ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ್ತಾ ಆಯುಕ್ತರಿಂದ ಡಾ.ವಿಷ್ಣುವರ್ಧನ್ ಸ್ಮಾರಕ ಸ್ಥಳ ಪರಿಶೀಲನೆ

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಖ್ಯಾತ ನಟ , ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ಶುಕ್ರವಾರ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ ಪಿ. ಎಸ್ . ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊoಡಿದ್ದು, ವಿಶ್ವ ದರ್ಜೆಯ ಸ್ಮಾರಕ ಸ್ಥಳ ಇದಾಗಬೇಕೆಂಬ ಆಶಯ ತಮ್ಮದಾಗಿದೆ ಎಂದ ಡಾ.ಹರ್ಷ , ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದರು.
ಸುಮಾರು 11 ಕೋಟಿ ರೂಗಳ ಯೋಜನೆ ಇದಾಗಿದ್ದು , ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವನ್ನು ಅತ್ಯಂತ ಕ್ಷಿಪ್ರವಾಗಿ ಹಾಗೂ ಉತ್ಕಷ್ಟವಾಗಿ ನಾಡಿಗೆ ನೀಡುವ ಸಂಕಲ್ಪಕ್ಕೆ ವಾರ್ತಾ ಇಲಾಖೆ ಕಟಿಬದ್ಧವಾಗಿದೆ ಎಂದು ಹೇಳಿದರು. ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸಕ್ಷನ್ ಕಂಪನಿ ಮಾಡುತ್ತಿದ್ದು , ಹನ್ನೊಂದು ತಿಂಗಳ ಒಳಗಾಗಿ ಕನ್ನಡ ನಾಡಿಗೆ ಸಮರ್ಪಣೆ ಮಾಡಲಿದೆ.
ವಾರ್ತಾ ಆಯುಕ್ತರ ಈ ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಇಂಜಿನಿಯರುಗಳಾದ ಮಂಜುನಾಥ್ ಮತ್ತು ಸಂರಕದ ಸ್ಮಾರಕದ ರೂಪು ರೂಪು- ರೇಷೆಗಳನ್ನು ನಕ್ಷೆಯೊಂದಿಗೆ ವಿವರಿಸಿದರು. ವಾರ್ತಾ ಅಧಿಕಾರಿ ವಿಜಯಾನಂದ್ ಹಾಗೂ ಅಶೋಕ್ ಕುಮಾರ್ ಕೂಡ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss