ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ಜುಲೈ 12ರಿಂದ 18ರವರೆಗೆ)

ವಾರ ಭವಿಷ್ಯ (ಜುಲೈ 12ರಿಂದ 18ರವರೆಗೆ)

*ವಿಶ್ವನಾಥ ತಂತ್ರಿ

ಮೇಷ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಶೀತ, ಕಫಭಾದೆ ಕಾಡುವುದು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ದೇವತಾನುಗ್ರಹ ಕಾಲ. ಸಂತತಿ ಶುಭಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ವ್ಯಾಪಾರಿಗಳಿಗೆ ನಷ್ಟ/ಮೋಸ ವಂಚನೆಗಳಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಇರಲಿ. ಕೃಷಿ ಸಂಬಂಧಿ ಕಾರ್ಯಗಳಲ್ಲಿ ಮುನ್ನಡೆ. ದಾಂಪತ್ಯ ಜೀವನ ಸುಖಪ್ರದ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ. ವಿಷ್ಣು, ದುರ್ಗಾರಾಧನೆ ಶುಭಪ್ರದ. ಶುಭದಿನ: 14, 15

ವೃಷಭ: ಆರೋಗ್ಯ ಚೆನ್ನಾಗಿರದು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ಒದಗಲಿವೆ. ಆದಾಯ ಉತ್ತಮ. ಹಣಕಾಸಿನ ಉಳಿತಾಯವೂ ಆಗಲಿದೆ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಕಂಡುಬಂದಾವು. ಗುರು ಪ್ರತಿಕೂಲ ಸ್ಥಾನದಲ್ಲಿರುವುದರಿಂದ ಕೆಲಸಗಳನ್ನು ಕ್ಲಪ್ತ ಸಮಯಕ್ಕೆ ಪೂರ್ಣಗೊಳಿಸುವುದು ಕಷ್ಟವಾದೀತು. ಹಿರಿಯರೊಂದಿಗೆ ಕಲಹ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 12, 13

ಮಿಥುನ: ದೇವತಾನುಗ್ರಹ ಕಾಲ. ಆರೋಗ್ಯದ ಕಾಳಜಿ ವಹಿಸಿ. ಉಷ್ಣಪೀಡೆ, ತಲೆನೋವು, ನರಗಳ ಸಂಬಂಧಿತ ತೊಂದರೆ ಕಾಡಬಹುದು. ಯಾವುದೇ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಕ್ಲಪ್ತ ಸಮಯಕ್ಕೆ ಪೂರ್ತಿಗೊಳಿಸುವಿರಿ. ಹೆಚ್ಚು ಪೈಪೋಟಿ ಎದುರಿಸಬೇಕಾದೀತು. ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯದಲ್ಲಿ ಸುಖ, ಶಾಂತಿ ಸಮಾಧಾನಕರ ಕಾಲ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 12, 15

ಕರ್ಕಾಟಕ: ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸಗಳಿಗೆ ಮುಂದಾದರೂ ವಿರೋಧ, ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ತೊಂದರೆ, ಅಡಚಣೆ ಕಂಡುಬಂದೀತು. ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ಮೋಸ, ನಷ್ಟ ಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಈಶ್ವರ, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 16, 17

ಸಿಂಹ: ದೇವತಾನುಗ್ರಹ ಕಾಲ. ನಿಮ್ಮ ಹೆಚ್ಚಿನ ಸಮಸ್ಯೆಗಳು ಪರಿಹಾರದ ಮಾರ್ಗ ಕಾಣಲಿವೆ. ಆದಾಯ ಉತ್ತಮವಿದ್ದು ಹಣಕಾಸಿನ ಪರಿಸ್ಥಿತಿ ತೃಪ್ತಿಕರ. ಉಳಿತಾಯ ಮಾಡಬಹುದು. ಉದ್ಯೋಗದಲ್ಲಿ ಸ್ಥಾನಬಡ್ತಿಯೋಗವಿದೆ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆತು ಜನನಾಯಕತ್ವ ನಿಮಗೆ ದೊರಕೀತು. ದಾಂಪತ್ಯದಲ್ಲಿ ವಿರಸ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಗಣಪತಿ, ದುರ್ಗಾರಾಧನೆ ಶುಭಪ್ರದ. ಶುಭದಿನ: 16, 17

ಕನ್ಯಾ: ನೂತನ ಗೃಹ ನಿರ್ಮಾಣ ಕಾರ್ಯ ಉತ್ತಮ ರೀತಿಯಲ್ಲಿ ಸಾಗಲಿದೆ. ವಾಹನ ಖರೀದಿಗೂ ಅವಕಾಶವಿದೆ. ಕುಟುಂಬದಲ್ಲಿ ದೇವತಾ ಕಾರ್ಯಗಳ ಸಂಭ್ರಮ. ದೇವತಾನುಗ್ರಹ ಕಾಲ. ಉದ್ಯೋಗ ಸ್ಥಾನದಲ್ಲಿ ಉತ್ತಮ ರೀತಿಯಲ್ಲಿ ಕೆಲಸಗಳನ್ನು ನಿರ್ವಹಿಸಿ, ಪ್ರಶಂಸಿಸಲ್ಪಡುವಿರಿ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ನಾಯಕತ್ವದೊಂದಿಗೆ ಜನಹಿತ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ದಾಂಪತ್ಯದಲ್ಲಿ ವಿರಸ. ದುರ್ಗಾ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 12, 13

ತುಲಾ: ದುರಭ್ಯಾಸದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ವ್ಯಸನಗಳಿಗೆ ಬಲಿಯಾಗದಿರಿ. ಆರೋಗ್ಯದ ಕಾಳಜಿ ಇರಲಿ. ಮಾತು ತೀಕ್ಷ್ಣವಾಗಿ ಜಗಳ/ವಿರೋಧ/ನಿಷ್ಠುರಗಳಾದಾದವು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಬಹಳ ಜಾಗ್ರತೆಯಿಂದ ವ್ಯವಹರಿಸಿ. ದಾಂಪತ್ಯದಲ್ಲಿ ವಿರಸ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 13, 14

ವೃಶ್ಚಿಕ: ದೇವತಾನುಗ್ರಹ ಕಾಲ. ದೀರ್ಘಕಾಲದಿಂದ ಕಾಡುತ್ತಿದ್ದ ಚಿಂತೆ ದೂರವಾಗಲಿದೆ. ಸಮಸ್ಯೆಗಳು ಪರಿಹಾರೋಪಾಯ ಕಾಣಲಿದೆ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಉದ್ಯೋಗ ಬದಲಾವಣೆಗೂ ಅವಕಾಶವಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ದೊರಕದು. ಕೃಷಿ ಸಂಬಂಧಿ ಕಾರ್ಯಗಳಲ್ಲಿ ಹಿನ್ನಡೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 16, 17

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಔಷಧೋಪಚಾರದಲ್ಲಿ ಗುಣಮುಖ ಕಾಣಲಿದೆ. ಕೌಟುಂಬಿಕ ಕಲಹಗಳು, ಹಿರಿಯರ ಭೂಮಿ, ಆಸ್ತಿಯ ವಿಚಾರದಲ್ಲಿ ವಾದ, ವಿವಾದಗಳು ಬಂದಾವು. ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಹಿರಿಯರೊಂದಿಗೆ ಕಲಹ. ಆದಾಯ ಉತ್ತಮವಿದ್ದು, ಹಣಕಾಸಿನ ವಿಚಾರದಲ್ಲಿ ತೃಪ್ತಿಕರ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ವ್ಯಾಪಾರದಲ್ಲಿ ಮೋಸ, ವಂಚನೆಗಳಾಗದಂತೆ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 15, 16

ಮಕರ: ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗುವವು. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ಮಕ್ಕಳ ಆರೋಗ್ಯ ಕುರಿತು ಜಾಗ್ರತೆ ವಹಿಸಿ. ದಾಂಪತ್ಯ ಜೀವನದಲ್ಲಿ ಉತ್ತಮ ಅನ್ಯೋನ್ಯತೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ನಿರೀಕ್ಷಿಸಿದಷ್ಟು ಫಲಿತಾಂಶ ಬಾರದು. ಹೊಸ ನಿರ್ಣಯ/ಬದಲಾವಣೆಗಳು ಬೇಡ. ಈಶ್ವರ, ವಿಷ್ಣು, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 12, 14

ಕುಂಭ: ಆರೋಗ್ಯದ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ಆಲಸ್ಯ ಕಾಡುವುದು. ಕೆಲಸಗಳನ್ನು ಕ್ಲಪ್ತ ಸಮಯಕ್ಕೆ ಪೂರ್ತಿಗೊಳಿಸುವುದು ಕಷ್ಟವಾದೀತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ದೊರೆಯುವವು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ಆದಾಯದಲ್ಲಿ ಹೆಚ್ಚಳ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 16, 18

ಮೀನ: ಆರೋಗ್ಯ ಚೆನ್ನಾಗಿರದು. ಪಿತ್ತ ವಿಕಾರ ಕಾಡಲಿದೆ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ವಾಹನ ಖರೀದಿಗೂ ಅವಕಾಶವಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಭೂಮಿ, ಆಸ್ತಿ, ನಿವೇಶನ ಖರೀದಿಸುವ ಸಮಾಲೋಚನೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯದಲ್ಲಿ ವಿರಸ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ದುರ್ಗಾರಾಧನೆ ಶುಭಪ್ರದ. ಶುಭದಿನ: 16, 18

——-

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss