Tuesday, September 22, 2020
Tuesday, September 22, 2020

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ವಾರದ ಭವಿಷ್ಯ (ಆಗಸ್ಟ್ ೩೦ರಿಂದ ಸೆಪ್ಟೆಂಬರ್ ೬ರವರೆಗೆ)

sharing is caring...!

ವಾರದ ಭವಿಷ್ಯ
(ಆಗಸ್ಟ್ ೩೦ರಿಂದ ಸೆಪ್ಟೆಂಬರ್ ೬ರವರೆಗೆ)

ಮೇಷ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಸಂಭ್ರಮ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ. ವ್ಯಾಪಾರಿಗಳಿಗೆ ನಿರೀಕ್ಷಿಸಿದಷ್ಟು ಲಾಭ ಬಾರದು. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಕೆಲಸಗಳನ್ನೆಲ್ಲಾ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 3

ವೃಷಭ: ಆರೋಗ್ಯ ಚೆನ್ನಾಗಿರದು. ಶೀತ ಕಫ ಭಾದೆ ಕಾಡಲಿದೆ. ಉದ್ಯೋಗ ಸ್ಥಾನದಲ್ಲಿ ತುಸು ಕಿರಿಕಿರಿ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಆದರೆ ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಆದಾಯ/ಪ್ರತಿಫಲ ದೊರೆಯದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ನೂತನ ಗೃಹನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 4, 5

ಮಿಥುನ: ಉಷ್ಣಪೀಡೆ, ನರಸಂಬಂಧಿತ ತೊಂದರೆ ಕಾಡಬಹುದು. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಜನಹಿತ ಕಾರ್ಯಗಳನ್ನು ಮಾಡಿ ಜನಮನ್ನಣೆ, ಪ್ರಸಿದ್ಧಿ ಪಡೆಯುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಮುಂದಾಳಾಗುವಿರಿ. ಆದಾಯ ಉತ್ತಮ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ವ್ಯಾಪಾರದಲ್ಲಿ ಮೋಸ, ವಂಚನೆಗಳಾಗುವ ಸಂಭವ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ತಾಯಿಯ ಆರೋಗ್ಯದ ಕುರಿತು ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ವಿಷ್ಣು, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 31, 4

ಕರ್ಕಾಟಕ: ಆರೋಗ್ಯ ಚೆನ್ನಾಗಿರದು. ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳು ಕಾಡುವವು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ. ಸಂಬಂಧದಲ್ಲಿ ಬಿರುಕುಗಳು ಬಂದಾವು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಬಂದೀತು. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ಉತ್ತಮ ಬಾಂಧವ್ಯತೆ. ಸ್ಕಂದ, ಈಶ್ವರ ಆರಾಧನೆ ಶುಭಪ್ರದ. ಶುಭದಿನ: 30, 5

ಸಿಂಹ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ದೇವತಾನುಗ್ರಹ ಕಾಲ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ನಿಮ್ಮ ಒರಟುತನ ಮತ್ತು ಸಿಡುಕಿನ ಸ್ವಭಾವದಿಂದ ಉದ್ಯೋಗ ಕಳಕೊಳ್ಳುವ ಯೋಗ ಇರುವುದರಿಂದ ಜಾಗ್ರತೆ ವಹಿಸಿ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಸಂತತಿ ಶುಭ ಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ದಾಂಪತ್ಯ ಜೀವನದಲ್ಲಿ ಕಲಹ, ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 3

ಕನ್ಯಾ: ಆರೋಗ್ಯದ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ಉಷ್ಣ ಸಂಬಂಧ ತೊಂದರೆ ಕಾಡಬಹುದು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದ ಹಣಕಾಸಿನ ಅಡಚಣೆ ಕಾಡಬಹುದು. ನಿಮ್ಮ ನಿರ್ಲಕ್ಷ್ಯದಿಂದ ಕೆಲಸ ಕಾರ್ಯಗಳು ಅಪಜಯವಾದಾವು. ಕೆಲಸ ಕಳಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ನೂತನ ಗೃಹ ನಿರ್ಮಾಣ ಸಂಬಂಧಿತ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳುವುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 3, 4

ತುಲಾ: ಶೀತ, ಕಫದ ತೊಂದರೆ ಕಾಡಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ಪಾಲು ಕೈಸೇರಿತು. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಆದಾಯ ಉತ್ತಮವಿದ್ದು ಹಣಕಾಸಿನ ಪರಿಸ್ಥಿತಿ ತೃಪ್ತಿಕರ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ದಾಂಪತ್ಯ ಜೀವನ ಸುಖಪ್ರದ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಮಕ್ಕಳಿಂದ ವಿರೋಧ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 3, 4

ವೃಶ್ಚಿಕ: ದೇವತಾನುಗ್ರಹ ಕಾಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ದೊರೆಯಲಿದೆ. ಉದ್ಯೋಗ ಸ್ಥಾನದಲ್ಲಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಸ್ಥಾನ ಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯಲಿದೆ. ದುರ್ಗಾ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 1, 2

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆಗಳು ಕಾಣುತ್ತವೆ. ಶತ್ರುಭಾದೆ ನಿವಾರಣೆಯಾಗಲಿದೆ. ದುರಭ್ಯಾಸಗಳಲ್ಲಿ ಭಾಗಿಯಾಗುವ ಸಂಭವವಿರುವುದರಿಂದ ಜಾಗ್ರತೆ ವಹಿಸಿ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಆದಾಯ/ಪ್ರತಿಫಲ ದೊರೆಯದು. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 3

ಮಕರ: ಕೆಲಸಗಳು ನಿಧಾನಗತಿಯಲ್ಲಿ ಸಾಗುವವು. ಆಲಸ್ಯ ಕಾಡಲಿದೆ. ತಂದೆ/ಹಿರಿಯರ ಆರೋಗ್ಯದ ಕುರಿತು ಜಾಗ್ರತೆ ವಹಿಸಿ. ವಿದ್ಯಾಭ್ಯಾಸದಲ್ಲಿ ತುಸು ಹಿನ್ನಡೆ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ವಾಹನ ಖರೀದಿಗೆ ಅವಕಾಶವಿದೆ. ಆದಾಯದಲ್ಲಿ ಹಿನ್ನಡೆ. ಹಣಕಾಸಿನ ಅಡಚಣೆ ಕಾಡಲಿದೆ. ಕೌಟುಂಬಿಕ ಕಲಹ. ಹಿರಿಯರೊಂದಿಗೆ ಕಲಹ/ಭಿನ್ನಾಭಿಪ್ರಾಯಗಳು. ದಾಂಪತ್ಯದಲ್ಲಿ ವಿರಸ. ಅಕ್ರಮ ಸಂಬಂಧಗಳ ವಿಚಾರದಲ್ಲಿ ಜಾಗ್ರತೆ ವಹಿಸಿ. ಈಶ್ವರ, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 30, 31

ಕುಂಭ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚು ವಿರೋಧ, ಪೈಪೋಟಿ ಎದುರಿಸಬೇಕಾದೀತು. ಆದರೆ, ಜಯ ನಿಮ್ಮ ಪಾಲಿಗೆ ನಿಶ್ಚಿತ. ಆದಾಯ ಉತ್ತಮವಿದ್ದು ಹಣಕಾಸಿನ ವಿಚಾರದಲ್ಲಿ ತೃಪ್ತಿಕರ. ವ್ಯಾಪಾರ/ಸ್ವ ಉದ್ಯಮದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ಬಂದಾವು. ದಾಂಪತ್ಯದಲ್ಲಿ ವಿರಸ. ಸಂತತಿ ಶುಭಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 4

ಮೀನ: ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಕೆಲಸಗಳನ್ನೆಲ್ಲಾ ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಬೇಕಾದ ಅನುಕೂಲತೆಗಳು ಒದಗಿ ಬರಲಿದೆ. ದಾಂಪತ್ಯದಲ್ಲಿ ವಿರಸ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ಗಣಪತಿ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 31, 1

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ...

Don't Miss

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...
error: Content is protected !!