spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ಅಕ್ಟೋಬರ್ 25ರಿಂದ 31)

- Advertisement -Nitte

ಮೇಷ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಶೀತ, ಕಫ ಭಾದೆ ಕಾಡಲಿದೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಒಡಕು ಕಂಡುಬಂದೀತು. ಉತ್ತಮ ದೇವತಾನುಗ್ರಹ ಕಾಲ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಯಾವುದೇ ಬೇರೆ ಕೆಲಸಗಳಿಗೆ ಮುಂದಾದರೂ ಹೆಚ್ಚು ವಿರೋಧ/ಪೈಪೋಟಿ ಎದುರಿಸಬೇಕಾದೀತು. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅಭ್ಯಾಸದಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬಾರದು. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು, ದುರ್ಗಾರಾಧನೆ ಶುಭಪ್ರದ. ಶುಭದಿನ: 25, 27

ವೃಷಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಗುರು ಅಷ್ಟಮ, ಶುಕ್ರ ನೀಚ, ರಾಹುವಿನ ಪ್ರವೇಶ ನಿಮಗೆ ಪ್ರತಿಕೂಲ ಫಲಗಳನ್ನೀಯುವುದರಿಂದ ಯಾವುದೇ ಕೆಲಸಗಳನ್ನು ಎಚ್ಚರದಿಂದ ಪ್ರಾರಂಭಿಸಿ. ಅನಿರೀಕ್ಷಿತ ಧನಲಾಭಯೋಗವಿದೆ. ಆದಾಯ ಉತ್ತಮ. ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಒಬ್ಬ ಉತ್ತಮ ನಾಯಕ/ಜನಪ್ರತಿನಿಧಿ ಎನಿಸಿಕೊಳ್ಳುವಿರಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 28, 29

ಮಿಥುನ: ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಹೆಚ್ಚು ಪೈಪೋಟಿ ಎದುರಿಸಬೇಕಾದೀತು. ಅನಿರೀಕ್ಷಿತ ಧನಲಾಭ ಯೋಗವಿದೆ. ತಪ್ಪಿ ಹೋದ ಅವಕಾಶಗಳು ಪುನಃ ನಿಮ್ಮ ಪಾಲಿಗೆ ದೊರಕಲಿವೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ದುಂದುವೆಚ್ಚಗಳಿಂದಾಗಿ ಹಣಕಾಸಿನ ಅಡಚಣೆಯೂ ಬಂದೀತು. ಕುಟುಂಬದಲ್ಲಿ ಶುಭಕಾರ್ಯ/ದೇವತಾ ಕಾರ್ಯಗಳ ಸಂಭ್ರಮ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ಮಕ್ಕಳ ಆರೋಗ್ಯದ ಕಾಳಜಿ ವಹಿಸಿ. ಈಶ್ವರ, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 29, 31

ಕರ್ಕಾಟಕ: ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸಕಾರ್ಯಗಳಿಗೆ ಮುಂದಾದರೂ ಕೆಲವೊಂದು ವಿಘ್ನ, ಅಡಚಣೆಗಳು ಬಂದಾವು. ನಿಮ್ಮ ಆಲೋಚನೆ, ಯೋಜನೆಗಳಿಗೆ ಪೂರಕ ಸಹಾಯ/ಪ್ರೋತ್ಸಾಹ ದೊರಕದು. ಕೌಟುಂಬಿಕ ಕಲಹಗಳು ನಿಮಗೆ ದೊರಕಬೇಕಾದ ಹಿರಿಯರ ಪಾಲು ಕೈತಪ್ಪಿ ಹೋದೀತು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ದುರಭ್ಯಾಸದಲ್ಲಿ ಭಾಗಿಯಾಗದಂತೆ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 30, 31

ಸಿಂಹ: ದೇವತಾನುಗ್ರಹ ಕಾಲ. ಕೆಲಸಗಳನ್ನೆಲ್ಲ ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಆರೋಗ್ಯದ ಕಡೆ ಸ್ವಲ್ಪ ಗಮನಕೊಡಿ. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಹಿರಿಯರ ಭೂಮಿ/ಆಸ್ತಿ ಸಂಬಂಧವಾಗಿ ವಾದ ವಿವಾದಗಳು ಬಂದಾವು. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಸಂತತಿ ಶುಭ ಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: ೨೭, ೩೧

ಕನ್ಯಾ: ದೇವತಾನುಗ್ರಹ ಕಾಲ. ಕುಟುಂಬದಲ್ಲಿ ದೇವತಾಕಾರ್ಯಗಳ ಸಂಭ್ರಮ. ನೂತನ ವಾಹನ ಖರೀದಿಗೆ ಅವಕಾಶವಿದೆ. ಭೂಮಿ/ಆಸ್ತಿ/ನಿವೇಶನ ಖರೀದಿಗೆ ಸೂಕ್ತ ಕಾಲ. ದಾಂಪತ್ಯದಲ್ಲಿ ವಿರಸ. ವಿವಾಹ ಸಂಬಂಧಿತ ಕಾರ್ಯಗಳಿಗೆ ವಿಘ್ನ, ಅಡಚಣೆಗಳು ಬಂದಾವು. ಮಕ್ಕಳ ಆರೋಗ್ಯದ ಕುರಿತು ಜಾಗ್ರತೆ ವಹಿಸಿ. ಹಣಕಾಸಿನ ಅಡಚಣೆ ಬಂದೀತು. ವ್ಯಾಪಾರಿಗಳಿಗೆ ಜಾಗ್ರತೆಯಿಂದ ವ್ಯವಹರಿಸಿದಲ್ಲಿ ಉತ್ತಮ ಲಾಭ ದೊರೆಯಲಿದೆ. ತಂದೆಯ ಆರೋಗ್ಯದ ಕುರಿತು ಜಾಗ್ರತೆ ವಹಿಸಿ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: ೨೭, ೨೮

ತುಲಾ: ಆರೋಗ್ಯದ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ಉಷ್ಣ, ವಾತ ಸಂಬಂಧಿತ ತೊಂದರೆ ಕಾಡಬಹುದು. ನೂತನ ಗೃಹ ನಿರ್ಮಾಣದ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ಹಣದ ಮೋಸ ವಂಚನೆಗೊಳ್ಳುವ ಯೋಗ ಇರುವುದರಿಂದ ಜಾಗ್ರತೆ ಅವಶ್ಯ. ದಾಂಪತ್ಯದಲ್ಲಿ ಕಲಹ, ವಿರಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ವಿಷ್ಣು ನರಸಿಂಹ ಆರಾಧನೆ ಶುಭಪ್ರದ. ಶುಭದಿನ: ೩೦, ೩೧

ವೃಶ್ಚಿಕ: ದೇವತಾನುಗ್ರಹ ಕಾಲ. ಹಣದ ಮೋಸ, ವಂಚನೆಯಾದೀತು. ನಿಮ್ಮ ಕೈ ಸೇರಬೇಕಾದ ಹಣ ಸಕಾಲದಲ್ಲಿ ದೊರೆಯದು. ನಷ್ಟ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಕೃಷಿಯಿಂದ ನಷ್ಟ. ವ್ಯಾಪಾರದಲ್ಲೂ ನಷ್ಟ ಯೋಗವೇ. ದೂರ ಪ್ರವಾಸ ಯೋಗವಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ವ್ಯಾಸಂಗಕ್ಕೆ ಉತ್ತಮ ಅವಕಾಶ ದೊರೆಯಲಿದೆ. ಈಶ್ವರ ಆರಾಧನೆ ಶುಭಪ್ರದ. ಶುಭದಿನ: ೨೫, ೩೧

ಧನು: ದೇವತಾನುಗ್ರಹ ಕಾಲ. ಕೆಲಸಗಳನ್ನೆಲ್ಲ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಉತ್ತಮ ಆದಾಯವಿದ್ದು, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ ವಾಹನ ಖರೀದಿ/ಬದಲಾವಣೆ ಯೋಗವಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಗಣಪತಿ ಆರಾಧನೆ ಶುಭಪ್ರದ. ಶುಭದಿನ: ೨೬, ೨೭

ಮಕರ: ಉದ್ಯೋಗ ಬದಲಾವಣೆಗೆ ಅವಕಾಶವಿದೆ. ಕೆಲಸ, ಕಾರ್ಯಗಳನ್ನೆಲ್ಲ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ವಾಹನ ಚಲಾವಣೆಯಲ್ಲಿ ಬಹಳಷ್ಟು ಜಾಗ್ರತೆ ವಹಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ. ವಿದ್ಯಾಭ್ಯಾಸಕ್ಕೆ ಆಲಸ್ಯ ಕಾಡಲಿದೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 28, 29 

ಕುಂಭ: ದೇವತಾನುಗ್ರಹ ಕಾಲ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಆಲಸ್ಯ/ದೇಹಭಾರ ಕಾಡಲಿದೆ. ಆದಾಯ ತೃಪ್ತಿದಾಯಕವಾಗಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ವ್ಯಸನ/ದುರಭ್ಯಾಸದಲ್ಲಿ ಭಾಗಿಯಾಗುವ ಸಂಭವ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 27, 31

ಮೀನ: ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧದಲ್ಲಿ ಒಡಕುಗಳು ಕಂಡುಬಂದಾವು. ಉತ್ತಮ ದೇವತಾನುಗ್ರಹ ಕಾಲ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಬಂದೀತು. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ನಿರೀಕ್ಷಿತ ಮಟ್ಟದ ಲಾಭ ಬಾರದು. ಅನಿರೀಕ್ಷಿತ ಧನಲಾಭ ಯೋಗವಿದೆ. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 25, 29

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss