Sunday, June 26, 2022

Latest Posts

ವಾರ್ನರ್, ಸಹಾ ಅದ್ಭುತ ಬ್ಯಾಟಿಂಗ್: ಡೆಲ್ಲಿ ಗೆಲುವಿಗೆ 220 ರನ್​ ಗಳ ಟಾರ್ಗೆಟ್

ದುಬೈ: ಡೇವಿಡ್ ವಾರ್ನರ್​ ಹಾಗೂ ವೃದ್ಧಿಮಾನ್ ಸಹಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್​ ತಂಡ 2 ವಿಕೆಟ್ ಕಳೆದುಕೊಂಡು 219ರನ್​ಗಳಿಸಿದೆ.
ಪ್ಲೇ ಆಫ್​ ದೃಷ್ಟಿಯಿಂದ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್​ ಉತ್ತಮ ಆರಂಭಪಡೆಯಿತು.
66 ರನ್​ಗಳಿಸಿ ವಾರ್ನರ್​ ಔಟ್ ಆದರು. ಆದರೆ ವಾರ್ನರ್​ ವಿಕೆಟ್ ಕಳೆದುಕೊಂಡ ನಂತರವೂ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಸಹಾ, ಮನೀಶ್ ಪಾಂಡೆ ಜೊತೆ 63 ರನ್​ಗಳ ಜೊತೆಯಾಟ ನಡೆಸಿ ಮೊತ್ತವನ್ನು ಹೆಚ್ಚಿಸಿದರು. ಸಹಾ87 ರನ್​ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಮನೀಶ್ ಪಾಂಡೆ, ವಿಲಿಯಮ್ಸನ್ ಜೊತೆಗೆ 49 ರನ್​ಗಳಿಸಿದರು. ಪಾಂಡೆ 31 ಎಸೆತಗಳಲ್ಲಿ 44 ರನ್​ಗಳಿಸಿದರೆ, ಕೇನ್ ವಿಲಿಯಮ್ಸನ್ 11 ರನ್​ಗಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss