Monday, March 1, 2021

Latest Posts

ವಾರ ಭವಿಷ್ಯ ನವೆಂಬರ್ 29ರಿಂದ ಡಿಸೆಂಬರ್ 5ರವರೆಗೆ

ಮೇಷ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಒಡಕುಗಳು ಬಂದಾವು. ದೇವತಾನುಗ್ರಹ ಉತ್ತಮವಿರುತ್ತದೆ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯದಲ್ಲಿ ತುಸು ಹಿನ್ನಡೆ. ಖರ್ಚಿನ ಪ್ರಮಾಣ ಹೆಚ್ಚಾಗಿ ಹಣಕಾಸಿನ ಅಡಚಣೆ ಕಾಡಬಹುದು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ವಿಷ್ಣು, ಆರಾಧನೆ ಶುಭಪ್ರದ. ಶುಭದಿನ: 29, 30

ವೃಷಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚು ವಿರೋಧ, ಪೈಪೋಟಿ ಎದುರಿಸಬೇಕಾದೀತು. ಆದಾಯದಲ್ಲಿ ಮುನ್ನಡೆ. ಆದಾಯ ಉತ್ತಮ. ಉಳಿತಾಯವೂ ಆಗಲಿದೆ. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ.

ಮಿಥುನ: ಗುರು, ಶನಿ, ರಾಹುಗಳು ಪ್ರತಿಕೂಲ ಸ್ಥಾನದಲ್ಲಿರುವುದರಿಂದ ಯಾವುದೇ ಕೆಲಸಗಳು ಸಕಾಲದಲ್ಲಿ ನಡೆಯವು. ನಿಮ್ಮ ಕೆಲಸಗಳಿಗಾಗಿ ಯಾವುದೇ ಪ್ರೋತ್ಸಾಹ, ಸಹಕಾರ ದೊರಕದು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಉಳಿತಾಯವಾಗದು. ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 2, 3

ಕರ್ಕಾಟಕ: ದೇವತಾನುಗ್ರಹ ಕಾಲ. ಆದಾಯದಲ್ಲಿ ಹೆಚ್ಚಳ ಕಾಣಲಿದೆ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರ ಗತಿಯಲ್ಲಿ ಸಾಗಲಿದೆ. ದುರಭ್ಯಾಸದಲ್ಲಿ ಭಾಗಿಯಾಗದಂತೆ ಜಾಗ್ರತೆ ವಹಿಸಿ. ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ. ವ್ಯಾಪಾರಿಗಳಿಗೆ ನಷ್ಟ, ಮೋಸ, ವಂಚನೆಗಳಾದಾವು. ಜಾಗ್ರತೆಯಿಂದ ವ್ಯವಹರಿಸಿ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸ್ವಲ್ಪ ಮೋಸ, ವಂಚನೆಗಳಾದಾವು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 4, 5

ಸಿಂಹ: ಶತ್ರುಭಾದೆ ಕಾಡಲಿದೆ. ಯಾವುದೇ ಕೆಲಸಗಳಿಗೆ ಮುಂದಾದರೂ ವಿರೋಧ, ವಿಘ್ನ, ಅಡಚಣೆಗಳು ಎದುರಾಗುವವು. ವಾಹನ ಚಲಾವಣೆಯಲ್ಲಿ ಜಾಗ್ರತೆ ವಹಿಸಿ. ಹಿರಿಯರೊಂದಿಗೆ ವಿರೋಧ. ನಿಮ್ಮ ಕೆಲಸಗಳಿಗೆ ಹಿರಿಯರ ಪ್ರೋತ್ಸಾಹ/ಅನುಮತಿ ದೊರೆಯದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಉತ್ತಮ ಹೆಸರು ಗಳಿಸುವಿರಿ. ತಂದೆಯ ಆರೋಗ್ಯದ ಮೇಲೆ ನಿಗಾ ವಹಿಸಿ. ದಾಂಪತ್ಯದಲ್ಲಿ ಕಲಹ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 1, 3

ಕನ್ಯಾ: ಮಕ್ಕಳ ಅಭಿವೃದ್ಧಿಯಿಂದ ಸಂತೃಪ್ತಿ. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮೂತ್ರಕೋಶ, ಉದರ ಸಂಬಂಧಿ ತೊಂದರೆ ಕಾಡಲಿದೆ. ದಾಂಪತ್ಯದಲ್ಲಿ ವಿರಸ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿದಾಯಕ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ವಿವಾಹ ಸಂಬಂಧಿತ ಕಾರ್ಯಗಳಿಗೆ ಅಡಚಣೆಗಳು ಬಂದಾವು. ವ್ಯಾಪಾರಿಗಳಿಗೆ ನಿರೀಕ್ಷಿಸಿದಷ್ಟು ಲಾಭಾಂಶ ದೊರೆಯದು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 3, 4

ತುಲಾ: ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಆದಾಯದಲ್ಲಿ ಹೆಚ್ಚಳ. ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿ ಲಾಭಾಂಶ ದೊರೆಯಲಿದೆ. ಉಳಿತಾಯದ ಕಡೆಗೆ ಗಮನವಿಡಿ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಸಾಗಲಿದೆ. ದಾಂಪತ್ಯದಲ್ಲಿ ವಿರಸ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಸಂಭ್ರಮ. ದುಂದುವೆಚ್ಚಗಳ ಮೇಲೆ ಕಡಿವಾಣ ಹಾಕಿ. ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 4, 5

ವೃಶ್ಚಿಕ: ಆರೋಗ್ಯ ಸಂಬಂಧಿ ತೊಂದರೆಗಳು ಕಾಡುವವು. ಉಷ್ಣ, ವಾತ, ತಲೆನೋವು, ಚರ್ಮಸಂಬಂಧಿ ತೊಂದರೆ ಕಾಡಬಹುದು. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭ ದೊರೆಯದು. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತ ಸಾಧಿಸಿ. ದಾಂಪತ್ಯದಲ್ಲಿ ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 4, 5

ಧನು: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಆದಾಯದಲ್ಲಿ ತುಸು ಹಿನ್ನಡೆ. ಖರ್ಚುಗಳ ಪ್ರಮಾಣ ಅಧಿಕವಾಗಿ ಹಣಕಾಸಿನ ಅಡಚಣೆ ಬಂದೀತು. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವ ಕಾರಣ ಜಾಗ್ರತೆಯಿಂದ ವ್ಯವಹರಿಸಿ. ದೂರ ಪ್ರವಾಸ ಯೋಗವಿದೆ. ಕೆಲಸಗಳ ಮೇಲೆ ನಿಮ್ಮ ಬೇಜವಾಬ್ದಾರಿತನದಿಂದ ಕೆಲವೊಂದು ಅಪಜಯಗಳಾದಾವು. ಕೌಟುಂಬಿಕ ಕಲಹಗಳು. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: 1, 2

ಮಕರ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಆದಾಯದಲ್ಲಿ ಹೆಚ್ಚಳ. ಹಣದ ಉಳಿತಾಯವೂ ಆಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಸಾಮಾಜಿಕ, ರಾಜಕೀಯ ಕಾರ್ಯಗಳಲ್ಲಿ ಮುನ್ನಡೆ. ಸ್ಕಂದ, ಈಶ್ವರ ಆರಾಧನೆ ಶುಭಪ್ರದ. ಶುಭದಿನ: 3, 5

ಕುಂಭ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನಬಡ್ತಿ ಯೋಗವಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಸಂಭ್ರಮ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನೋಪಯೋಗಿ ಕೆಲಸಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ವ್ಯಾಪಾರಿಗಳಿಗೂ ಉತ್ತಮ ಲಾಭಾಂಶ ದೊರೆಯಲಿದೆ. ಕೌಟುಂಬಿಕ ಕಲಹಗಳು, ನೂತನ ಗೃಹ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 29, 4

ಮೀನ: ದೇವತಾನುಗ್ರಹ ಕಾಲ. ಆರೋಗ್ಯದ ತೊಂದರೆ ಕಾಡಬಹುದು. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ತೃಪ್ತಿಕರವಾಗಿದ್ದು ಹಣಕಾಸಿನ ವ್ಯವಸ್ಥೆ ತೃಪ್ತಿಕರ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ನಿರೀಕ್ಷಿಸಿದಷ್ಟು ಲಾಭಾಂಶ ಬಾರದು. ದಾಂಪತ್ಯದಲ್ಲಿ ಕಲಹ. ದುರಭ್ಯಾಸದಲ್ಲಿ ಭಾಗಿಯಾಗದಂತೆ ಜಾಗ್ರತೆ ವಹಿಸಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: 30, 1

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!