Tuesday, August 16, 2022

Latest Posts

ವಾರ ಭವಿಷ್ಯ (ಆಗಸ್ಟ್ 3ರಿಂದ 15ರವರೆಗೆ)

ವಾರ ಭವಿಷ್ಯ (ಆಗಸ್ಟ್ 9ರಿಂದ 15ರವರೆಗೆ)

-ಶ್ರೀನಿವಾಸ ತಂತ್ರಿ

ಮೇಷ: ದೇವತಾನುಗ್ರಹ ಕಾಲ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಆರೋಗ್ಯ ಅಷ್ಟೊಂದು ಉತ್ತಮವಾಗಿರದು. ಶೀಗ, ಕಫದ ತೊಂದರೆ ಕಾಡಲಿದೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಉಳಿತಾಯವಾಗದು. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಇತರರಿಗಾಗಿ ನಿಮ್ಮ ಸಹಾಯ/ಪ್ರಯತ್ನವನ್ನು ಮೀಸಲಿಡುವಿರಿ. ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 13, 14

ವೃಷಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ನಿಃಶಕ್ತಿ, ಸಂಧಿನೋವುಗಳು ಕಾಡಲಿವೆ. ಆದಾಯ ಉತ್ತಮವಿದ್ದು, ಹಣಕಾಸಿನ ವ್ಯವಸ್ಥೆ ತೃಪ್ತಿಕರ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭ ದೊರೆಯದು. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಜನಹಿತ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಫಲಿತಾಂಶ ಬಾರದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಇತರರಿಗಾಗಿ ನಿಮ್ಮ ಸಹಾಯ/ಪ್ರಯತ್ನವನ್ನು ಮೀಸಲಿಡುವಿರಿ. ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 14, 15

ಮಿಥುನ: ದೇವತಾನುಗ್ರಹ ಕಾಲ. ಕೌಟುಂಬಿಕವಾಗಿ ಸುಖ, ಶಾಂತಿ, ಸಮಾಧಾನದ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಗದಿಯಾಗಲಿದೆ. ದಾಂಪತ್ಯದಲ್ಲಿ ಸುಖ, ಶಾಂತಿ ಸಮಾಧಾನದ ಕಾಲ. ಶೀತ, ಕಫ ಭಾದೆ ಕಾಡಬಹುದು. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಕೆಲಸ, ಕಾರ್ಯಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಆದರೆ, ನಿಮ್ಮ ಪರಿಶ್ರಮ, ಪ್ರಯತ್ನಗಳಿಗೆ ಸರಿಯಾದ ಆದಾಯ, ಪ್ರತಿಫಲ ದೊರಕದು. ಹಣಕಾಸಿನ ಉಳಿತಾಯವಾಗದು. ವಾಹನ ಖರೀದಿಗೆ ಅವಕಾಶವಿದೆ. ನೂತನ ಗೃಹನಿರ್ಮಾಣ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 11, 15

ಕರ್ಕಾಟಕ: ಯಾವುದೇ ಕೆಲಸಗಳಿಗೆ ಮುಂದಾದರೂ ವಿರೋಧ, ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ಶತ್ರುಭಾದೆ ಕಾಡಲಿದೆ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಉಷ್ಣ, ವಾತಸಂಬಂಧಿ ತೊಂದರೆ ಕಾಡಬಹುದು. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಆದಾಯದಲ್ಲಿ ಹಿನ್ನಡೆ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಲಿದೆ. ವ್ಯಾಪಾರದಲ್ಲಿ ಜಾಗ್ರತೆ ವಹಿಸಿ. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಹೊಸ ಆಲೋಚನೆ, ನಿರ್ಣಯಗಳು ಸದ್ಯ ಬೇಡ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 11, 14

ಸಿಂಹ: ದೇವತಾನುಗ್ರಹ ಕಾಲ. ಕೆಲಸ, ಕಾರ್ಯಗಳನ್ನೆಲ್ಲಾ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ದೂರಪ್ರವಾಸ, ತೀರ್ಥಯಾತ್ರೆ, ಪುಣ್ಯಕ್ಷೇತ್ರಗಳ ಸಂದರ್ಶನ ಯೋಗವಿದೆ. ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣವು ಹೆಚ್ಚಾಗಿ ಹಣಕಾಸಿನ ಅಡಚಣೆ ಬಂದೀತು. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಕಲಹ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 13, 15

ಕನ್ಯಾ: ದೇವತಾನುಗ್ರಹ ಕಾಲ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಆದಾಯ ಉತ್ತಮವಿದ್ದು, ಉಳಿತಾಯವೂ ಆಗಲಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ನೂತನ ಗೃಹ ನಿರ್ಮಾಣ ಕಾರ್ಯ ಭರದಿಂದ ಸಾಗಲಿದೆ. ವಾಹನ ಖರೀದಿಗೂ ಅವಕಾಶವಿದೆ. ದಾಂಪತ್ಯದಲ್ಲಿ ವಿರಸ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ದುರ್ಗಾರಾಧನೆ ಶುಭಪ್ರದ. ಶುಭದಿನ: 10, 14

ತುಲಾ: ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಕೃಷಿ ಸಂಬಂಧ ಕಾರ್ಯಗಳನ್ನು ಮಾಡಿ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆದಾಯ ಉತ್ತಮವಿದ್ದು, ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಕುಟುಂಬದಲ್ಲಿ ದೇವತಾಕಾರ್ಯ, ಮಂಗಳಕಾರ್ಯಗಳ ಸಂಭ್ರಮ. ವಿದ್ಯಾಭ್ಯಾಸ ಹಿನ್ನಡೆ. ದಾಂಪತ್ಯದಲ್ಲಿ ವಿರಸ. ಈಶ್ವರ ಆರಾಧನೆ ಶುಭಪ್ರದ. ಶುಭದಿನ: ೯, ೧೦

ವೃಶ್ಚಿಕ: ದೇವತಾನುಗ್ರಹ ಕಾಲ. ಕೆಲಸಗಳನ್ನೆಲ್ಲಾ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಸ್ಥಾನಬಡ್ತಿ ಯೋಗವಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ. ಆದಾಯದಲ್ಲಿ ಹಿನ್ನಡೆ. ದುಂದುವೆಚ್ಚಗಳ ಮೇಲೆ ಹಿಡಿತವಿಡಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 12, 13

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಔಷಧೋಪಚಾರದಲ್ಲಿ ಗುಣಮುಖ ಕಾಣಲಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯಲಿವೆ. ಕೌಟುಂಬಿಕ ಕಲಹಗಳು. ಭೂಮಿ/ಆಸ್ತಿ ವಿಚಾರದಲ್ಲಿ ವಾದವಿವಾದಗಳು ಬಂದಾವು. ವ್ಯಾಪಾರದಲ್ಲಿ ನಷ್ಟ ಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಉದ್ಯೋಗ ಕೈಬಿಟ್ಟು ಹೋದಿತು ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 13, 15

ಮಕರ: ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಕಾಣಲಿದೆ. ವ್ಯಾಪಾರ/ಉದ್ಯಮದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ಬಂದಾವು. ಕೆಲಸಗಳಲ್ಲಿ ಆಲಸ್ಯ, ನಿಧಾನಗತಿಯಲ್ಲಿ ಸಾಗುವವು. ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ. ಮಕ್ಕಳೊಂದಿಗೆ ವಿರೋಧ. ದಾಂಪತ್ಯದಲ್ಲಿ ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 9, 10

ಕುಂಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯುವವು. ಮಾತು ತೀಕ್ಷ್ಣವಾಗಿ ಭಿನ್ನಾಭಿಪ್ರಾಯಗಳು, ಸಂಬಂಧದಲ್ಲಿ ಬಿರುಕುಗಳು ಬರುವವು. ದಾಂಪತ್ಯದಲ್ಲಿ ವಿರಸ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 10, 12

ಮೀನ: ದೇವತಾನುಗ್ರಹ ಕಾಲ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಸಂಭ್ರಮ. ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯ. ವಾತ, ಪಿತ್ಥ ಸಂಬಂಧ ತೊಂದರೆಗಳು ಕಾಡುವವು. ಸಂತತಿ ಶುಭಸೂಚನೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ಲಭಿಸಲಿವೆ. ವ್ಯಾಪಾರಿಗಳಿಗೆ ನಷ್ಟ ಸಾಧ್ಯತೆ ಇರುವ ಕಾರಣ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 13, 14

——-

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss