Monday, August 8, 2022

Latest Posts

ವಿಕಾಸಸೌಧದಲ್ಲೂ ಮೂಡಿದ ಆತಂಕ: ಶಕ್ತಿಸೌಧಕ್ಕೂ ಕಾಲಿಟ್ಟಿದೆ ಕೊರೋನಾ

ಬೆಂಗಳೂರು: ರಾಜ್ಯದೆಲ್ಲೆಡೆ ಕೊರೋನಾ ಇದೀಗ ಆಡಳಿತ ಸೌಧಕ್ಕೂ ಕಾಲಿಟ್ಟಿದೆ. ಆಹಾರ ಇಲಾಖೆಯ ಮಹಿಳಾ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಕಾಸಸೌಧದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ಸೋಂಕಿತೆಯನ್ನು ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮಂಗಳವಾರವೂ ಆಕೆ ಕರ್ತವ್ಯಕ್ಕೆ ಹಾಜರಾಗಿದ್ದು ಸಿಬ್ಬಂದಿ ವರ್ಗದಲ್ಲಿ ಆತಂಖಹೆಚ್ಚಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವ ೬೦ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಇಲಾಖೆ ನಿರ್ಲಕ್ಷ್ಯಕ್ಕೆ ಆರಕ್ಷಕರಿಗೆ ಹೆಚ್ಚಿದ ಆತಂಕ: ಸೋಮವಾರ ಕೋವಿಡ್-೧೯ಕ್ಕೆ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಮೃತರ ಸಂಪರ್ಕದಲ್ಲಿದ್ದ ಇನ್ನೋರ್ವ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯ್ತುತಿದ್ದಾರೆ. ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು ೯೦ ಸಿಬ್ಬಂದಿಗಳ ಪೈಕಿ ಕೇವಲ ೩೦ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷಾ ಕಿಟ್ ಕೊರತೆಯಾಗಿದ್ದ ಹಿನ್ನೆಲೆಯಲ್ಲಿ ಇನ್ನುಳಿದ ಸಿಬ್ಬಂದಿ ಕೋವಿಡ್ ಪರೀಕ್ಷೆ ಯಾವಾಗ ಎಂಬ ಚಿಂತೆ ಪ್ರಾರಂಭವಾಗಿದೆ. ಜೊತೆಗೆ ಸಿಬ್ಬಂದಿ ಕ್ವಾರಂಟೈನ್‌ಗೂ ಮುಂದಾಗದ ಪೊಲೀಸ್ ಇಲಾಖೆ ನಡೆ ಆರಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss