Wednesday, August 10, 2022

Latest Posts

ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ, 86 ಕೆಜಿ ಗಾಂಜಾ ವಶ

ಮೈಸೂರು: ವಾಹನವೊಂದರಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಮೈಸೂರಿನ ಕೆ.ಆರ್.ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಮಲ್ಲಪುರಂ ಜಿಲ್ಲೆಯ ಮಹಮ್ಮದ್ ಶಫಿ, ಸಲೀಂ, ಇಬ್ರಾಹೀಂ ಹಾಗೂ ವಾಹನ ಚಾಲಕನಾದ ವೈನಾಡು ಜಿಲ್ಲೆಯ ಷಫೀ ಬಂಧಿತರು. ಇವರುಗಳು
ಆಂಧ್ರಪ್ರದೇಶ ರಾಜ್ಯದಿಂದ ಕೇರಳ ರಾಜ್ಯಕ್ಕೆ ಬೆಂಗಳೂರು-ಮೈಸೂರು-ನoಜನಗೂಡು ಮುಖ್ಯರಸ್ತೆಯ ಮಾರ್ಗವಾಗಿ ಮಹೇಂದ್ರ ಬುಲೆರೋ ಮ್ಯಾಕ್ಸಿ ಟ್ರಕ್ ವಾಹನ ನಂಬರ್ ಕೆ.ಎಲ್-೨೦-೫೦೫೦ವಾಹನದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಕಾನೂನು ಬಾಹಿರವಾಗಿ ತುಂಬಿಕೊAಡು ಸಾಗಣಿಕೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ದಾಳಿ ನಡೆಸಿದ ಪೊಲೀಸ್ ಇನ್ಸಪೆಕ್ಟರ್ ರಘು, ಕಾನ್ಸಟೇಬಲ್ ಗಳಾದ ಕೆ.ಮಂಜುನಾಥ, ಸಿಬ್ಬಂದಿಗಳಾದ ಎಂ.ಎಸ್.ಮAಜುನಾಥ, ರಂಗಸ್ವಾಮಿ, ಮಹಮದ್ ಅಸಾದ್, ಗೋವಿಂದರಾಜು, ನಾಗರಾಜು ಅವರುಗಳು, ನಾಲ್ವರು ಆರೋಪಿಗಳನ್ನು ಬಂಧಿಸಿ, ೮೬ಕೆಜಿ ೩೦೦ಗ್ರಾಂ ಗಳಷ್ಟು ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss