ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ಆಗಸ್ಟ್ 16ರಿಂದ 22ರವರೆಗೆ)

ವಾರ ಭವಿಷ್ಯ (ಆಗಸ್ಟ್ 16ರಿಂದ 22ರವರೆಗೆ)

ವಿಶ್ವನಾಥ ತಂತ್ರಿ

ಮೇಷ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಔಷಧೋಪಚಾರದಿಂದ ಗುಣಮುಖ ಹೊಂದಲಿದ್ದೀರಿ. ಅನಿರೀಕ್ಷಿತ ಧನಲಾಭ ಯೋಗವಿದೆ. ಉಳಿತಾಯವೂ ಆಗಲಿದೆ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ಉಳಿದಂತೆ ಕೆಲಸ ಕಾರ್ಯಗಳನ್ನೆಲ್ಲಾ ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರಕಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಅವಕಾಶ ದೊರೆಯಲಿದೆ. ಸಂತತಿ ಶುಭಸೂಚನೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 16, 18

ವೃಷಭ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಉನ್ನತ ವ್ಯಾಸಂಗಕ್ಕೆ ಪೂರಕ ಅವಕಾಶ ದೊರೆಯಲಿದೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಆದಾವು. ಹಿರಿಯರೊಂದಿಗೆ ಕಲಹ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ಪ್ರೋತ್ಸಾಹ ದೊರಕದು. ನಿಮ್ಮ ಪರಿಶ್ರಮ, ಪ್ರಯತ್ನಕ್ಕೆ ತಕ್ಕುದಾದ ಆದಾಯ/ಪ್ರತಿಫಲ ದೊರಕದು. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ಗಣಪತಿ ಆರಾಧನೆ ಅವಶ್ಯ. ಶುಭದಿನ: 17,18

ಮಿಥುನ: ದೇವತಾನುಗ್ರಹ ಕಾಲ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಉಷ್ಣಪೀಡೆ ಕಾಡಲಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯಲಿವೆ. ಆದಾಯ ತೃಪ್ತಿಕರವಾಗಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ಬಾರದು. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ, ಜನಮನ್ನಣೆ ಪಡೆಯುವಿರಿ. ಗಣಪತಿ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 19, 20

ಕರ್ಕಾಟಕ: ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸಗಳಿಗೆ ಮುಂದಾದರೂ ಅಡೆ, ತಡೆ, ವಿಘ್ನ, ಅಡಚಣೆಗಳು ಎದುರಾಗುವವು. ಆರೋಗ್ಯವೂ ಕೂಡಾ ಚೆನ್ನಾಗಿರದು. ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ಸರಿ ಹೊಂದುವ ಆದಾಯ, ಪ್ರತಿಫಲ ದೊರಕದು. ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ವ್ಯಾಪಾರಿಗಳಿಗೆ ಜಾಗ್ರತೆಯಿಂದ ವ್ಯವಹರಿಸಿದಾಗ ಉತ್ತಮ ಲಾಭಾಂಶ ದೊರೆಯಲಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 17, 22

ಸಿಂಹ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಉತ್ತಮ ದೇವತಾನುಗ್ರಹ ಕಾಲ. ಕೆಲಸ ಕಾರ್ಯಗಳನ್ನೆಲ್ಲಾ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದುರಭ್ಯಾಸಗಳಲ್ಲಿ ಭಾಗಿಯಾಗದಂತೆ ಜಾಗ್ರತೆ ವಹಿಸಿ. ವ್ಯಾಪಾರಿಗಳಿಗೆ ನಿರೀಕ್ಷಿಸಿದಷ್ಟು ಲಾಭಾಂಶ ದೊರೆಯದು. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 20, 21

ಕನ್ಯಾ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಉಷ್ಣಪೀಡೆ, ಶಾರೀರಿಕ ಅಸ್ವಾಸ್ಥ್ಯ ಕಂಡುಬರಲಿದೆ. ಕೆಲಸ, ಕಾರ್ಯಗಳ ಕಡೆಗಿನ ನಿರ್ಲಕ್ಷ್ಯವನ್ನು ಬಿಟ್ಟುಬಿಡಿ. ಉದ್ಯೋಗ ಸ್ಥಾನದಲ್ಲಿ ಪೈಪೋಟಿ ಎದುರಿಸಬೇಕಾದೀತು. ದೂರಪ್ರವಾಸ ಯೋಗವಿದೆ. ನೂತನ ಗೃಹನಿರ್ಮಾಣ ಕಾರ್ಯವು ಶೀಘ್ರಗತಿಯಲ್ಲಿ ಸಾಗಲಿದೆ. ಕುಟುಂಬದಲ್ಲಿ ದೇವತಾಕಾರ್ಯ, ಮಂಗಳಕಾರ್ಯಗಳ ಸಂಭ್ರಮ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಹಣಕಾಸಿನ ತೊಂದರೆ ಕಾಡಬಹುದು. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 18, 22

ತುಲಾ: ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಕುಟುಂಬದಲ್ಲಿ ದೇವತಾಕಾರ್ಯ, ಮಂಗಳಕಾರ್ಯಗಳ ಸಂಭ್ರಮ. ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಅವಿವಾಹಿತರಿಗೆ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ಕಲಹ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಜನಪರ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 19, 21

ವೃಶ್ಚಿಕ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶ ದೊರೆಯಲಿದೆ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯಲಿವೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ದಾಂಪತ್ಯದಲ್ಲಿ ಸುಖ ಶಾಂತಿ ಸಮಾಧಾನದ ಕಾಲ. ಅನಿರೀಕ್ಷಿತ ಧನಲಾಭ ಯೋಗವಿದೆ. ದುರ್ಗಾ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 20, 22

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಹಿರಿಯರು ಪ್ರಶಂಸಿಸುವರು. ದುರಭ್ಯಾಸದಲ್ಲಿ ಭಾಗಿಯಾಗಿ ಅಪಮಾನಕರ ಘಟನೆಗಳನ್ನು ಎದುರಿಸಬೇಕಾದೀತು. ಜಾಗ್ರತೆ ವಹಿಸಿ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಇರಲಿ. ದಾಂಪತ್ಯದಲ್ಲಿ ವಿರಸ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ಮಾತು ತೀಕ್ಷ್ಣವಾಗಿ ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 16, 17

ಮಕರ: ಆರೋಗ್ಯದಲ್ಲಿ ಸುಧಾರಣೆ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಆಲಸ್ಯ, ಉದಾಸೀನತೆ ಕಾಡಲಿದೆ. ನೂತನ ಗೃಹ ನಿರ್ಮಾಣ ಸಂಬಂಧಿ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಕಾಡಲಿದೆ. ದಾಂಪತ್ಯ ಜೀವನ ಸುಖಪ್ರದ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ನಿರೀಕ್ಷಿತ ಫಲಿತಾಂಶ ದೊರಕದು. ತಂದೆಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 16, 18

ಕುಂಭ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಆದಾಯ ಉತ್ತಮ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಸಂತತಿ ಶುಭಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಸ್ವ ಉದ್ಯಮದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಬಂದೀತು. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ಬಾರದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸೂಕ್ತ ಅವಕಾಶ ದೊರಕಲಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 19, 21

ಮೀನ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯವಾದೀತು. ಆದಾಯ ಉತ್ತಮ ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರದಲ್ಲೂ ಉತ್ತಮ ಲಾಭಾಂಶ ದೊರೆಯಲಿದೆ. ಕುಟುಂಬದಲ್ಲಿ ದೇವತಾ ಕಾರ್ಯ, ಮಂಗಳ ಕಾರ್ಯಗಳ ಸಂಭ್ರಮ. ದಾಂಪತ್ಯದಲ್ಲಿ ಕಲಹ. ವಿವಾಹ ಸಂಬಂಧಿತ ಕಾರ್ಯಗಳಿಗೆ ವಿಘ್ನಗಳು ಬಂದಾವು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸೂಕ್ತ ಅವಕಾಶಗಳು ದೊರೆಯಲಿವೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 19, 20

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss