ವಾರ ಭವಿಷ್ಯ (ನವಂಬರ್ 1ರಿಂದ 7ರವರೆಗೆ)
ಮೇಷ: ದೇವತಾನುಗ್ರಹ ಕಾಲ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಒಡಕು ಬಂದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ಆದಾಯ ಉತ್ತಮವಿದ್ದು ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ಬಾರದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯದಲ್ಲಿ ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 5, 6
ವೃಷಭ: ಅನಿರೀಕ್ಷಿತ ಧನಲಾಭಯೋಗವಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಆರೋಗ್ಯ ಮಾತ್ರ ಚೆನ್ನಾಗಿರದು. ನರಸಂಬಂಧಿತ ತೊಂದರೆಗಳು, ಉದರ ಸಂಬಂಧಿತ ಶಸ್ತ್ರಕ್ರಿಯಾದಿ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಬಹಳಷ್ಟು ಜಾಗ್ರತೆ ವಹಿಸಿ. ಮಕ್ಕಳ ವಿಚಾರದಲ್ಲಿ ಚಿಂತೆ. ಯಾರೊಂದಿಗೂ ಹೊಂದಾಣಿಕೆ ಸರಿ ಬಾರದು. ಹಿರಿಯರೊಂದಿಗೆ ಭಿನ್ನಾಭಿಪ್ರಾಯ. ಮಕ್ಕಳಿಂದ ವಿರೋಧ ಎದುರಿಸಬೇಕಾದೀತು. ವಿವಾಹ ನಿಶ್ಚಯವಾಗಲಿದೆ. ಈಶ್ವರ, ಲಕ್ಷ್ಮೀ ಆರಾಧನೆ ಶುಭಪ್ರದ. ಶುಭದಿನ: 3, 4
ಮಿಥುನ: ದೇವತಾನುಗ್ರಹ ಕಾಲ. ಗೃಹ, ಕುಟುಂಬದಲ್ಲಿ ದೇವತಾಕಾರ್ಯ, ಮಂಗಳ ಕಾರ್ಯಗಳ ಸಂಭ್ರಮ. ವಿವಾಹಾದಿ ಕಾರ್ಯಗಳು ಸಂಪನ್ನವಾಗುವ ಕಾಲ. ಮಕ್ಕಳ ಆರೋಗ್ಯದ ಕಡೆ ಕಾಳಜಿ ವಹಿಸಿ. ಆದಾಯದಲ್ಲಿ ತುಸು ಹಿನ್ನಡೆ. ನಿಮಗೆ ಸಲ್ಲಬೇಕಾದ ಹಣ ಕ್ಲಪ್ತ ಸಮಯಕ್ಕೆ ಬಾರದು. ನಿಮ್ಮ ಪರಿಶ್ರಮ, ಪ್ರಯತ್ನಕ್ಕೆ ತಕ್ಕುದಾದ ಪ್ರತಿಫಲ ಬಾರದು. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ದಾಂಪತ್ಯ ಜೀವನ ಸುಖಪ್ರದ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 5
ಕರ್ಕಾಟಕ: ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ದೂರ ಪ್ರವಾಸ ಯೋಗವಿದೆ. ಯಾವುದೇ ಕೆಲಸಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳನ್ನು ಎದುರಿಸಬೇಕಾದೀತು. ಆರೋಗ್ಯವೂ ಚೆನ್ನಾಗಿರದು. ಶತ್ರುಭಾದೆ ಕಾಡಲಿದೆ. ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 3, 4
ಸಿಂಹ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ. ಆದಾಯ ಉತ್ತಮವಿದ್ದು, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮವರ ಮೋಸ, ವಂಚನೆಯಿಂದ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳ ಬೇಕಾದೀತು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 3, 4
ಕನ್ಯಾ: ದೇವತಾನುಗ್ರಹ ಕಾಲ. ನೂತನ ಗೃಹ ನಿರ್ಮಾಣ ಸಂಬಂಧಿತ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ವಾಹನ/ಆಸ್ತಿ/ಭೂನಿವೇಶನ ಖರೀದಿಗೆ ಅವಕಾಶವಿದೆ. ಕೆಲಸ ಕಾರ್ಯಗಳನ್ನೆಲ್ಲ ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ತಂದೆಯ/ಹಿರಿಯರ ಆರೋಗ್ಯದ ಕಡೆ ನಿಗಾವಹಿಸಿ. ದಾಂಪತ್ಯದಲ್ಲಿ ವಿರಸ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 6, 7
ತುಲಾ: ಆರೋಗ್ಯದ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ವಾಸಸ್ಥಳ ಬದಲಾವಣೆಯ ಯೋಗವಿದೆ. ಆದಾಯದಲ್ಲಿ ತುಸು ಹಿನ್ನಡೆ ಕಂಡು ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ತೊಂದರೆ ಕಾಡಬಹುದು. ವ್ಯಾಪಾರದಲ್ಲಿ ಮೋಸ, ವಂಚನೆಯಾದೀತು. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ದಾಂಪತ್ಯದಲ್ಲಿ ವಿರಸ. ಮಾತು ತೀಕ್ಷ್ಣವಾಗಿ ಜಗಳ/ವೈಷಮ್ಯಗಳು ಬಂದಾವು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 2
ವೃಶ್ಚಿಕ: ದೇವತಾನುಗ್ರಹ ಕಾಲ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದರ ಸಂಬಂಧ ತೊಂದರೆ, ತಲೆನೋವು, ಚರ್ಮರೋಗಗಳು ಬಂದಾವು. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯದಲ್ಲಿ ಸುಖ ಶಾಂತಿ, ಸಮಾಧಾನದ ಕಾಲ. ಮಕ್ಕಳ ಆರೋಗ್ಯದ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 4
ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಆದಾಯದಲ್ಲಿ ಹೆಚ್ಚಳ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ. ಉಳಿತಾಯವೂ ಆಗಲಿದೆ. ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನಹಿತ ಕಾರ್ಯಗಳನ್ನು ಮಾಡಿ ಪ್ರಸಿದ್ಧಿಯಾಗುವಿರಿ. ಜನ ಸಹಾಯ, ಪ್ರೋತ್ಸಾಹ ದೊರೆಯುವುದು. ಕೌಟುಂಬಿಕ ಕಲಹ. ಆಸ್ತಿ/ಭೂಮಿ ವಿಚಾರದಲ್ಲಿ ವಾದ ವಿವಾದಗಳು ಬಂದಾವು. ವಾಹನ ಚಲಾವಣೆಯಲ್ಲಿ ಬಹಳ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 4, 6
ಮಕರ: ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ಜನರಿಂದ ಪ್ರೋತ್ಸಾಹ, ಸಹಕಾರ ದೊರೆಯುವುದು. ಆದಾಯ ಉತ್ತಮವಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಗೃಹ ಕುಟುಂಬದಲ್ಲಿ ದೇವತಾಕಾರ್ಯ, ಮಂಗಳಕಾರ್ಯಗಳ ಸಂಭ್ರಮ. ಹಿರಿಯರೊಂದಿಗೆ ಮನಸ್ತಾಪ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 5, 7
ಕುಂಭ: ದೇವತಾನುಗ್ರಹ ಕಾಲ. ಉದ್ಯೋಗ ಸ್ಥಾನದಲ್ಲಿ ನಿಮ್ಮ ಸ್ಥಾನಮಾನ ವರ್ಧಿಸಿಕೊಳ್ಳುವಿರಿ. ಮಹತ್ವದ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ನಡೆಯುವವು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ತೊಂದರೆ ಕಾಡಬಹುದು. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಸಂತತಿ ಶುಭಸೂಚನೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ದುರಭ್ಯಾಸಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 6
ಮೀನ: ಆರೋಗ್ಯದ ತೊಂದರೆ ಕಾಡಬಹುದು. ಆದಾಯದಲ್ಲಿ ಹೆಚ್ಚಳ. ಅನಿರೀಕ್ಷಿತ ಧನಲಾಭ ಯೋಗವಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸೂಕ್ತ ಕಾಲ. ದಾಂಪತ್ಯದಲ್ಲಿ ವಿರಸ. ವಿವಾಹ ಸಂಬಂಧಿತ ಕಾರ್ಯಗಳಿಗೆ ವಿಘ್ನಗಳು ಬಂದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ವ್ಯಾಪಾರದಲ್ಲಿ ನಷ್ಟಯೋಗ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 4
—