Tuesday, November 24, 2020

Latest Posts

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...

ವಾರ ಭವಿಷ್ಯ (ಅಕ್ಟೋಬರ್ 18ರಿಂದ 24ರವರೆಗೆ)

ವಾರ ಭವಿಷ್ಯ (ಅಕ್ಟೋಬರ್ 18ರಿಂದ 24ರವರೆಗೆ)

ಮೇಷ: ಆರೋಗ್ಯ ಚೆನ್ನಾಗಿರದು. ಶೀತ ಕಫದ ಭಾದೆ ಕಾಡಲಿದೆ. ಮಾತುತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ಕಲಹ. ಹೆಂಡತಿಯ ಆರೋಗ್ಯದ ಕುರಿತು ನಿಗಾ ವಹಿಸಿ. ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ದೇವತಾನುಗ್ರಹಕಾಲ. ಹಿರಿಯರೊಂದಿಗೆ ಉತ್ತಮ ಅನ್ಯೋನ್ಯತೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 19, 23

ವೃಷಭ: ಶತ್ರು ಭಾದೆ ಕಾಡಲಿದೆ. ಯಾರೊಂದಿಗೂ ಸಂಬಂಧಗಳು ಸರಿಬಾರವು. ಆದಾಯ ಉತ್ತಮವಿದ್ದು ಹಣಕಾಸಿನ ವ್ಯವಸ್ಥೆ ತೃಪ್ತಿಕರ. ನೂತನ ಗೃಹನಿರ್ಮಾಣ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ವಿದ್ಯಾಭ್ಯಾಸಕ್ಕೆ ತುಸು ಆಲಸ್ಯ ಕಾಡಬಹುದು. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಹಿರಿಯರೊಂದಿಗೆ ಮನಸ್ತಾಪಗಳು ಬಂದಾವು. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ತುಸು ಕಲಹ, ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 18, 20

ಮಿಥುನ: ದೇವತಾನುಗ್ರಹ ಕಾಲ. ಕೆಲಸ ಕಾರ್ಯಗಳನ್ನೆಲ್ಲಾ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಕೆಲವೊಂದು ಕಳೆದುಕೊಂಡ ಅವಕಾಶಗಳನ್ನು ಮತ್ತೆ ಪಡೆದುಕೊಳ್ಳುವಿರಿ. ಆದಾಯದಲ್ಲೂ ಸ್ವಲ್ಪ ಹಿನ್ನಡೆ. ನಿಮಗೆ ಸಿಗಬೇಕಾದ ಹಣ ಕ್ಲಪ್ತ ಸಮಯಕ್ಕೆ ಸರಿಯಾಗಿ ದೊರಕದು. ಖರ್ಚಿನ ಪ್ರಮಾಣ ಹೆಚ್ಚಾದೀತು. ಮಕ್ಕಳ ಆರೋಗ್ಯದ ಬಗ್ಗೆ ಬಹಳ ಜಾಗ್ರತೆ ವಹಿಸಿ, ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಶತ್ರುಭಾದೆ ನಿವಾರಣೆಯಾದೀತು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಜಾಗೃತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 21, 22

ಕರ್ಕಾಟಕ: ಆರೋಗ್ಯ ಚೆನ್ನಾಗಿರದು. ಶತ್ರು ಭಾದೆ ಕಾಡಲಿದೆ. ಯಾವುದೇ ಕೆಲಸ ಕಾರ್ಯಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ದೂರ ಪ್ರವಾಸ ಯೋಗವಿದೆ. ನೂತನ ವಾಹನ/ಆಸ್ತಿ/ಭೂಮಿ ಖರೀದಿಗೆ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಆದಾಯದಲ್ಲಿ ಸುಧಾರಣೆ ಕಾಣಲಿದೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಹಿರಿಯರೊಂದಿಗೆ ವಿರೋಧ/ಭಿನ್ನಾಭಿಪ್ರಾಯಗಳು ಬಂದಾವು. ಕೌಟುಂಬಿಕ ಕಲಹ/ ತಾಯಿಯ ಆರೋಗ್ಯ ಚೆನ್ನಾಗಿರದು. ಈಶ್ವರ ಆರಾಧನೆ ಶುಭಪ್ರದ. ಶುಭದಿನ: 23, 24

ಸಿಂಹ: ರಾಜಕೀಯಕ್ಷೇತ್ರದಲ್ಲಿ ಉತ್ತಮ. ಜನಪರ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿಯೋಗವಿದೆ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ವಾಹನ ಚಲಾವಣೆಯಲ್ಲಿ ಬಹಳಷ್ಟು ಜಾಗ್ರತೆ ವಹಿಸಿ. ಕೌಟುಂಬಿಕ ಕಲಹಗಳು, ಹಿರಿಯರ ಆಸ್ತಿ/ಭೂಮಿ ಸಂಬಂಧ ವಿವಾದಗಳು ಬಂದಾವು. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಶತ್ರುಬಾಧೆ ಪರಿಹಾರ ಕಾಣಲಿದೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 23, 24

ಕನ್ಯಾ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ನೂತನ ಗೃಹ ನಿರ್ಮಾಣ ಕಾರ್ಯಶೀಘ್ರಗತಿಯಲ್ಲಿ ಸಾಗಲಿದೆ. ಹಣಕಾಸಿನ ಮೋಸ, ವಂಚನೆಗಳಾದಾವು ಜಾಗ್ರತೆ ವಹಿಸಿ. ಆದಾಯದಲ್ಲಿ ಹೆಚ್ಚಳ. ಕೆಲಸ ಕಾರ್ಯಗಳನ್ನು ಉತ್ತಮರೀತಿಯಲ್ಲಿ ಪೂರ್ಣಗೊಳಿಸುವಿರಿ. ವಿಧ್ಯಾಭ್ಯಾಸದಲ್ಲಿ ಹಿನ್ನಡೆ. ದಾಂಪತ್ಯದಲ್ಲಿ ವಿರಸ. ತಂದೆಯ ಆರೋಗ್ಯದ ಕಾಳಜಿ ವಹಿಸಿ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 21, 22

ತುಲಾ: ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯದಲ್ಲಿ ತುಸು ಹೆಚ್ಚಳ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ವಾತ, ಉಷ್ಣ ಸಂಬಂಧ ತೊಂದರೆ ಕಾಡಲಿದೆ. ಮಕ್ಕಳ ವಿಚಾರದಲ್ಲಿ ಚಿಂತೆ. ನೂತನ ವಾಹನ/ಭೂಮಿ ಖರೀದಿಗೆ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ದಾಂಪತ್ಯದಲ್ಲಿ ಕಲಹ/ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 21, 22

ವೃಶ್ಚಿಕ: ದೇವತಾನುಗ್ರಹಕಾಲ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗ ಬದಲಾವಣೆ/ವರ್ಗಾವಣೆಯ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತಕಾಲ. ಅನಿರೀಕ್ಷಿತ ಧನಲಾಭಯೋಗವಿದೆ. ಅನಾವಶ್ಯಕ ಖರ್ಚುಗಳ ಮೇಲೆ ಹಿಡತವಿಡಿ. ಅವಿವಾಹಿತರಿಗೆ ಶೀಘ್ರವಿವಾಹ ಯೋಗವಿದೆ. ದಾಂಪತ್ಯಜೀವನ ಸುಖಪ್ರದ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 23, 24

ಧನು: ದೇವತಾನುಗ್ರಹಕಾಲ. ಕೆಲಸ ಕಾರ್ಯಗಳನ್ನೆಲ್ಲ ಉತ್ತಮರೀತಿಯಲ್ಲಿ ಪೂರ್ಣಗೊಳಿಸುವಿರಿ. ಆದಾಯದಲ್ಲಿ ಹೆಚ್ಚಳ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಗೃಹ ಕುಟುಂಬದಲ್ಲಿ ದೇವತಾಕಾರ್ಯ, ಮಂಗಳ ಕಾರ್ಯಗಳ ಸಂಭ್ರಮ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಕೌಟುಂಬಿಕ ಕಲಹಗಳು. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 18, 21 

ಮಕರ: ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯದಲ್ಲಿ ಹೆಚ್ಚಳ ಕಂಡು ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಲಿದೆ. ಉದರ ಸಂಬಂಧ ತೊಂದರೆ ಕಾಡಬಹುದು. ಹಿರಿಯರೊಂದಿಗೆ ಮನಸ್ತಾಪ. ಮಕ್ಕಳು, ನಿಮ್ಮ ಮಾರ್ಗದರ್ಶನವನ್ನು ವಿರೋಧಿಸುವರು. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಕಿರಿಕಿರಿ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯಜೀವನ ಸುಖಪ್ರದ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ಸ್ಕಂದ, ದುರ್ಗಾರಾಧನೆ ಶುಭಪ್ರದ. ಶುಭದಿನ: 18, 23

ಕುಂಭ: ದೇವತಾನುಗ್ರಹ ಕಾಲ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ನಾವು ಮಾಡದ ತಪ್ಪುಗಳ ಅಪವಾದಗಳನ್ನು ಎದುರಿಸಬೇಕಾದೀತು. ಆದಾಯ ಉತ್ತಮವಿದ್ದು, ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಮಾತುತೀಕ್ಷ್ಣವಾಗಿ ಸ್ವಲ್ಪ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ದುರಭ್ಯಾಸದಲ್ಲಿ ಭಾಗಿಯಾಗುವ, ಪ್ರಸಂಗ ಬಂದು ಅಪಮಾನಕರ ಘಟನೆಗಳನ್ನು ಎದುರಿಸಬೇಕಾದೀತು ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಕಲಹ, ವಿರಸ, ಉದ್ಯೋಗದ ಬಗ್ಗೆ ಅವಸರದ ನಿರ್ಣಯಗಳು ಬೇಡ. ಈಶ್ವರ, ವಿಷ್ಣು, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 19, 22 

ಮೀನ: ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಂಡೀತು. ಉದ್ಯೋಗ, ಕೆಲಸ ಕಾರ್ಯಗಳನ್ನು ಉತ್ತಮರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಅನಾವಶ್ಯಕ ಖರ್ಚುಗಳ ಮೇಲೆ ಹಿಡತವಿಡಿ. ತಂದೆಯ/ಹಿರಿಯರ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ. ದಾಂಪತ್ಯದಲ್ಲಿ ಕಲಹ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಅನಿರೀಕ್ಷಿತ ಧನಲಾಭ ಯೋಗವಿದೆ. ವ್ಯಾಪಾರದಲ್ಲಿ ನಷ್ಟಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 21, 22

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...

ನಾಳೆ ರೆಬಲ್‍ಸ್ಟಾರ್ ಅಂಬರೀಶ್ ಕಂಚಿನ ಪ್ರತಿಮೆ ಅನಾವರಣ

ಹೊಸ ದಿಗಂತ ವರದಿ, ಮಂಡ್ಯ: ರೆಬಲ್‍ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಮದ್ದೂರು ತಾಲೂಕು ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಗುಡಿ ನಿರ್ಮಿಸಿ, ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆ ಪ್ರತಿಮೆ ಅನಾವರಣ...

Don't Miss

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

ಕೊರೋನಾ ಭೀತಿ: ಇಲ್ಲಿ ಡಿ. 15 ರವರೆಗೆ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 15 ರವರೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ಸರ್ಕಾರ...

ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ಶಿವಸೇನೆ ಸರಕಾರದಿಂದ ಒಂದು ಆದೇಶ ಜಾರಿಯಾಗಿದೆ. ಹೌದು , ಮುಂಬೈ ತೆರಳುವವರಿಗೆ ಕೊರೋನಾ ನೆಗೆಟಿವ್​ ರಿಪೋರ್ಟ್ ಹೊಂದುವುದು...
error: Content is protected !!