spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರ ಭವಿಷ್ಯ ನ.೨೨ರಿಂದ ೨೮ರತನಕ

- Advertisement -Nitte

ವಾರ ಭವಿಷ್ಯ ನ.೨೨ರಿಂದ ೨೮ರತನಕ

ಮೇಷ: ಆರೋಗ್ಯದಲಿ  ವ್ಯತ್ಯಾಸ ಕಂಡೀತು.  ಶೀತ ಕಫದ ಬಾಧೆ ಕಾಡಲಿದೆ.  ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು  ಯಶಸ್ವಿ ರೀತಿಯಲ್ಲಿ  ಪೂರ್ಣಗೊಳಿಸುವಿರಿ.  ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ.  ಉದ್ಯೋಗದಲ್ಲಿ  ಸ್ಥಾನ ಬಡ್ತಿ ಯೋಗವಿದೆ.  ಆದಾಯ ಉತ್ತಮವಿದ್ದರೂ ಖರ್ಚಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಣಕಾಸಿನ ತೊಂದರೆ ಕಾಡಬಹುದು. ವ್ಯಾಪಾರದಲ್ಲಿ  ಮೋಸ, ವಂಚನೆಗಳಾದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಬಂಧ ನಿಶ್ಚಯವಾಗಲಿದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: ೨೪, ೨೮

ವೃಷಭ: ಆರೋಗ್ಯ ಚೆನ್ನಾಗಿರದು. ಹಿರಿಯರೊಂದಿಗೆ ಮನಸ್ತಾಪಗಳು. ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚು  ವಿರೋಧ, ಪೈಪೋಟಿ ಎದುರಿಸಬೇಕಾದೀತು. ಅನಿರೀಕ್ಷಿತ ಧನಲಾಭಯೋಗವಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಕುಟುಂಬದಲ್ಲಿ  ಶುಭಕಾರ್ಯಗಳ ಸಂಭ್ರಮ. ಉದ್ಯೋಗ ಸ್ಥಾನದಲ್ಲಿ  ಕಿರಿಕಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಭೂಮಿ/ನಿವೇಶನಗಳ ಮಾರಾಟ, ವ್ಯವಹಾರದಿಂದ ಉತ್ತಮ ಲಾಭ ಬರಲಿದೆ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: ೨೩, ೨೫

ಮಿಥುನ: ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು ಉತ್ತಮ ರೀತಿಯಲ್ಲಿ  ನಿರ್ವಹಿಸುವಿರಿ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದ ಹಣಕಾಸಿನ ಅಡಚಣೆ ಬಂದೀತು.  ವ್ಯಾಪಾರದಲ್ಲಿ  ನಿರೀಕ್ಷಿಸಿದಷ್ಟು ಲಾಭ ಬಾರದು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ಶಿಕ್ಷಣಕ್ಕೆ ಪೂರಕ ಅನುಕೂಲತೆಗಳು ಒದಗಲಿವೆ. ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯ. ಸದ್ಯ ಶನಿಯ ಮತ್ತು ಗುರುವಿನ ಅಷ್ಟಮದ ಸ್ಥಿತಿ ನಿಮಗೆ ಮಾರಕವಿರುವುದರಿಂದ ನವಗ್ರಹ ಶಾಂತಿ ಮಾಡುವುದು ಸೂಕ್ತ. ಈಶ್ವರ, ಸ್ಕಂದ ಆರಾಧನೆ ಶುಭಪ್ರದ. ಶುಭದಿನ: ೨೬, ೨೭

ಕರ್ಕಾಟಕ: ಶತ್ರುಬಾಧೆ ಕಾಡಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯಕ. ಸದ್ಯ ಗುರು ನಿಮಗೆ ಅನುಕೂಲಕರ ಸ್ಥಾನಕ್ಕೆ ಪ್ರವೇಶಿಸುವುದರಿಂದ ನಿಮ್ಮ  ಕಷ್ಟದ ದಿನಗಳಿಗೆ ಮುಕ್ತಾಯ ಹೇಳಬಹುದು. ಒಂದೊಂದಾಗಿ ಸಮಸ್ಯೆಗಳು ಪರಿಹಾರ ಮಾರ್ಗ ಕಾಣಲಿವೆ. ನೂತನ ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸಲು ಸೂಕ್ತ ಕಾಲ. ಆದಾಯ ಉತ್ತಮವಿದ್ದು  ಹಣಕಾಸಿನ ವಿಚಾರ ತೃಪ್ತಿಕರ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ದುರಭ್ಯಾಸದಲ್ಲಿ  ಭಾಗಿಯಾಗದಂತೆ ಜಾಗ್ರತೆ ವಹಿಸಿ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ.  ಶುಭದಿನ: ೨೫, ೨೮

ಸಿಂಹ: ಕೌಟುಂಬಿಕ ಕಲಹಗಳು. ದೂರಪ್ರವಾಸ, ಮನೆ ಬದಲಾವಣೆ, ಮನೆಯಿಂದ ಹೊರಗೆ ಬರುವ ಯೋಗ ಇರುವುದು. ಹಿರಿಯರೊಂದಿಗೆ ಕಲಹ. ಗುರು ಪ್ರತಿಕೂಲ ಸ್ಥಾನ ಪ್ರವೇಶಿಸುವುದರಿಂದ ಗೃಹಶಾಂತಿ ಮಾಡಿಸುವುದು ಸೂಕ್ತ. ವಾಹನ ಚಲಾವಣೆಯಲ್ಲಿ  ಜಾಗ್ರತೆ ವಹಿಸಿ.  ಉದ್ಯೋಗ ಸ್ಥಾನದಲ್ಲಿ  ಸುಧಾರಣೆ ಕಾಣಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ವ್ಯಾಪಾರದಲ್ಲಿ  ನಿರೀಕ್ಷಿಸಿದಷ್ಟು  ಲಾಭಾಂಶ ದೊರೆಯದು. ಈಶ್ವರ, ದುರ್ಗಾರಾಧನೆ ಶುಭಪ್ರದ. ಶುಭದಿನ: ೨೨, ೨೪

ಕನ್ಯಾ: ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದೆ. ಆದಾಯದಲ್ಲಿ  ಮುನ್ನಡೆ. ಉಳಿತಾಯವೂ ಆಗಲಿದೆ. ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ.  ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ  ಉತ್ತಮ ಜನಪರಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆಯುವಿರಿ. ನೂತನ ಗೃಹ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ದಾಂಪತ್ಯದಲ್ಲಿ  ಕಲಹ. ಈಶ್ವರ, ದುರ್ಗಾ, ಸ್ಕಂದ ಆರಾಧನೆ ಶುಭಪ್ರದ.  ಶುಭದಿನ: ೨೫, ೨೬

ತುಲಾ: ಆರೋಗ್ಯದಲ್ಲಿ  ಸುಧಾರಣೆ. ಆದಾಯದಲ್ಲಿ  ಹೆಚ್ಚಳ ಕಾಣಲಿದೆ.  ಹಣದ ಅಪವ್ಯಯಗಳಾಗದಂತೆ ಜಾಗ್ರತೆ ವಹಿಸಿ. ಆದಾಯದ ಪ್ರಮಾಣಕ್ಕೆ ಸರಿಯಾದ ಉಳಿತಾಯವಾಗದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ  ಹಿನ್ನಡೆ. ಆಲಸ್ಯ ಕಾಡುವುದು. ನೂತನ ಗೃಹ ನಿರ್ಮಾಣ ಕಾರ್ಯ ಆರಂಭಿಸಲು ಸೂಕ್ತ ಕಾಲ. ವಾಹನ ಖರೀದಿಗೂ ಅವಕಾಶವಿದೆ. ದಾಂಪತ್ಯದಲ್ಲಿ  ವಿರಸ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ. ಶುಭದಿನ: ೨೬, ೨೭

ವೃಶ್ಚಿಕ: ಆರೋಗ್ಯದಲ್ಲಿ  ವ್ಯತ್ಯಾಸ ಕಾಣಲಿದೆ. ಉಷ್ಣಪೀಡೆ, ತಲೆನೋವು, ಚರ್ಮದ ಸಂಬಂಧ ತೊಂದರೆ ಕಾಡಬಹುದು. ಮಕ್ಕಳ ಆರೋಗ್ಯದ ಬಗ್ಗೆ  ಜಾಗ್ರತೆ ವಹಿಸಿ. ಶತ್ರುಬಾಧೆ ಕಾಡಲಿದೆ. ಕೌಟುಂಬಿಕ ಕಲಹಗಳು. ಆದಾಯದಲ್ಲಿ  ಇಳಿಮುಖ. ಖರ್ಚಿನ ಪ್ರಮಾಣದಲ್ಲಿ  ಹೆಚ್ಚಳವಾಗಿ ಹಣಕಾಸಿನ ಅಡಚಣೆ ಬಂದೀತು.  ದಾಂಪತ್ಯದಲ್ಲಿ  ವಿರಸ. ಕೃಷಿ ಕಾರ್ಯಗಲ್ಲಿ  ಹಿನ್ನಡೆ.  ವಿದ್ಯಾಭ್ಯಾಸದಲ್ಲಿ  ಹಿನ್ನಡೆ. ಈಶ್ವರ, ವಿಷ್ಣು ಆರಾಧನೆ ಶುಭಪ್ರದ.  ಶುಭದಿನ: ೨೭, ೨೮

ಧನು: ಆರೋಗ್ಯದಲ್ಲಿ  ಉತ್ತಮ ಸುಧಾರಣೆ ಕಾಣಲಿದೆ. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ ಅಡಚಣೆ ಬಂದೀತು. ಕೃಷಿ ಕಾರ್ಯಗಳಲ್ಲಿ  ಮುನ್ನಡೆ. ದೂರ ಪ್ರವಾಸ ಯೋಗವಿದೆ. ತೀರ್ಥಯಾತ್ರೆ, ಪುಣ್ಯಕ್ಷೇತ್ರಗಳ ಸಂದರ್ಶನ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ವಾಹನ ಚಲಾವಣೆಯಲ್ಲಿ  ಜಾಗ್ರತೆ ವಹಿಸಿ.  ಈಶ್ವರ, ಗಣಪತಿ ಆರಾಧನೆ ಶುಭಪ್ರದ.  ಶುಭದಿನ: ೨೨, ೨೪

ಮಕರ: ಆರೋಗ್ಯದ ತೊಂದರೆ ಕಾಡಬಹುದು.  ಕೌಟುಂಬಿಕ ಕಲಹಗಳು. ಹಿರಿಯರ ಭೂಮಿ, ಆಸ್ತಿ ವಿಚಾರದಲ್ಲಿ  ವಿವಾದಗಳು ಬಂದಾವು. ಮಕ್ಕಳ ಆರೋಗ್ಯದ ಕುರಿತು ನಿಗಾ ವಹಿಸಿ. ಕೆಲಸಗಳನ್ನು  ಯಶಸ್ವಿ  ರೀತಿಯಲ್ಲಿ  ನಿರ್ವಹಿಸುವಿರಿ. ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ  ಗಣನೀಯ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ  ಸ್ಥಾನ ಬಡ್ತಿ ಯೋಗವಿದೆ. ಆದಾಯ ಉತ್ತಮ.  ಹಣಕಾಸಿನ ವಿಚಾರ ತೃಪ್ತಿಕರ.  ಸ್ಕಂದ, ದುರ್ಗಾರಾಧಣೆ ಶುಭಪ್ರದ.  ಶುಭದಿನ: ೨೫, ೨೭

ಕುಂಭ: ಆರೋಗ್ಯ ಚೆನ್ನಾಗಿರದು. ಕೆಲಸಗಳು ನಿಧಾನಗತಿಯಲ್ಲಿ  ಸಾಗುವವು. ಹಣಕಾಸಿನ ಮೋಸ, ವಂಚನೆಗಳಾಗದಂತೆ ಜಾಗ್ರತೆ ವಹಿಸಿ.  ಆದಾಯದಲ್ಲಿ   ಹಿನ್ನಡೆ. ಕೃಷಿ ಕಾರ್ಯಗಳಲ್ಲಿ  ಹಿನ್ನಡೆ.  ವ್ಯಾಪಾರದಲ್ಲಿ  ಮೋಸ, ವಂಚನೆಗಳಾದಾವು. ವಿದ್ಯಾಭ್ಯಾಸದಲ್ಲಿ  ನಿರೀಕ್ಷಿಸಿದಷ್ಟು  ಫಲಿತಾಂಶ ಬಾರದು.  ಮಾತು ತೀಕ್ಷ್ಣವಾಗಿ ಭಿನ್ನಾಭಿಪ್ರಾಯ, ಜಗಳಗಳಾದಾವು. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ.  ಶುಭದಿನ: ೨೨, ೨೩

ಮೀನ: ದೇವತಾನುಗ್ರಹ ಕಾಲ. ಮಕ್ಕಳ ಅಭಿವೃದ್ದಿಯಿಂದ ಸಂತೃಪ್ತಿ.  ಕೆಲಸಗಳನ್ನು  ಉತ್ತಮ ರೀತಿಯಲ್ಲಿ  ನಿರ್ವಹಿಸುವಿರಿ. ಉದ್ಯೋಗದಲ್ಲಿ  ಸ್ಥಾನಬಡ್ತಿ ಯೋಗವಿದೆ. ದುರಭ್ಯಾಸದಲ್ಲಿ   ಭಾಗಿಯಾಗದಂತೆ ಜಾಗ್ರತೆ ವಹಿಸಿ.  ದಾಂಪತ್ಯ ಜೀವನ ಸುಖಪ್ರದ.  ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯದಲ್ಲಿ  ಹೆಚ್ಚಳ.  ಗಣಪತಿ, ದುರ್ಗಾರಾಧನೆ ಶುಭಪ್ರದ.  ಶುಭದಿನ: ೨೫, ೨೬.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss