Saturday, July 2, 2022

Latest Posts

ವಾಲ್‌ಸ್ಟ್ರೀಟ್ ಜರ್ನಲ್, ರಾಹುಲ್ ಕ್ಷಮೆಯಾಚನೆಗೆ ವಿಹಿಂಪ ಆಗ್ರಹ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಸುಳ್ಳು ಆರೋಪಗಳನ್ನೇ ಮುಂದಿಟ್ಟುಕೊಂಡು ಬಜರಂಗದಳವನ್ನು ನಿಂದಿಸುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ನಿಲುವು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಅಮೆರಿಕದ ಪತ್ರಿಕೆಯೊಂದರ ಸುಳ್ಳು ವರದಿ ತುಣುಕನ್ನು ಮುಂದಿಟ್ಟುಕೊಂಡು ಭಾರತೀಯ ಹಿಂದು ಸಮಾಜದ ಸಂಘಟನೆಯ ವಿರುದ್ಧ ಮಾತನಾಡುವ ರಾಹುಲ್ ವರ್ತನೆ ಖಂಡನೀಯ ಎಂದು ವಿಹಿಂಪ ಹೇಳಿದೆ.
ರಾಷ್ಟ್ರವಿರೋ ತುಕ್ಡೇ ತುಕ್ಡೇ ಗ್ಯಾಂಗ್, ಸಿಎಎ ವಿರೋಧಿ ಗ್ಯಾಂಗ್, ದಿಲ್ಲಿ ದಂಗೆಕೋರರು, ಚೀನಾ ಪರ ಮತ್ತು ಪಾಕಿಸ್ಥಾನ ಪರ ಇರುವವರು ಸೇರಿದಂತೆ ಸದಾ ರಾಷ್ಟ್ರವಿರೋಧಿ ನಿಲುವಿನ ವಿಚ್ಛಿದ್ರಕಾರಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವ ರಾಹುಲ್ ಗಾಂಧಿಗೆ ಬಜರಂಗದಳದಂತಹ ರಾಷ್ಟ್ರೀಯತಾವಾದಿ ಸಂಘಟನೆ ಕಣ್ಣು ಕುಕ್ಕುತ್ತಿರುವಂತಿದೆ ಎಂಬುದಾಗಿ ವಿಹಿಂಪ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಡಪಂಥೀಯ ವಿಚಾರಗಳ ಪ್ರಚಾರನಿರತ ವಾಲ್‌ಸ್ಟ್ರೀಟ್ ಜರ್ನಲ್ , ಬಜರಂಗದಳ ವಿರುದ್ಧ ಪ್ರಕಟಿಸಿದ ಸುದ್ದಿ ಸತ್ಯವೂ ಅಲ್ಲ, ವಾಸ್ತವಿಕ ಅಂಶಗಳನ್ನು ಆಧರಿಸಿಯೂ ಇಲ್ಲ. ವರದಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳಾರೂ ಅಕೃತ ವ್ಯಕ್ತಿಗಳಲ್ಲ ಎಂಬುದಾಗಿ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಈಗಾಗಲೇ ಸ್ಪಷ್ಟಪಡಿಸಿದ್ದರೂ, ರಾಹುಲ್ ಇಂತಹ ಆರೋಪ ಮಾಡುತ್ತಿರುವುದು ಖಂಡನೀಯ ಎಂದವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅಮೆರಿಕನ್ ಪತ್ರಿಕೆಯೊಂದನ್ನು ನಂಬುತ್ತಾರೆ, ಆದರೆ ಭಾರತದ ರಾಷ್ಟ್ರೀಯವಾದಿ ಯುವ ಸಂಘಟನೆಯನ್ನು ದೂಷಿಸುತ್ತಾರೆ .ಈಗ ಸುಳ್ಳುವರದಿಗಾಗಿ ವಾಲ್‌ಸ್ಟ್ರೀಟ್ ಜರ್ನಲ್ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಿಂದು ಸಂಘಟನೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ವಿಹಿಂಪ ಈಗಾಗಲೇ ವಾಲ್‌ಸ್ಟ್ರೀಟ್ ಜರ್ನಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದನ್ನೂ ಇಲ್ಲಿ ಸ್ಮರಿಸಬಹುದು.
ಈ ಹಿಂದೆಯೂ ವಿಕಿ-ಲೀಕ್ಸ್‌ನಿಂದ ಮಾಹಿತಿ ಪಡೆದ ಹಿಂದಿನ ಮಾಧ್ಯಮ ವರದಿಗಳು, ಸೋನಿಯಾ ಗಾಂಧಿ ಹೇಗೆ ಬಜರಂಗದಳವನ್ನು ನಿಷೇಸಲು ಸಂಚು ನಡೆಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿತ್ತು. ಆದರೆ ಅವರಿಗೆ ಈ ಕಾರ್ಯದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಫೇಸ್‌ಬುಕ್‌ನಲ್ಲಿ ಭಜರಂಗದಳವನ್ನು ನಿರ್ಬಂಧಿಸಲು ಯಾವುದೇ ಕಾರಣವಿಲ್ಲ ಎಂದು ಫೇಸ್ ಬುಕ್ ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ ಹಿಂದೂ ವಿರೋಧಿ ಮನೋಭಾವವನ್ನು ಇವರುಗಳು ಪ್ರತಿಬಿಂಬಿಸುತ್ತಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ರಾಹುಲ್ ಗಾಂಧಿ ಜಾಗತಿಕ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಹೊಂದಿರುವ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss