ವಾರ ಭವಿಷ್ಯ (ಡಿಸೆಂಬರ್ 6 ರಿಂದ 12ರವರೆಗೆ)
ಮೇಷ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯದಲ್ಲಿ ಸ್ವಲ್ಪ ಇಳಿಮುಖ. ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ತೊಂದರೆ ಕಾಡಬಹುದು. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಮಾತು ತೀಕ್ಷ್ಣವಾಗಿ ಸ್ವಲ್ಪ ಭಿನ್ನಾಭಿಪ್ರಾಯಗಳು ಬಂದಾವು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 6, 9
ವೃಷಭ: ದೇವತಾನುಗ್ರಹ ಕಾಲ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಆದಾಯ ಉತ್ತಮವಿದ್ದು ಉಳಿತಾಯವೂ ಆಗಲಿದೆ. ಆರ್ಥಿಕ ದೃಷ್ಟಿಯಿಂದ ತೃಪ್ತಿಕರ ಕಾಲ. ವ್ಯಾಪಾರದಲ್ಲಿ ಹೆಚ್ಚು ಪೈಪೋಟಿ ಎದುರಿಸಬೇಕಾದೀತು. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಸ್ಕಂದ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 6, 7
ಮಿಥುನ: ಆರೋಗ್ಯದ ಬಗ್ಗೆ ಬಹಳಷ್ಟು ಜಾಗ್ರತೆ ವಹಿಸಿ. ಮಾನಸಿಕ ಶಾಂತಿ ಇರದು. ಯಾವುದೇ ಕೆಲಸಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ವಿದ್ಯಾಭ್ಯಾಸಕ್ಕೆ ಉತ್ತಮ ಕಾಲ. ಉನ್ನತ ವ್ಯಾಸಂಗವೂ ಉತ್ತಮ ರೀತಿಯಲ್ಲಿ ಸಾಗಲಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ದಾಂಪತ್ಯ ಜೀವನ ಸುಖಪ್ರದ. ಈಶ್ವರ ಆರಾಧನೆ, ಅಶ್ವತ್ಥ ಪ್ರದಕ್ಷಿಣೆ ಶುಭಪ್ರದ. ಶುಭದಿನ: 7, 11
ಕರ್ಕಾಟಕ: ದೇವತಾನುಗ್ರಹ ಕಾಲ. ಶತ್ರುಭಾದೆ ನಿವಾರಣೆ ಆಗಲಿದೆ. ನಿಮ್ಮ ಹೆಚ್ಚಿನ ಸಮಸ್ಯೆಗಳು ಒಂದೊಂದಾಗಿ ಪರಿಹಾರವಾಗಲಿವೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ತೊಂದರೆ ಕಾಡಬಹುದು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ದೊರೆಯದು. ನೂತನ ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 9, 10
ಸಿಂಹ: ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸ ಕಾರ್ಯಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳು ಎದುರಾಗುವವು. ಹಿರಿಯರೊಂದಿಗೆ ಕಲಹ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಕೃಷಿ ಕಾರ್ಯಗಳು ಸಾಂಗವಾಗಿ ನಡೆಯುತ್ತವೆ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಕೆಲಸಗಳು ವಿಳಂಬಗತಿಯಲ್ಲಿ ಸಾಗುತ್ತವೆ. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ವಿರಸ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 11, 12
ಕನ್ಯಾ: ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದಾಂಪತ್ಯದಲ್ಲಿ ವಿರಸ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೂ ಪೂರಕ ಅನುಕೂಲತೆಗಳು ಒದಗಿ ಬರುತ್ತವೆ. ವಿವಾಹ ಸಂಬಂಧಿ ಕಾರ್ಯಗಳಿಗೆ ಅಡಚಣೆಗಳು ಎದುರಾಗುವವು. ವ್ಯಾಪಾರದಲ್ಲಿ ನಷ್ಟ ಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಹಣಕಾಸಿನ ತೊಂದರೆ ಎದುರಿಸಬೇಕಾದೀತು. ಕೃಷಿ ಕಾರ್ಯಗಳಲ್ಲಿ ನಿರಾಸಕ್ತಿ. ಈಶ್ವರ, ದುರ್ಗಾ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 9, 10
ತುಲಾ: ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ತೊಂದರೆ ಕಾಡಲಿದೆ. ದಾಂಪತ್ಯದಲ್ಲಿ ವಿರಸ. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ಬರುವುದು. ಭೂನಿವೇಶನ/ತಾಮ್ರಾದಿ ಲೋಹದ ವ್ಯಾಪಾರದಿಂದ ಲಾಭ ಬರಲಿದೆ. ಈಶ್ವರ, ದುರ್ಗಾ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 8, 12
ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ಉಷ್ಣ, ತಲೆನೋವು, ವಾತ ಸಂಬಂಧ ತೊಂದರೆಗಳು ಕಾಡಲಿವೆ. ವಿದ್ಯಾಭ್ಯಾಸದಲ್ಲಿ ತುಸು ಹಿನ್ನಡೆ. ಕೌಟುಂಬಿಕ ಕಲಹಗಳು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ದಾಂಪತ್ಯದಲ್ಲಿ ವಿರಸ. ಈಶ್ವರ, ವಿಷ್ಣು, ನರಸಿಂಹ ಆರಾಧನೆ ಶುಭಪ್ರದ. ಶುಭದಿನ: 8, 9
ಧನು: ದೇವತಾನುಗ್ರಹ ಕಾಲ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಬಂದೀತು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ತೊಂದರೆ ಕಾಡಬಹುದು. ವ್ಯಾಪಾರದಲ್ಲಿ ನಷ್ಟ ಯೋಗ. ಉದ್ಯೋಗದಲ್ಲಿ ಸ್ಥಾನ ಬಡ್ತಿ. ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ. ಕೌಟುಂಬಿಕ ಕಲಹಗಳು. ಹಿರಿಯರ ಭೂಮಿ/ಆಸ್ತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬಂದಾವು. ನಿಮ್ಮ ಕೆಲಸಗಳ ಮೇಲೆ ನಿರ್ಲಕ್ಷ್ಯ ಮಾಡಬೇಡಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 11, 12
ಮಕರ: ಆರೋಗ್ಯದ ಬಗ್ಗೆ ಬಹಳಷ್ಟು ಜಾಗ್ರತೆ ಅವಶ್ಯ. ಆದಾಯ ನಿರೀಕ್ಷೆಗೂ ಮೀರಿ ಇದ್ದು ಆರ್ಥಿಕವಾಗಿ ತೃಪ್ತಿಕರ ಕಾಲ. ವ್ಯಾಪಾರಿಗಳಿಗೂ ಉತ್ತಮ ಲಾಭ ದೊರೆಯಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಉದ್ಯೋಗ, ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ರಾಜಕೀಯದಲ್ಲಿ ಉತ್ತಮ ಜನಬೆಂಬಲ ದೊರೆಯುತ್ತದೆ. ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 7, 12
ಕುಂಭ: ಆರೋಗ್ಯದ ಬಗ್ಗೆ ಬಹಳ ಜಾಗ್ರತೆ ವಹಿಸಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ನಿಮ್ಮ ಜವಾಬ್ದಾರಿ ಮತ್ತು ಮುಂದಾಳುತನದಲ್ಲಿ ಉತ್ತಮ ಜನೋಪಯೋಗಿ ಕಾರ್ಯಗಳು ನಡೆಯಲಿವೆ. ರಾಜಕೀಯದಲ್ಲಿ ನಿಮ್ಮ ಸ್ಥಾನಮಾನ ಉಳಿಸಿಕೊಳ್ಳುವಿರಿ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ಕುಟುಂಬದಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 6, 8
ಮೀನ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ದುರಭ್ಯಾಸದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಆದಾಯ ಉತ್ತಮ. ಹಣಕಾಸಿನ ವಿಚಾರದಲ್ಲಿ ತೃಪ್ತಿಕರ ಕಾಲ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ದಾಂಪತ್ಯದಲ್ಲಿ ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: ೯, ೧೦