spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ (ನವಂಬರ್ 8ರಿಂದ 14ರವರೆಗೆ)

- Advertisement -Nitte

ವಾರ ಭವಿಷ್ಯ (ನವಂಬರ್ 8ರಿಂದ 14ರವರೆಗೆ)

ಮೇಷ: ಆರೋಗ್ಯ ಚೆನ್ನಾಗಿರದು. ಶೀತ, ಕಫದ ಭಾದೆ ಕಾಡಲಿದೆ. ಮುಖದ ಮೇಲೆ ಮೊಡವೆಗಳು, ಚರ್ಮ ಸಂಬಂಧಿ ತೊಂದರೆ ಕಾಡಬಹುದು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ತೊಂದರೆ ಕಾಡಬಹುದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ಉದ್ಯೋಗ ಸ್ಥಾನದಲ್ಲಿ ಉತ್ತಮ ಕೆಲಸಗಾರನೆಂದು ಹೆಸರು ಮಾಡುವಿರಿ. ವ್ಯಾಪಾರದಲ್ಲಿ ಮೋಸ, ವಂಚನೆಗಳಾಗದಂತೆ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಕಲಹ. ಮಕ್ಕಳಿಂದಾಗಿ ಸಂತೃಪ್ತಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 8, 12

ವೃಷಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮಕ್ಕಳ ವಿಚಾರದಲ್ಲಿ ಚಿಂತೆ. ಹಿರಿಯರೊಂದಿಗೆ ಕಲಹ/ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ. ಆದಾಯದಲ್ಲಿ ಹೆಚ್ಚಳ. ಹಣದ ಉಳಿತಾಯವೂ ಆಗಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ದಾಂಪತ್ಯ ಜೀವನ ಸುಖ, ಸಮಾಧಾನ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯುವುದು. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 13, 14

ಮಿಥುನ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಕಳೆದುಹೋದ ಕೆಲವು ಸದವಕಾಶಗಳು ಮರಳಿ ಬರಲಿವೆ. ಉತ್ತಮ ಸ್ಥಾನಮಾನಗಳನ್ನು ಗಳಿಸುವಿರಿ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯದಲ್ಲಿ ಸುಖ, ಸಮಾಧಾನದ ಕಾಲ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಸಂಭ್ರಮ. ಈಶ್ವರ, ವಿಷ್ಣು, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 8, 10

ಕರ್ಕಾಟಕ: ಯಾವ ಕೆಲಸಗಳಿಗೆ ಮುಂದಾದರೂ ವಿಘ್ನ, ಅಡಚಣೆಗಳು ಉಂಟಾಗುತ್ತವೆ. ಶತ್ರುಭಾದೆ ಕಾಡಲಿದೆ. ಹಿರಿಯರೊಂದಿಗೆ ಕಲಹ. ಕೌಟುಂಬಿಕ ಕಲಹ. ಹಿರಿಯರ ಭೂಮಿ/ಆಸ್ತಿಗಾಗಿ ವಾದ ವಿವಾದಗಳು ಬಂದಾವು. ಮನೆ ಬದಲಾವಣೆ/ವಾಸಸ್ಥಾನ ಬದಲಾವಣೆಗೆ ಅವಕಾಶವಿದೆ. ಆದಾಯ ಉತ್ತಮ. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ದುರಭ್ಯಾಸಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ದುರ್ಗಾ, ಈಶ್ವರ ಆರಾಧನೆ ಶುಭಪ್ರದ. ಶುಭದಿನ: 12, 13

ಸಿಂಹ: ಆರೋಗ್ಯ ಚೆನ್ನಾಗಿರದು. ಆದಾಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಆದರೆ, ಅನಾವಶ್ಯಕ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಕಾಡಬಹುದು. ವಾಹನ ಚಲಾವಣೆಯಲ್ಲಿ ಬಹಳ ಜಾಗ್ರತೆ ವಹಿಸಿ. ಆಸ್ತಿ/ಭೂಮಿಯ ವಿಚಾರದಲ್ಲಿ ಜಾಗ್ರತೆ ವಹಿಸಿ. ಉದ್ಯೋಗ ಸಂಬಂಧ ಕಿರಿಕಿರಿ. ಉದ್ಯೋಗ ಸ್ಥಾನದಲ್ಲಿ ಕೆಲವು ಅಪವಾದಗಳನ್ನು ಎದುರಿಸಬೇಕಾದೀತು. ಮಾತು ತೀಕ್ಷ್ಣವಾಗಿ ತುಸು ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 10, 11

ಕನ್ಯಾ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಚರ್ಮ ಸಂಬಂಧ ತೊಂದರೆ ಕಾಡಬಹುದು. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ಕುಟುಂಬದಲ್ಲಿ ದೇವತಾ ಕಾರ್ಯ, ಮಂಗಳ ಕಾರ್ಯಗಳ ಸಂಭ್ರಮ. ತಂದೆ/ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ದಾಂಪತ್ಯದಲ್ಲಿ ಕಲಹ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 12, 14

ತುಲಾ: ಆರೋಗ್ಯ ಚೆನ್ನಾಗಿರದು. ವಾತ, ಉಷ್ಣ, ತಲೆನೋವಿನಂತಹ ತೊಂದರೆ ಕಾಡಬಹುದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧದಲ್ಲಿ ಒಡಕುಗಳು ಬಂದಾವು. ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ತೊಂದರೆ ಕಾಡಬಹುದು. ಮಕ್ಕಳ ವಿಚಾರದಲ್ಲಿ ಚಿಂತೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಬರುವುದು. ತಾಮ್ರ, ಲೋಹ ವ್ಯವಹಾರಗಳಲ್ಲಿ ಲಾಭ ಬರುವುದು. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗುವುದು. ವಾಹನ ಖರೀದಿಗೆ ಅವಕಾಶವಿದೆ. ಈಶ್ವರ, ವಿಷ್ಣು, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: 11, 14

ವೃಶ್ಚಿಕ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ. ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 10, 11

ಧನು: ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆದಾಯದಲ್ಲಿ ಹೆಚ್ಚಳ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಕೌಟುಂಬಿಕ ಕಲಹ. ಹಿರಿಯರ ಭೂಮಿ, ಆಸ್ತಿ ಸಂಬಂಧ ವಾದ ವಿವಾದಗಳು ಬಂದಾವು. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 12, 14

ಮಕರ: ಆರೋಗ್ಯದಲ್ಲಿ ಸುಧಾರಣೆ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುವಿರಿ. ಉದ್ಯೋಗ ಬದಲಾವಣೆಗೆ ಅವಕಾಶವಿದೆ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ. ರಾಜಕೀಯ ಕ್ಷೇತ್ರದಲ್ಲಿ  ಬೆಂಬಲ. ಪ್ರೋತ್ಸಾಹ ದೊರೆಯುವುದು. ಅಭ್ಯಾಸದಲ್ಲಿ ಹಿನ್ನಡೆ, ಆಲಸ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದಷ್ಟು ಅಂಕಗಳು ಬಾರವು. ಕೌಟುಂಬಿಕ ಕಲಹಗಳು. ದಾಂಪತ್ಯದಲ್ಲಿ ವಿರಸ. ಈಶ್ವರ, ಸ್ಕಂದ, ದುರ್ಗಾರಾಧನೆ ಶುಭಪ್ರದ. ಶುಭದಿನ: 9, 14

ಕುಂಭ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಬಿರುಕು ಕಾಣಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅವಕಾಶ ದೊರೆಯಲಿದೆ. ಕೌಟುಂಬಿಕ ಕಲಹ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದುರಭ್ಯಾಸಗಳಿಂದ ದೂರವಿರಲು ಪ್ರಯತ್ನಿಸಿ. ವ್ಯಾಪಾರಕ್ಕೆ ಪ್ರತಿಕೂಲ ಕಾಲ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ವಿಷ್ಣು, ಈಶ್ವರ ಆರಾಧನೆ ಶುಭಪ್ರದ. ಶುಭದಿನ: 9, 11

ಮೀನ: ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯದಲ್ಲಿ ಗಣನೀಯ ಹೆಚ್ಚಳ ಕಾಣಲಿದೆ. ಸ್ತ್ರೀ ವಿಚಾರದಲ್ಲಿ ಜಗಳ, ಅಪವಾದಗಳು ಬಂದಾವು. ದಾಂಪತ್ಯದಲ್ಲಿ ಕಲಹ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮವರ ಮೋಸದಿಂದ ಕೆಲವೊಂದು ಅವಕಾಶಗಳು ಕೈತಪ್ಪಿ ಹೋಗುವವು. ಸಂತತಿ ಶುಭಸೂಚನೆ. ವ್ಯಾಪಾರದಲ್ಲಿ ಮಾತ್ರ ನಿರೀಕ್ಷಿಸಿದಷ್ಟು ಲಾಭ ಬಾರದು. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 11, 13

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss