Wednesday, July 6, 2022

Latest Posts

ವಾ.ಕ.ರ.ಸಾ.ಸಂ ನೌಕರರ ವತಿಯಿಂದ ಸಿ.ಎಂ. ಕೋವಿಡ್-19 ಪರಿಹಾರ ನಿಧಿಗೆ 2.03 ಕೋಟಿ ಸಲ್ಲಿಕೆ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಲ್ಲಾ ಅಧಿಕಾರಿ ಹಾಗೂ ನೌಕರರ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಒಂದು ದಿನದ ವೇತನದ ಒಟ್ಟು ಮೊತ್ತ 2.03 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವ್ಹಿ.ಎಸ್.ಪಾಟೀಲ್ ಹೇಳಿದರು.
ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಈ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಬುಧವಾರ ಮುಖ್ಯಮಂತ್ರಿಗಳಿಗೆ ಚಕ್ ಹಸ್ತಾಂತರಿಸುವರು. ಸಾರಿಗೆ ಸಂಸ್ಥೆ ಜನರ ಸೇವೆಗಾಗಿ ಇರುವಂತದ್ದು. ಲಾಭಕ್ಕಿಂತ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ. ಬಡಜನರು ಹಾಗೂ ವಿದ್ಯಾರ್ಥಿಗಳು ಸಂಸ್ಥೆಯಿಂದ ಹೆಚ್ಚಿನ ಅನುಕೂಲವಾಗುತ್ತಿದೆ. ಎರೆಡು ತಿಂಗಳಿನಿಂದ ಸಾರಿಗೆ ಸಂಸ್ಥೆ ಸೌಲಭ್ಯವಿಲ್ಲದೆ ಜನರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. 20 ನೇ ತಾರೀಖಿನ ನಂತರ ಸರ್ಕಾರದ ಆದೇಶದ ಅನ್ವಯ ಬಸ್ ಗಳ ಕಾರ್ಯಾಚರಣೆ ಆರಂಭಿಸಲಾಗುವುದು. ನಿಯಮಾವಳಿಗಳಂತೆ ಒಂದು ಬಸ್ ನಲ್ಲಿ 25 ರಿಂದ 30 ಜನರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸಂಸ್ಥೆಗೆ ಪ್ರತಿದಿನ 3 ಕೋಟಿ ನಷ್ಟ ಸಂಭವಿಸಬಹುದು. ಆದರೂ ಸರ್ಕಾರದ ನಿರ್ದೇಶನದಂತೆ ಬಸ್ ಕಾರ್ಯಾಚರಣೆ ಆರಂಭಿಸಿಲಾಗುವುದು. ನೌಕರರ ವೇತನ ಪಾವತಿಗೆ ಸರ್ಕಾರದ ಸಹಾಯ ಅಗತ್ಯವಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss