ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ ( ಜೂನ್ 21, 2021)

ದಿನ ಭವಿಷ್ಯ….

ಮೇಷ: ಸಂಬಂಧದಲ್ಲಿ ಅನವಶ್ಯ ಬಿಕ್ಕಟ್ಟು ಸೃಷ್ಟಿಸಬೇಡಿ. ಇತರರ ಭಾವನೆ ಅರ್ಥ ಮಾಡಿಕೊಳ್ಳಿ. ನಿಮ್ಮ ಮಾತೇ ಸರಿಯೆಂಬ ಕಠಿಣ ನಿಲುವು ತರವಲ್ಲ. ಹೊಂದಾಣಿಕೆ ಮುಖ್ಯ.

ವೃಷಭ: ಖಾಸಗಿ ಬದುಕು ಮತ್ತು ವೃತ್ತಿ ಬದುಕು ಎರಡರಲ್ಲೂ ಯಶಸ್ಸು. ಕಾರ್ಯಸಾಧನೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಉತ್ತಮ.

ಮಿಥುನ: ಅನಿರೀಕ್ಷಿತ ಸವಾಲು ಒದಗುವುದು. ಆದರೆ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಆಪ್ತ ಬಂಧುವಿನಿಂದ ಶುಭ ಸುದ್ದಿ . ಕೌಟುಂಬಿಕ ಸಹಕಾರ.

ಕಟಕ: ಉದ್ಯೋಗ ಸಂಬಂತ ಒತ್ತಡದಿಂದ ಇಂದು ಮುಕ್ತಿ ಪಡೆಯುವಿರಿ. ವ್ಯವಹಾರವು ಸುಗಮವಾಗಿ ಸಾಗುತ್ತಿರುವ ನಿರಾಳತೆ. ಕೌಟುಂಬಿಕ ನೆಮ್ಮದಿ.

ಕಟಕ: ಉದ್ಯೋಗ ಸಂಬಂತ ಒತ್ತಡದಿಂದ ಇಂದು ಮುಕ್ತಿ ಪಡೆಯುವಿರಿ. ವ್ಯವಹಾರವು ಸುಗಮವಾಗಿ ಸಾಗುತ್ತಿರುವ ನಿರಾಳತೆ. ಕೌಟುಂಬಿಕ ನೆಮ್ಮದಿ.

ಸಿಂಹ: ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಅದರಿಂದ ಒಳಿತಾಗಲಿದೆ ಎಂದು ಗ್ರಹಗತಿ ಸೂಚಿಸುತ್ತಿದೆ.  ಎಲ್ಲರೊಡನೆ ಹೊಂದಾಣಿಕೆ ಇರಲಿ.

ಕನ್ಯಾ: ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಸಂಕಷ್ಟ ಪರಿಸ್ಥಿತಿ ಒದಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಸೂಕ್ತ ಬೆಂಬಲವೂ ಲಭ್ಯ.

ತುಲಾ: ಇಂದೇಕೋ ಗಂಭೀರ ಮನಸ್ಥಿತಿ ನಿಮ್ಮದು. ಕೆಲಸದ ಒತ್ತಡ ಅಕ. ಹಾಗಾಗಿ ಇನ್ನಿತರ ವಿಷಯಗಳಿಗೆ ಮನಸ್ಸು ಹೋಗದು. ದೈಹಿಕ , ಮಾನಸಿಕ ಬಸವಳಿಕೆ.

ವೃಶ್ಚಿಕ: ಆಪ್ತರ ಸಂಗದಲ್ಲಿ ಸಂತೋಷ ಪಡುವಿರಿ. ಕೆಲಸದ ಒತ್ತಡವನ್ನು ಮರೆಯುವಿರಿ. ಭಾವನಾತ್ಮಕ ಪ್ರಸಂಗವೊಂದಕ್ಕೆ ಸಾಕ್ಷಿಯಾಗುವಿರಿ.

ಧನು: ಸಂಬಂಧವೊಂದು ಬಲಗೊಳ್ಳುವುದು. ಆರೋಗ್ಯಕ್ಕೆ ಸಂಬಂಸಿ ತುಸು ಎಚ್ಚರ ಅವಶ್ಯ. ಆರ್ಥಿಕ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾಗುವುದು.

ಮಕರ: ಪ್ರಮುಖ ನಿರ್ಧಾರ ತಾಳಬೇಕಾದ ಪ್ರಸಂಗ ಬಂದರೆ ಶಾಂತವಾಗಿ ಯೋಚಿಸಿ. ಅವಸರ ಬೇಡ. ಕೆಲಸದ ಒತ್ತಡ ನಿಮ್ಮಲ್ಲಿ ಅಸಹನೆ ಸೃಷ್ಟಿಸಬಹುದು.

ಕುಂಭ: ಭಾವನೆಗಳ ಸಂಘರ್ಷ. ದ್ವಂದ್ವ ಮನಸ್ಥಿತಿ. ಹೆಚ್ಚುವರಿ ಹೊಣೆಗಾರಿಕೆ. ಆಹಾರದ ಮೇಲೆ ನಿಯಂತ್ರಣ ಸಾಸಿ. ಹಿತಮಿತವಾದುದನ್ನೆ ಸ್ವೀಕರಿಸಿ.

ಮೀನ: ಬಯಸಿದ ಕಾರ್ಯ ಈಡೇರುವುದು. ಕಾರ್ಯಸಿದ್ಧಿ. ಅಡ್ಡಿಗಳು ಬಾಸವು. ಪ್ರೀತಿಯಲ್ಲಿ ಸಂಘರ್ಷ, ಭಿನ್ನಾಭಿಪ್ರಾಯ. ಅದರಿಂದ ವಿರಸ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss