ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ಜುಲೈ ೫ರಿಂದ ೧೧ರವರೆಗೆ)

 

ವಾರ ಭವಿಷ್ಯ(ಜುಲೈ ೫ರಿಂದ ೧೧ರವರೆಗೆ)

*ವಿಶ್ವನಾಥ ತಂತ್ರಿ

ಮೇಷ: ಶೀತ ಕಫ ಭಾದೆ ಕಾಡಬಹುದು. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಗಳನ್ನು ನೆರವೇರಿಸಿ ಪ್ರಸಿದ್ಧಿ ಪಡೆಯುವಿರಿ. ಮಹತ್ವಪೂರ್ಣ ಮತ್ತು ನಿಮ್ಮ ವ್ಯಕ್ತಿತ್ವ ರೂಪಿಸುವ ಕಾರ್ಯಗಳನ್ನು ಮಾಡುವ ಅವಕಾಶ ದೊರೆಯುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲತೆಗಳು ಒದಗಿ ಬರುತ್ತವೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರದಲ್ಲಿ ನಷ್ಯ ಸಾಧ್ಯತೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ದಾಂಪತ್ಯದಲ್ಲಿ ಅನ್ಯೋನ್ಯತೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 7, 9

ವೃಷಭ: ಆರೋಗ್ಯ ಚೆನ್ನಾಗಿರದು. ಬಹಳಷ್ಟು ಜಾಗ್ರತೆ ಅವಶ್ಯ. ಸಂಧಿನೋವುಗಳು/ನಿಃಶಕ್ತಿ ಕಾಡಬಹುದು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಹಣದ ಉಳಿತಾಯವೂ ಆಗಲಿದೆ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ. ಉದ್ಯೋಗ ಸ್ಥಾನದಲ್ಲಿ ಹಿನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 10, 11

ಮಿಥುನ: ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಆದರೆ, ಉಷ್ಣಪೀಡೆ ಕಾಡಬಹುದು. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಸ್ವಉದ್ಯಮದಲ್ಲಿ ಪೈಪೋಟಿ ಎದುರಿಸಬೇಕಾದೀತು. ಜಯ ನಿಮ್ಮ ಪಾಲಿಗೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನದಲ್ಲಿ ಉತ್ತಮ ಅನ್ಯೋನ್ಯತೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಬೇಕಾದ ಸವಲತ್ತುಗಳು ಒದಗಿ ಬರುತ್ತವೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 6, 7

ಕರ್ಕಾಟಕ: ಶತ್ರುಬಾಧೆ ಕಾಡಲಿದೆ. ಯಾವ ಕೆಲಸಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ಸ್ವಜನರಿಂದ ಪೈಪೋಟಿ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವ್ಯವಹರಿಸಿ. ಹಿರಿಯರೊಂದಿಗೆ ಮನಸ್ತಾಪಗಳು. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 6, 7

ಸಿಂಹ: ದೇವತಾನುಗ್ರಹ ಕಾಲ. ಮಹತ್ವಪೂರ್ಣ ಕಾರ್ಯಗಳನ್ನು ಪೂರೈಸಿ ಪ್ರಸಿದ್ಧಿ ಪಡೆಯುವಿರಿ. ಒಬ್ಬ ಸಾಮಾಜಿಕ ನಾಯಕ/ರಾಜಕೀಯ ಕಾರ್ಯಕರ್ತನಾಗಿ ಮಿಂಚಿ ಪ್ರೀತಿ, ಗೌರವಾದರ ಗಿಟ್ಟಿಸಿಕೊಳ್ಳುವಿರಿ. ಆದಾಯ ಉತ್ತಮ, ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹಯೋಗವಿದೆ. ದಾಂಪತ್ಯದಲ್ಲಿ ವಿರಸ. ಈಶ್ವರ, ಗಣಪತಿ ಆರಾಧನೆ ಶುಭಕರ. ಶುಭದಿನ: 7, 8

ಕನ್ಯಾ: ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನಹಿತ ಕಾರ್ಯಗಳನ್ನು ಮಾಡಿಸಿ ಪ್ರಸಿದ್ಧಿ ಪಡೆಯುವಿರಿ. ದಾಂಪತ್ಯದಲ್ಲಿ ಕಲಹ. ಸ್ವಲ್ಪ ಭಿನ್ನಾಭಿಪ್ರಾಯದ ತೀರ್ಮಾನದಿಂದ ನಷ್ಟ ಅನುಭವಿಸಬೇಕಾಗಿ ಬಂದೀತು. ದುರ್ಗಾ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 9, 10

ತುಲಾ: ದುರಭ್ಯಾಸಗಳಿಗೆ ಬಲಿಯಾಗಿ ಅಪಮಾನಕರ ಪ್ರಸಂಗಗಳನ್ನು ಎದುರಿಸಬೇಕಾಗಿ ಬಂದೀತು. ಯಾವುದೇ ವಿಚಾರದಲ್ಲೂ ಜಾಗ್ರತೆ ವಹಿಸಿ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ದೊರೆಯದು. ನೂತನ ಗೃಹ ನಿರ್ಮಾಣ ಸಂಬಂಧಿತ ಕಾರ್ಯಗಳು ಶೀಘ್ರಗತಿಯಲ್ಲಿ ಸಾಗುವವು. ದಾಂಪತ್ಯದಲ್ಲಿ ವಿರಸ. ಯಾರೊಂದಿಗೂ ಸಂಬಂಧ ಸರಿಬಾರದು. ಯಾವುದೇ ಬದಲಾವಣೆ, ಅವಸರದ ತೀರ್ಮಾನಗಳು ಬೇಡ. ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 6, 10

ವೃಶ್ಚಿಕ: ದೇವತಾನುಗ್ರಹ ಕಾಲ. ಕೆಲಸಗಳನ್ನು ಉತ್ತಮ ಯಶಸ್ವೀ ರೀತಿಯಲ್ಲಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿಯೋಗವಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಹಣಕಾಸಿನ ಅಡಚಣೆ ಕಾಡಬಹುದು. ಸಂತತಿ ಶುಭಸೂಚನೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯ ಜೀವನ ಸುಖಪ್ರದ. ಕಳೆದುಕೊಂಡ ಅವಕಾಶಗಳು ಪುನಃ ಲಭಿಸುವವು. ಖರ್ಚುವೆಚ್ಚಗಳ ಮೇಲೆ ಹಿಡಿತವಿಡಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 5, 6

ಧನು: ಆರೋಗ್ಯದಲ್ಲಿ ವ್ಯತ್ಯಯ. ಶೀತ, ಅಲರ್ಜಿ ಸಂಬಂಧಿತ ತೊಂದರೆ ಕಾಡಬಹುದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧದೊಳಗೆ ಒಡಕುಗಳು ಕಂಡುಬಂದಾವು. ಕೌಟುಂಬಿಕ ಕಲಹಗಳು, ಹಿರಿಯರ ಆಸ್ತಿ, ಭೂಮಿ ಸಂಬಂಧ ವಿವಾದಗಳು ಬಂದಾವು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ವ್ಯಾಪಾರದಲ್ಲಿ ನಷ್ಟಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ದಾಂಪತ್ಯದಲ್ಲಿ ತುಸು ವಿರಸ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 5, 10

ಮಕರ: ಆರೋಗ್ಯದ್ಲಲಿ ಉತ್ತಮ ಸುಧಾರಣೆ ಕಾಣಲಿದೆ. ಕೆಲಸಗಳು ಬಹಳ ನಿಧಾನಗತಿಯಲ್ಲಿ ಸಾಗುವವು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಹಿರಿಯರೊಂದಿಗೆ ಮನಸ್ತಾಪ. ನಿಮ್ಮ ಕೆಲಸಗಳಿಗೆ ಹಿರಿಯರಿಂದ ಪ್ರೋತ್ಸಾಹ ದೊರೆಯದು. ಮೇಲಧಿಕಾರಿಗಳಿಂದ ಕಿರುಕುಳ. ಅಸಹಕಾರ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಕಾಡುವುದು. ಸಂತತಿ ಶುಭಸೂಚನೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 6, 7

ಕುಂಭ: ದೇವತಾನುಗ್ರಹ ಕಾಲ. ನಿಂತುಹೋದ ಕೆಲಸಗಳು ಪುನರಾರಂಭಗೊಳ್ಳುವವು. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ನಿಮ್ಮ ನೇತೃತ್ವದಲ್ಲಿ ಮಹತ್ವಪೂರ್ಣ ಕಾರ್ಯಗಳು ನಡೆಯಲಿವೆ. ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ ನಿಷ್ಠುರಗಳಾದವು. ನೂತನ ಗೃಹ ನಿರ್ಮಾಣ ಕಾರ್ಯ ಭರದಿಂದ ಸಾಗಲಿವೆ. ವಾಹನ ಸೌಖ್ಯ, ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ದಾಂಪತ್ಯ ಜೀವನ ಸುಖಪ್ರದ. ಶುಭದಿನ: 6, 9

ಮೀನ: ಆರೋಗ್ಯದ ತೊಂದರೆ ಕಾಡಬಹುದು. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರಕಲಿದೆ. ಆದಾಯ ಉತ್ತಮವಿದ್ದು ಉಳಿತಾಯವೂ ಆಗಲಿದೆ. ದಾಂಪತ್ಯದಲ್ಲಿ ವಿರಸ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 7, 8

——–

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss