spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ನವಂಬರ್ 15ರಿಂದ 21ರವರೆಗೆ)

- Advertisement -Nitte

ವಾರ ಭವಿಷ್ಯ (ನವಂಬರ್ 15ರಿಂದ 21ರವರೆಗೆ)

ಮೇಷ: ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ಪೈಪೋಟಿ, ವಿರೋಧಗಳನ್ನು  ಎದುರಿಸಬೇಕಾದೀತು. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ವ್ಯಾಸಂಗಕ್ಕೆ ಪೂರಕ ಅನುಕೂಲತೆಗಳು ಒದಗುವವು. ಆದಾಯ ಉತ್ತಮವಿದ್ದು  ಆರ್ಥಿಕ ಪರಿಸ್ಥಿತಿಯಲ್ಲಿ  ಸುಧಾರಣೆ ಕಾಣಲಿದೆ. ವ್ಯಾಪಾರಿಗಳಿಗೆ  ನಷ್ಟ  ಸಾಧ್ಯತೆ ಕಾರಣ ಜಾಗ್ರತೆಯಿಂದ ವ್ಯವಹರಿಸಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೃಷಿ ಕಾರ್ಯಗಳಲ್ಲಿ  ಹಿನ್ನಡೆ. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ. ಶುಭದಿನ: 20, 21

ವೃಷಭ: ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯ. ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ವಿರೋಧ, ಪೈಪೋಟಿ ಎದುರಿಸಬೇಕಾದೀತು. ಶತ್ರುಭಾದೆ ಕಾಡಲಿದೆ. ದಾಂಪತ್ಯದಲ್ಲಿ ಕಲಹ. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ತೃಪ್ತಿಕರ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ  ಹಿನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ವ್ಯಾಪಾರದಲ್ಲಿ ನಿರೀಕ್ಷಿಸಿದಕ್ಕಿಂತಲೂ ಉತ್ತಮ ಲಾಭಾಂಶ ದೊರೆಯುತ್ತದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 16, 17

ಮಿಥುನ: ದೇವತಾನುಗ್ರಹ ಕಾಲ. ಸಂತತಿ ಶುಭ ಸೂಚನೆ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವ್ಯಾಪಾರದಲ್ಲಿ  ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವ್ಯವಹರಿಸಿ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ಹಣಕಾಸಿನ ತಾಪತ್ರಯ ಕಾಡಲಿದೆ. ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ  ಉತ್ತಮ ಜನಪರ ಕೆಲಸಗಳನ್ನು ಮಾಡಿ ಪ್ರಸಿದ್ಧಿ  ಪಡೆಯುವಿರಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ವಿಷ್ಣು, ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 17, 18

ಕರ್ಕಾಟಕ:  ಗೃಹ, ಕುಟುಂಬದಲ್ಲಿ  ಮಂಗಳ ಕಾರ್ಯಗಳ ಸಂಭ್ರಮ. ಶತ್ರುಭಾದೆ ಕಾಡಲಿದೆ. ಆದಾಯ ಉತ್ತಮವಿದ್ದು  ಆರ್ಥಿಕ ಪರಿಸ್ಥಿತಿಯಲ್ಲಿ  ಸುಧಾರಣೆ ಕಾಣಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಕೃಷಿ ಕಾರ್ಯಗಳಲ್ಲಿ ಹೆಚ್ಚು ಸಮಯ ತೊಡಗಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ  ಕಾಳಜಿ ವಹಿಸಿ. ದುರಭ್ಯಾಸಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ಇರಲಿ. ಹಿರಿಯರೊಂದಿಗೆ ಕಲಹ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 19, 20

ಸಿಂಹ: ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ.  ದೇವತಾನುಗ್ರಹ ಕಾಲ. ಕೆಲಸಗಳನ್ನು  ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ವಾಹನ ಚಲಾವಣೆಯಲ್ಲಿ  ಬಹಳ ಜಾಗ್ರತೆ ವಹಿಸಿ. ಹಿರಿಯರ ಆಸ್ತಿ, ಭೂಮಿ ವಿಚಾರದಲ್ಲಿ  ವಾದ, ವಿವಾದ, ಜಗಳಗಳು ಆದಾವು. ಆದಾಯದಲ್ಲಿ  ತುಸು ಹಿನ್ನಡೆ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು  ಲಾಭ ದೊರೆಯದು. ದಾಂಪತ್ಯದಲ್ಲಿ  ವಿರಸ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ  ಸೂಕ್ತ ಕಾಲ. ಈಶ್ವರ, ವಿಷ್ಣು , ದುರ್ಗಾರಾಧನೆ ಶುಭಪ್ರದ. ಶುಭದಿನ: 19, 29

ಕನ್ಯಾ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಆದಾಯ ಉತ್ತಮ. ಆರ್ಥಿಕ ದೃಷ್ಟಿಯಿಂದ ಸಮಾಧಾನಕರ ಕಾಲ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ  ಸಾಗಲಿದೆ. ವಾಹನ ಖರೀದಿಗೂ ಅವಕಾಶವಿದೆ. ದಾಂಪತ್ಯದಲ್ಲಿ   ವಿರಸ. ವಿವಾಹ ಸಂಬಂಧಿ  ಕಾರ್ಯಗಳಿಗೆ ವಿಘ್ನಗಳು ಬಂದಾವು. ಸಾಮಾಜಿಕ/ರಾಜಕೀಯ  ಕ್ಷೇತ್ರದಲ್ಲಿ  ಜನಪರ ಕಾರ್ಯಗಳನ್ನು  ಮಾಡಿ ಪ್ರಸಿದ್ಧಿ  ಪಡೆಯುವಿರಿ. ವಿದ್ಯಾಭ್ಯಾಸಕ್ಕೆ  ಸೂಕ್ತ ಕಾಲ. ದುರ್ಗಾರಾಧನೆ ಶುಭಪ್ರದ. ಶುಭದಿನ: 17, 21

ತುಲಾ: ಆರೋಗ್ಯದಲ್ಲಿ  ಉತ್ತಮ ಸುಧಾರಣೆ ಕಾಣಲಿದೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಉಳಿತಾಯವಾಗದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ನೂತನ ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಮಕ್ಕಳ ಆರೋಗ್ಯದ ಬಗ್ಗೆ  ಜಾಗ್ರತೆ ವಹಿಸಿ. ವಿದ್ಯಾಭ್ಯಾಸದಲ್ಲಿ  ಹಿನ್ನಡೆ. ದಾಂಪತ್ಯದಲ್ಲಿ  ವಿರಸ. ಮಾತು ತೀಕ್ಷ್ಣವಾಗಿ ಸಂಬಂಧಗಳಲ್ಲಿ ಒಡಕು ಬಂದೀತು. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ. ಶುಭದಿನ: 15, 19

ವೃಶ್ಚಿಕ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು  ಉತ್ತಮ ರೀತಿಯಲ್ಲಿ  ನಿರ್ವಹಿಸುವಿರಿ. ಉದ್ಯೋಗದಲ್ಲಿ  ಸ್ಥಾನ ಬಡ್ತಿ ಯೋಗವಿದೆ. ಷೇರು ಮಾರುಕಟ್ಟೆಯಲ್ಲಿ  ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ನಿಮ್ಮ  ಮುಂದಾಳುತನದಲ್ಲಿ  ಮಹತ್ವಪೂರ್ಣ ಕಾರ್ಯಗಳು ನಡೆಯಲಿವೆ. ವಿದ್ಯಾಭ್ಯಾಸಕ್ಕೆ  ಸೂಕ್ತ ಕಾಲ. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ. ಶುಭದಿನ: 17, 20

ಧನು: ಕಣ್ಣಿನ ಆರೋಗ್ಯದ ಬಗ್ಗೆ  ಜಾಗ್ರತೆ ವಹಿಸಿ.  ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ಉತ್ತಮವಾಗಿದ್ದು   ಹಣಕಾಸಿನ ಉಳಿತಾಯವೂ ಆಗಲಿದೆ. ದೂರ  ಪ್ರವಾಸ, ತೀರ್ಥಯಾತ್ರೆ,  ಪುಣ್ಯಕ್ಷೇತ್ರಗಳ  ಸಂದರ್ಶನ ಯೋಗವಿದೆ. ಖರ್ಚುವೆಚ್ಚ ಗಳ ಮೇಲೆ ಹಿಡಿತವಿಡಿ.  ಕೃಷಿ ಸಂಬಂಧಿತ ಕಾರ್ಯಗಳಲ್ಲಿ   ಮುನ್ನಡೆ. ಮಾತು ಕಟುವಾಗಿ ಸ್ವಲ್ಪ  ಜಗಳ, ಭಿನ್ನಾಭಿಪ್ರಾಯಗಳು ಬಂದಾವು.  ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 19, 21

ಮಕರ: ಆರೋಗ್ಯದಲ್ಲಿ   ಉತ್ತಮ ಸುಧಾರಣೆ ಕಾಣಲಿದೆ. ಆದಾಯದಲ್ಲಿ  ಹೆಚ್ಚಳ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ನಿಮ್ಮ ಹೆಚ್ಚಿನ ಸಮಯವನ್ನು  ಕೆಲಸಗಳಿಗೆ ಮೀಸಲಿಡುವಿರಿ. ಉದ್ಯೋಗದಲ್ಲಿ  ಸ್ಥಾನ ಬಡ್ತಿ ಯೋಗವಿದೆ.  ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನಹಿತ ಕಾರ್ಯಗಳನ್ನು ಮಾಡಿ ಗೌರವಾದರಗಳಿಗೆ ಒಳಗಾಗುವಿರಿ. ವಿದ್ಯಾಭ್ಯಾಸಕ್ಕೆ  ಸ್ವಲ್ಪ ಆಲಸ್ಯ ಕಾಡೀತು. ದಾಂಪತ್ಯ ಜೀವನ ಸುಖಪ್ರದ. ಅವಿವಾಹಿತರಿಗೆ  ಶೀಘ್ರ ವಿವಾಹ ಯೋಗವಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 16, 20

ಕುಂಭ:  ದೇವತಾನುಗ್ರಹ ಕಾಲ. ಉದ್ಯೋಗದಲ್ಲಿ  ಪದೋನ್ನತಿ. ಕೆಲಸಗಳನ್ನು  ಯಶಸ್ವೀ ರೀತಿ ಯಲ್ಲಿ  ನಿರ್ವಹಿಸುವಿರಿ. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ  ಪ್ರಶಂಸನೀಯ ಕಾರ್ಯ ಗಳನ್ನು  ಮಾಡಿ ಪ್ರಸಿದ್ಧಿ  ಪಡೆಯುವಿರಿ. ಮಾತು ಕಟುವಾಗಿ ಸ್ವಲ್ಪ  ಭಿನ್ನಾಭಿಪ್ರಾಯ, ಸಂಬಂಧಗಳೊಳಗೆ ಬಿರುಕು ಕಂಡೀತು. ಕೌಟುಂಬಿಕ  ಕಲಹ. ಕೃಷಿ ಕಾರ್ಯಗಳಲ್ಲಿ   ಹಿನ್ನಡೆ. ನಿಮ್ಮ  ಪ್ರಯತ್ನ, ಪರಿಶ್ರಮಕ್ಕೆ  ತಕ್ಕ ಪ್ರತಿಫಲ, ಆದಾಯ ದೊರೆಯದು. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ. ಶುಭದಿನ: 17, 18

ಮೀನ: ಆರೋಗ್ಯದ ಬಗ್ಗೆ  ಜಾಗ್ರತೆ ವಹಿಸಿ. ವಾಹನ ಚಲಾವಣೆಯಲ್ಲಿ  ಹೆಚ್ಚಿನ ಜಾಗ್ರತೆ ವಹಿಸಿ. ಆದಾಯದಲ್ಲಿ  ಹೆಚ್ಚಳ. ಅನಿರೀಕ್ಷಿತ ಧನಲಾಭ ಯೋಗವಿದೆ. ಉದ್ಯೋಗದಲ್ಲಿ  ಸ್ಥಾನಬಡ್ತಿ  ಯೋಗವಿದೆ. ಕೆಲಸಗಳನ್ನು  ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಅವಿವಾಹಿತರಿಗೆ  ಶೀಘ್ರ ವಿವಾಹ ಯೋಗವಿದೆ. ಶತ್ರುಭಾದೆ ನಿವಾರಣೆಯಾಗಲಿದೆ. ದುರಭ್ಯಾಸದಲ್ಲಿ  ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ದಾಂಪತ್ಯ ಜೀವನ ಸುಖಪ್ರದ. ದುರ್ಗಾ,  ಗಣಪತಿ ಆರಾಧನೆ ಶುಭಪ್ರದ. ಶುಭದಿನ: 18, 19

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss