Tuesday, June 28, 2022

Latest Posts

ವಿಕಲಚೇತನರಿಂದ ಬೃಹತ್ ಪ್ರತಿಭಟನೆ: ನೋಡಲ್ ಅಧಿಕಾರಿ ನೇಮಕಕ್ಕೆ ವಿರೋಧ

ಧಾರವಾಡ: ವಿ.ಆರ್.ಡಬ್ಲ್ಯು ಹಾಗೂ ಎಂ.ಆರ್.ಡಬ್ಲ್ಯು ಅವರ ಮೇಲೆ ನೋಡಲ್ ಅಧಿಕಾರಿ ನೇಮಿಸುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಸಂಘಟನೆ ನೇತೃತ್ವದಲ್ಲಿ ನಗರದ‌ ಜಿಲ್ಲಾಧಿಕಾರಿ ಕಚೇರಿ ಎದರಿಗೆ ಗುರುವಾರ ಪ್ರತಿಭಟನೆ ನಡೆಸಿದರು.

ಕೆಲಕಾಲ ಪ್ರತಿಭಟಿಸಿದ ವಿಕಲಚೇತನರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ೧೩ ವರ್ಷಗಳಿಂದ ವಿ.ಆರ್.ಡಬ್ಯು ಹಾಗೂ ಎಂ.ಆರ್. ಡಬ್ಲ್ಯು ಕಡಿಮೆ ಸಂಭಳದಲ್ಲಿ ಕೆಲಸ ಮಾಡುತ್ತ, ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈಗ ಅವರ ಮೇಲೆ ನೋಡಲ್ ಅಧಿಕಾರಿ ನೇಮಿಸುವುದು ಸರಿಯಾದ ಕ್ರಮವಲ್ಲ ಎಂದು ಆಪಾದಿಸಿರು.

ತಕ್ಷಣವೇ ಸರ್ಕಾರ ನೋಡಲ್ ಅಧಿಕಾರಿ ನೇಮಕ ಹಿಂಪಡೆಯುವುದ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೂರಾರು ವಿಕಲಚೇತನರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss