗಿ ಅನಾವಶ್ಯಕ ಖರ್ಚುಗಳು ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ಅನಿರೀಕ್ಷಿತ ಧನಲಾಭ ಯೋಗವಿದೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ. ನೂತನ ಗೃಹ ನಿರ್ಮಾಣ  ಶೀಘ್ರಗತಿಯಲ್ಲಿ ಸಾಗಲಿದೆ. ನೂತನ ವಾಹನ ಖರೀದಿಗೂ ಅವಕಾಶವಿದೆ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 29, 3

ತುಲಾ: ದೂರ ಪ್ರವಾಸ ಯೋಗವಿದೆ. ವಾತ, ಉಷ್ಣ ಸಂಬಂಧಿತ ತೊಂದರೆ ಕಾಡಬಹುದು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ವಿರಸ. ನೂತನ ಗೃಹ ನಿರ್ಮಾಣದ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಈಶ್ವರ, ವಿಷ್ಣು, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 2, 3

ವೃಶ್ಚಿಕ: ದೇವತಾನುಗ್ರಹ ಕಾಲ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ತಲೆನೋವು, ಅಲರ್ಜಿ, ಮೂತ್ರಕೋಶ ಸಂಬಂಧಿತ ತೊಂದರೆ ಕಂಡುಬಂದೀತು. ಆದಾಯವೂ ಹೆಚ್ಚು ಖರ್ಚುಗಳ ಪ್ರಮಾಣವೂ ಹೆಚ್ಚು. ಆದರೆ, ಜಾಗ್ರತೆಯಿಂದ ಉಳಿತಾಯ ಮಾಡಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ವ್ಯಾಸಂಗಕ್ಕೆ ಪೂರಕ ಅವಕಾಶಗಳು ಒದಗಿ ಬರುವವು. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ವಿಷ್ಣು, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 27, 28

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಕಣ್ಣಿನ ಆರೋಗ್ಯದ ಕಡೆಗೆ ನಿಗಾ ವಹಿಸಿ. ದೇವತಾನುಗ್ರಹ ಕಾಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಮಂಗಳ ಯೋಗವಿದೆ. ಗಣಪತಿ, ದುರ್ಗಾರಾಧನೆ ಶುಭಪ್ರದ. ಶುಭದಿನ: 28, 30

ಮಕರ: ಆದಾಯದಲ್ಲಿ ಹೆಚ್ಚಳ. ಖರ್ಚುಗಳೂ ಹೆಚ್ಚು ಇರುವುದರಿಂದ ಹಣಕಾಸಿನ ತೊಂದರೆ ಕಾಡಬಹುದು. ಉದ್ಯೋಗ, ಕಾರ್ಯಕ್ಷೇತ್ರದಲ್ಲಿ ಕಿರಿಕಿರಿ, ಪೈಪೋಟಿ ಎದುರಿಸಬೇಕಾದೀತು. ಉದ್ಯೋಗ ಕಳಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 28, 3

ಕುಂಭ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ನಿಮ್ಮ ನೇತೃತ್ವದಲ್ಲಿ ಮಹತ್ವಪೂರ್ಣ ಕೆಲಸಗಳು ನಡೆಯಲಿವೆ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಅನಿರೀಕ್ಷಿತ ಧನಲಾಭಯೋಗವಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವ ಕಾರಣ ಎಚ್ಚರಿಕೆಯಿಂದ ವ್ಯವಹರಿಸಿ. ಕೌಟುಂಬಿಕ ಕಲಹಗಳು, ದಾಂಪತ್ಯದಲ್ಲೂ ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 2

ಮೀನ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ದೇವತಾನುಗ್ರಹ ಕಾಲ. ಕೆಲಸಗಳಲ್ಲಿ ಸ್ವಲ್ಪ ವಿರೋಧ, ಪೈಪೋಟಿ ಎದುರಿಸಬೇಕಾದೀತು. ಕೌಟುಂಬಿಕ ಕಲಹಗಳು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಬಂದೀತು. ಅನಿರೀಕ್ಷಿತ ಧನಲಾಭಯೋಗವಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಬರುವುದು. ದಾಂಪತ್ಯದಲ್ಲಿ ಸುಖ, ಶಾಂತಿ ಸಮಾಧಾನದ ಕಾಲ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 3

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss